ಜುಲೈ 5 ರಂದು ಹತ್ಯೆಗೀಡಾದ ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಕೆ. ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣದ ಎರಡನೇ ಆರೋಪಿ ಸಂಭವ್ ಸೆಂಥಿಲ್‌ನನ್ನು ಬಂಧಿಸಲು ತಮಿಳುನಾಡು ಪೊಲೀಸರು ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಿ ಸೆಂಥಿಲ್ ಪ್ರಸ್ತುತ ಥಾಯ್ಲೆಂಡ್‌ನಲ್ಲಿ ನೆಲೆಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆತನನ್ನು ಭಾರತಕ್ಕೆ ಕರೆತರಲು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಆರ್ಮ್‌ಸ್ಟ್ರಾಂಗ್ ಕೊಲೆ
ದೀರ್ಘಕಾಲದಿಂದ ವಿವಾದಗಳನ್ನು ಹೊಂದಿದ್ದ ಮೂರು ಪ್ರತಿಸ್ಪರ್ಧಿ ಗ್ಯಾಂಗ್‌ಗಳು ಆರ್ಮ್‌ಸ್ಟ್ರಾಂಗ್ ಅವರನ್ನು ಕೊಲೆ ಮಾಡಿದೆ ಎಂದು ಆರೋಪಿಸಲಾಗಿದೆ. ಅವರ ಕೊಲೆಗೆ ಸಂಬಂಧಿಸಿದಂತೆ ಸೆಂಥಿಲ್‌ನ ಸಹಚರರಾದ ಕೃಷ್ಣಕುಮಾರ್ ಮತ್ತು ಅಪ್ಪು ಕೂಡ ಪೊಲೀಸರಿಗೆ ಬೇಕಾಗಿದ್ದಾರೆ. ಆರ್ಮ್‌ಸ್ಟ್ರಾಂಗ್ ಕೊಲೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವ್ಯಾಪಾರಿ ಕುಟುಂಬದ ಕಾನೂನು ಪದವೀಧರನಾಗಿರುವ ಆರೋಪಿ ಸೆಂಥಿಲ್ ತಮಿಳುನಾಡಿನಲ್ಲಿ ಆರು ಕೊಲೆಗಳನ್ನು ಯೋಜಿಸಿ ಕಾರ್ಯಗತಗೊಳಿಸಿದ್ದ ಎಂದು ತಮಿಳುನಾಡು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ. ಸುಲಿಗೆ, ಹಿಂಸಾಚಾರ ಮತ್ತು ‘ಕಟ್ಟೆ’ ಪಂಚಾಯತ್‌ಗಳನ್ನು ನಿರ್ವಹಿಸುವುದು ಸೇರಿದಂತೆ ಹಲವು ಅಪರಾಧಗಳಲ್ಲಿ ಅವನು ಭಾಗಿಯಾಗಿದ್ದರೂ, ಈ ವರೆಗೆ ಆತ ಪೊಲೀಸ್ ಬಲೆಗೆ ಬಿದ್ದಿಲ್ಲ ಎಂದು ವರದಿಯಾಗಿದೆ.
ವಾಷರ್‌ಮೆನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸೆಂಥಿಲ್ ಅವರನ್ನು A+ ಹಿಸ್ಟರಿ ಶೀಟರ್ ಎಂದು ವರ್ಗೀಕರಿಸಲಾಗಿದೆ. ಸೆಂಥಿಲ್ ಅಪಾಯಕಾರಿ ಆರೋಪಿಯಾಗಿದ್ದು, ಆತನ ಚಲನವಲನವನ್ನು ನಿರ್ಬಂಧಿಸಲು ಪೊಲೀಸರು ಬ್ಯೂರೋ ಆಫ್ ಇಮಿಗ್ರೇಷನ್‌ಗೆ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಅನ್ನು ಸಹ ಸಲ್ಲಿಸಿದ್ದಾರೆ. ರೆಡ್ ಕಾರ್ನರ್ ನೋಟಿಸ್ ಅಂತರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳು ಸೆಂಥಿಲ್ ಅನ್ನು ಪತ್ತೆಹಚ್ಚಲು ಮತ್ತು ತಾತ್ಕಾಲಿಕವಾಗಿ ಬಂಧಿಸಲು ಅನುವು ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಚೆನ್ನೈ ಪೊಲೀಸ್ ಕಮಿಷನರ್ ಎಂ. ಅರುಣ್ ವಿಶೇಷ ತಂಡವನ್ನು ರಚಿಸಿದ್ದು, ಸೆಂಥಿಲ್ ಪತ್ತೆಗೆ ನಿರಂತರ ಶ್ರಮಿಸುತ್ತಿರುವುದಾಗಿ ಹೇಳಿದ್ದಾರೆ. ಹದಿನೇಳು ಪೊಲೀಸ್ ತಂಡಗಳು ಪ್ರಸ್ತುತ ಆರ್ಮ್‌ಸ್ಟ್ರಾಂಗ್ ಹತ್ಯೆಯನ್ನು ತನಿಖೆ ನಡೆಸುತ್ತಿವೆ, ಇದು ಇಲ್ಲಿಯವರೆಗೆ 27 ವ್ಯಕ್ತಿಗಳ ಬಂಧನ ನಡೆಸಲಾಗಿದೆ. ಇವರಲ್ಲಿ ಭಾರಿ ಕ್ರಿಮಿನಲ್‌ಗಳು, ರೌಡಿ ಶೀಟರ್‌ಗಳು ಮತ್ತು ಎಐಎಡಿಎಂಕೆ, ತಮಿಳು ಮಾನಿಲ ಕಾಂಗ್ರೆಸ್, ಬಿಜೆಪಿ ಮತ್ತು ಕಾಂಗ್ರೆಸ್‌ನಂತಹ ರಾಜಕೀಯ ಪಕ್ಷಗಳ ಸದಸ್ಯರು ಸೇರಿದ್ದಾರೆ ಎಂದು ವರದಿಯಾಗಿವೆ.
ಕೊಲೆಯಾಗಿ ಸಮಯ ಕಳೆದರೂ, ಆರೋಪಿ ಸೆಂಥಿಲ್‌ನನ್ನು ಹುಡುಕಲು ಪೊಲೀಸರು ಆತನ ಸುಮಾರು 20 ವರ್ಷಗಳಷ್ಟು ಹಳೆಯ ಪೋಟೋವನ್ನು ಅವಲಂಬಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ ವಿವರವಾದ 5,000 ಪುಟಗಳ ಚಾರ್ಜ್ ಶೀಟ್‌ನಲ್ಲಿ ಆರ್ಮ್‌ಸ್ಟ್ರಾಂಗ್ ಹತ್ಯೆ ಮಾಡಲು ಮೂರು ಗ್ಯಾಂಗ್‌ಗಳು ಸಹಕರಿಸಿವೆ ಎಂದು ಆರೋಪಿಸಿದೆ.
ಇದನ್ನೂ ಓದಿ: ದೆಹಲಿ: ಪ್ರಾಂಶುಪಾಲರಿಂದ ಜಾತಿ ನಿಂದನೆ, ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ; ಪ್ರತಿಭಟನೆ
ದೆಹಲಿ: ಪ್ರಾಂಶುಪಾಲರಿಂದ ಜಾತಿ ನಿಂದನೆ, ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ; ಪ್ರತಿಭಟನೆ


