ಬಿಜೆಪಿಯ ಕೌನ್ಸಿಲರ್ ಒಬ್ಬ ವಿವಾಹಿತ ಮಹಿಳೆಯೊಬ್ಬರಿಗೆ ವೋಟರ್ ಸ್ಲಿಪ್ ನೀಡುತ್ತೇನೆ ಎಂದು ಅವರ ನಂಬರ್ ಪಡೆದು, ನಂತರ ಅವರನ್ನು ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿರುವ ಘಟನೆ ಗುಜರಾತ್‌ನ ಆನಂದ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಯನ್ನು ಮುನ್ಸಿಪಾಲಿಟಿಯ ವಾರ್ಡ್ ನಂ. 6ರ ಬಿಜೆಪಿ ಕೌನ್ಸಿಲರ್ ದೀಪು ಗೋರ್ಧನ್‌ಭಾಯ್ ಪ್ರಜಾಪತಿ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಗುಜರಾತ್
ವೋಟರ್ ಸ್ಲಿಪ್ ನೀಡುವ ನೆಪದಲ್ಲಿ ಆರು ತಿಂಗಳ ಹಿಂದೆ ಅರೋಪಿ ಪ್ರಜಾಪತಿ ತನ್ನ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ನಂತರ ಫೋನ್ ಸಂಭಾಷಣೆಗಳ ರೆಕಾರ್ಡಿಂಗ್ ಇಟ್ಟು ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಆನಂದ್ ಟೌನ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪ್ರಕರಣ ದಾಖಲಾಗುತ್ತಿದ್ದಂತೆ ನಂತರ, ಪ್ರಜಾಪತಿ ನಾಪತ್ತೆಯಾಗಿನೆ. ಗುಜರಾತ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪೊಲೀಸರು ಆತನ ಸಹಚರರನ್ನು ವಿಚಾರಣೆಗೆ ಒಳಪಡಿಸಿದ್ದು, ಅವರಲ್ಲಿ ಕೆಲವರು ಸಂತ್ರಸ್ತೆಯ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಿಜೆಪಿ ಕೌನ್ಸಿಲರ್ ದೀಪುಭಾಯ್ ಗೋರ್ಧನಭಾಯ್ ಪ್ರಜಾಪತಿ ತನ್ನ ವೈಯಕ್ತಿಕ ಸಂಪರ್ಕ ವಿವರಗಳನ್ನು ಪಡೆಯಲು ಮತದಾರರ ಸಂಬಂಧಿತ ವಿಚಾರಣೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆನಂದ್ ನಗರದ ಸಂತ್ರಸ್ತ ವಿವಾಹಿತ ಮಹಿಳೆ ಆರೋಪಿಸಿದ್ದಾರೆ.
ಮಧ್ಯರಾತ್ರಿಯ ಸುಮಾರಿಗೆ, ಪ್ರಜಾಪತಿ ಮಹಿಳೆಯ ಮನೆಗೆ ತೆರಳಿ ಅವರ ಕುಟುಂಬಕ್ಕೆ ಬೆದರಿಕೆ ಹಾಕಿ ಅತ್ಯಾಚಾರವೆಸಗಿದ್ದಾಗಿ ಮಹಿಳೆ ಆರೋಪಿಸಿದ್ದಾರೆ. ಪತಿ ಮತ್ತು ಮಕ್ಕಳ ಬಗ್ಗೆಗಿನ ಭೀತಿಯಿಂದ ಮಹಿಳೆ ಆರಂಭದಲ್ಲಿ ಘಟನೆಯ ಬಗ್ಗೆ ಮೌನವಾಗಿದ್ದರು ಎಂದು ವರದಿ ಹೇಳಿದೆ. ರಾತ್ರಿ 10 ಗಂಟೆ ಸುಮಾರಿಗೆ ಮಹಿಳೆಯ ಪತಿ ಮತ್ತು ಮಕ್ಕಳು ಐಸ್ ಕ್ರೀಮ್ ಖರೀದಿಸಲು ಹೊರಟಿದ್ದಾಗ ಪ್ರಜಾಪತಿ ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಘಟನೆಯ ವೇಳೆ ಪತಿ ಹಿಂತಿರುಗಿ ಪ್ರಜಾಪತಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದು, ಗಲಾಟೆಗೆ ಕಾರಣವಾಗಿತ್ತು. ಈ ವೇಳೆ ನೆರೆಹೊರೆಯವರು ಸ್ಥಳಕ್ಕಾಗಮಿಸಿದ್ದರು. ನಂತರ ಪ್ರಜಾಪತಿಯ ಸಹೋದರರು ಮತ್ತು ಸಹಚರರು ಕೋಲು ಮತ್ತು ಪೈಪ್‌ಗಳಿಂದ ಸಂತ್ರಸ್ತೆಯ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಹಿಂಸಾತ್ಮಕ ಘರ್ಷಣೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದೆ.
“ನಾವು ಸಂತ್ರಸ್ತೆಯ ದೂರನ್ನು ದಾಖಲಿಸಿಕೊಂಡಿದ್ದೇವೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದೇವೆ. ಪ್ರಮುಖ ಆರೋಪಿ ದೀಪು ಪ್ರಜಾಪತಿ ತಲೆಮರೆಸಿಕೊಂಡಿದ್ದು, ಗಲಾಟೆಯಲ್ಲಿ ಭಾಗಿಯಾಗಿದ್ದ ಆತನ ಇಬ್ಬರು ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ” ಎಂದು ಆನಂದ್ ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿ.ಡಿ. ಝಾಲಾ ಹೇಳಿದ್ದಾರೆ.
ಅದಾಗ್ಯೂ, ಆರೋಪ ಕೇಳಿಬಂದ ಕೂಡಲೇ ಪ್ರಜಾಪತಿಯನ್ನು ಬಿಜೆಪಿ ಅಮಾನತು ಮಾಡಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ | ಗ್ರಾ.ಪಂ. ಸದಸ್ಯರು-ಅಧಿಕಾರಿಗಳಿಂದ ದಲಿತರ ಪ್ರದೇಶ ನಿರ್ಲಕ್ಷ್ಯ, ರಸ್ತೆಮೇಲೆ ಹರಿಯುತ್ತಿರುವ ಕೊಚ್ಚೆ ನೀರು


