ಉತ್ತರ ಪ್ರದೇಶದಲ್ಲಿ ನವೆಂಬರ್ 20ರಂದು ನಡೆಯಲಿರುವ ವಿಧಾನಸಭಾ ಉಪಚುನಾವಣೆಯು ”ಬಾಬಾಸಾಹೇಬ್ ಭೀಮ್ ರಾವ್ ಅಂಬೇಡ್ಕರ್” ಮತ್ತು “ಬಾಬಾ”ನನ್ನು ನಂಬುವವರ ನಡುವಿನ ಹೋರಾಟವಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಉಲ್ಲೇಖಿಸಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಹೇಳಿದ್ದಾರೆ. ಇದು ‘ಬಾಬಾ ಸಾಹೇಬ್
“ಇದು ಬಾಬಾ ಸಾಹೇಬರನ್ನು ನಂಬುವವರು ಮತ್ತು ‘ಬಾಬಾ’ರನ್ನು ನಂಬುವವರ ನಡುವಿನ ಹೋರಾಟವಾಗಿದೆ. ಒಂದು ಕಡೆ ಸಂವಿಧಾನವನ್ನು ರಚಿಸಿದವರು ಮತ್ತು ರಕ್ಷಿಸುವವರು ಮತ್ತೊಂದು ಕಡೆ, ಅದನ್ನು ನಾಶಪಡಿಸುವವರು” ಎಂದು ಅಖಿಲೇಶ್ ಯಾದವ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದು ‘ಬಾಬಾ ಸಾಹೇಬ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಇಲ್ಲಿಯವರೆಗೆ, ಸಂವಿಧಾನವು ‘ಹಿಂದುಳಿದ ವರ್ಗ, ದಲಿತ, ಮತ್ತು ಅಲ್ಪಸಂಖ್ಯಾತ(ಪಿಡಿಎ)’ರನ್ನು ರಕ್ಷಿಸಿದೆ; ಈಗ ಪಿಡಿಎ ಸಂವಿಧಾನವನ್ನು ರಕ್ಷಿಸುತ್ತದೆ! ಏಕತೆಯನ್ನು ಘೋಷಿಸಿ. ಜೈ ಸಂವಿಧಾನ, ಜೈ ಪಿಡಿಎ!,” ಎಂದು ಅವರು ಹೇಳಿದ್ದಾರೆ. ಅಖಿಲೇಶ್ ಅವರು ಲೋಕಸಭೆ ಚುನಾವಣೆಗೂ ಮುನ್ನ, ಪಿಡಿಎ ಅಂದರೆ ಪಿಚ್‌ಡೆ, ದಲಿತ, ಅಲ್ಪಸಂಖ್ಯಾಕ್ (ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ) ಎಂಬ ಘೋಷಣೆಯನ್ನು ರೂಪಿಸಿದ್ದರು.
ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಸ್ಥಾನಗಳಾದ ಕತೇಹಾರಿ (ಅಂಬೇಡ್ಕರ್ ನಗರ), ಕರ್ಹಾಲ್ (ಮೈನ್‌ಪುರಿ), ಮೀರಾಪುರ್ (ಮುಜಾಫರ್‌ನಗರ), ಘಾಜಿಯಾಬಾದ್, ಮಜವಾನ್ (ಮಿರ್ಜಾಪುರ), ಸಿಸಮಾವು (ಕಾನ್ಪುರ್ ನಗರ), ಖೈರ್ (ಅಲಿಗಢ), ಫುಲ್ಪುರ್ (ಪ್ರಯಾಗ್ರಾಜ್) ಮತ್ತು ಕುಂದರ್ಕಿ (ಮೊರಾದಾಬಾದ್) ಕ್ಷೇತ್ರಗಳಿಗೆ ನವೆಂಬರ್ 20 ರಂದು ಚುನಾವಣೆ ನಡೆಯಲಿದೆ.
ये बाबा साहेब को माननेवाले और ‘बाबा’ को माननेवालों के बीच की लड़ाई है।
एक तरफ़ संविधान को बनाने-बचानेवाले हैं; तो दूसरी तरफ़ संविधान को मिटानेवाले हैं।
अब तक संविधान ने पीडीए की रक्षा की है; अब पीडीए संविधान की रक्षा करेगा!
‘एकता’ का उद्घोष कीजिए
जय संविधान, जय पीडीए!#PDA… pic.twitter.com/Z1XrAheyHc— Akhilesh Yadav (@yadavakhilesh) November 18, 2024
ಕ್ರಿಮಿನಲ್ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದ ಎಸ್‌ಪಿ ಶಾಸಕ ಇರ್ಫಾನ್ ಸೋಲಂಕಿ ಅವರ ಅನರ್ಹತೆಯಿಂದಾಗಿ ಸಿಸಾಮೌ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಉಳಿದ ಎಂಟು ಕ್ಷೇತ್ರಗಳ ಅವರ ಶಾಸಕರು ಲೋಕಸಭೆಯ ಸಂಸದರಾಗಿ ಆಯ್ಕೆಯಾದ ಕಾರಣಕ್ಕೆ ಕ್ಷೇತ್ರಗಳು ತೆರವಾಗಿದ್ದವು.
2022 ರ ವಿಧಾನಸಭಾ ಚುನಾವಣೆಯಲ್ಲಿ ಸಿಶಾಮೌ, ಕತೇಹಾರಿ, ಕರ್ಹಾಲ್ ಮತ್ತು ಕುಂದರ್ಕಿ ಎಸ್‌ಪಿ ವಶದಲ್ಲಿದ್ದರೆ, ಬಿಜೆಪಿ ಫುಲ್ಪುರ್, ಗಾಜಿಯಾಬಾದ್, ಮಜ್ವಾನ್ ಮತ್ತು ಖೈರ್ ಅನ್ನು ಗೆದ್ದುಕೊಂಡಿತು. ಮೀರಾಪುರ ಕ್ಷೇತ್ರವನ್ನು ಆರ್‌ಎಲ್‌ಡಿ ಹೊಂದಿದ್ದು, ಅದು ಈಗ ಎನ್‌ಡಿಎ ಮೈತ್ರಿಯ ಮೂಲಕ ಬಿಜೆಪಿಯ ಮಿತ್ರಪಕ್ಷವಾಗಿದೆ.
ಅದಾಗ್ಯೂ, ಈ 9 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿಲ್ಲ. ಬದಲಾಗಿ ಇಂಡಿಯಾ ಮೈತ್ರಿಕೂಟದ ಪಕ್ಷವಾದ ಎಸ್‌ಪಿಯನ್ನು ಬೆಂಬಲಿಸುತ್ತಿದೆ. ಆದರೆ ಬಿಎಸ್‌ಪಿ ಎಲ್ಲಾ ಒಂಬತ್ತು ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ | ಗ್ರಾ.ಪಂ. ಸದಸ್ಯರು-ಅಧಿಕಾರಿಗಳಿಂದ ದಲಿತರ ಪ್ರದೇಶ ನಿರ್ಲಕ್ಷ್ಯ, ರಸ್ತೆಮೇಲೆ ಹರಿಯುತ್ತಿರುವ ಕೊಚ್ಚೆ ನೀರು


