ಆಧುನಿಕ ಕಾಲದಲ್ಲಿ ವಿಮಾನವನ್ನು ಕಂಡುಹಿಡಿಯುವ ಮೊದಲೇ, ವೈದಿಕಕಾಲದ ಋಷಿ ಭಾರದ್ವಾಜ ಅವರು ವಿಮಾನದ ಕಲ್ಪನೆಯನ್ನು ಮಾಡಿದ್ದರು ಎಂದು ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಸೋಮವಾರ ಹೇಳಿಕೊಂಡಿದ್ದಾರೆ. ಅವರು ಲಕ್ನೋದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಭಾಷಾ ವಿಶ್ವವಿದ್ಯಾಲಯದ 9 ನೇ ಘಟಿಕೋತ್ಸವದಲ್ಲಿ ಭಾಷಣ ಮಾಡುತ್ತಿದ್ದರು. ವೇದ ಕಾಲದಲ್ಲೆ
ವಿಮಾನದ ಕಲ್ಪನೆಯನ್ನು ಮೊದಲು ಪ್ರತಿಪಾದಿಸಿದ್ದು ವೈದಿಕಕಾಲದ ಋಷಿ ಭಾರದ್ವಾಜ್ ಅವರೇ ಹೊತು ರೈಟ್ ಸಹೋದರರಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. “ವಿದ್ಯಾರ್ಥಿಗಳು ತಮ್ಮ ಪೂರ್ವಜರು ಮಾಡಿದ ಅಪ್ರತಿಮ ಸಂಶೋಧನೆಗಳನ್ನು ಪ್ರಶಂಸಿಸಲು ಪ್ರಾಚೀನ ಭಾರತೀಯ ಪಠ್ಯಗಳನ್ನು ಅಧ್ಯಯನ ಮಾಡಬೇಕು” ಎಂದು ಅವರು ಸಲಹೆ ನೀಡಿದ್ದಾರೆ. ವೇದ ಕಾಲದಲ್ಲೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರಾಚೀನ ಭಾರತದ ಋಷಿಗಳು ಮತ್ತು ವಿದ್ವಾಂಸರು ಗಮನಾರ್ಹವಾದ ಆವಿಷ್ಕಾರಗಳನ್ನು ಮಾಡಿದ್ದು, ಅದು ಇಂದಿಗೂ ಜಗತ್ತಿಗೆ ಪ್ರಯೋಜನಕಾರಿಯಾಗಿವೆ ಎಂದು ಅವರು ಭಾರದ್ವಾಜ ಅವರ ಉದಾಹರಣೆಯನ್ನು ಉಲ್ಲೇಖಿಸಿ, “ಅವರು ವಿಮಾನದ ಕಲ್ಪನೆಯನ್ನು ಆಗಲೆ ಮಾಡಿದ್ದರು. ಆದರೆ ಅದರ ಆವಿಷ್ಕಾರದ ಶ್ರೇಯಸ್ಸು ಮತ್ತೊಂದು ರಾಷ್ಟ್ರಕ್ಕೆ ನೀಡಲಾಯಿತು. ಈಗ ಅದರ ಆವಿಷ್ಕಾರ ಮಾಡಿದ್ದು ರೈಟ್ ಸಹೋದರರು ಎಂದು ಗುರುತಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಡಿಸೆಂಬರ್ 17, 1903 ರಂದು ಆರ್ವಿಲ್ಲೆ ಮತ್ತು ವಿಲ್ಬರ್ ರೈಟ್ ಸಹೋದರರು ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಮೊದಲ ಸ್ವಯಂ ಚಾಲಿತ ವಿಮಾನವನ್ನು ಹಾರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅದಾಗ್ಯೂ, ಕೆಲವು ಬಿಜೆಪಿ ನಾಯಕರು ರಾಮಾಯಣದಲ್ಲಿ ವಿವರಿಸಿರುವ ‘ಪುಷ್ಪಕ ವಿಮಾನ’ದ ಬಗ್ಗೆ ಉಲ್ಲೇಖಿಸಿ, ವಿಮಾನದ ಪರಿಕಲ್ಪನೆಯನ್ನು ರಾಮಾಯಣ ಕಾಲದಲ್ಲೆ ಮಾಡಲಾಗಿದೆ ಎಂದು ವಾದಿಸುತ್ತಿದ್ದಾರೆ. ಅಲ್ಲದೆ, ಭಾರತದಲ್ಲಿ ಸುಮಾರು 7,000 ವರ್ಷಗಳ ಹಿಂದೆಯೆ ವಿಮಾನಗಳು ಅಸ್ತಿತ್ವದಲ್ಲಿದ್ದವು ಎಂದು ಅವರು ಪ್ರತಿಪಾದಿಸುತ್ತಿದ್ದಾರೆ.
ರಾಂಪುರ ರಝಾ ಗ್ರಂಥಾಲಯವನ್ನು ಉಲ್ಲೇಖಿಸಿದ ಅವರು, ಪ್ರಾಚೀನ ಪುಸ್ತಕಗಳು ಮತ್ತು ಕಲಾಕೃತಿಗಳ ಅಮೂಲ್ಯವಾದ ಸಂಗ್ರಹವನ್ನು ಎತ್ತಿ ತೋರಿಸಿದ್ದಾರೆ. ಅವುಗಳಲ್ಲಿ ಕೆಲವು ಇಂದಿಗೂ ರೋಮಾಂಚಕವಾಗಿವೆ ಎಂದು ಅವರು ಹೇಳಿದ್ದಾರೆ. “ನೈಸರ್ಗಿಕವಾಗಿ ಸಸ್ಯಗಳಿಂದ ಪಡೆದ ಈ ಚಿತ್ರಗಳಲ್ಲಿ ಬಳಸಲಾದ ಬಣ್ಣಗಳು ಇಷ್ಟು ಕಾಲವಾಗಿಯೂ ಹದಗೆಟ್ಟಿಲ್ಲ” ಎಂದು ರಾಜಪಾಲರಾದ ಆನಂದಿ ಹೇಳಿದ್ದಾರೆ.
ಬುದ್ಧನ ನಾಡಾದ ಭಾರತವು ಯಾವಾಗಲೂ ಸಂಘರ್ಷಕ್ಕಿಂತ ಶಾಂತಿಯ ಮಾರ್ಗವನ್ನು ಆರಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಪ್ರಧಾನ ಮಂತ್ರಿಯ ಕಾರಣಕ್ಕೆ 1.4 ಶತಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತದ ಘನತೆ ಜಾಗತಿಕ ವೇದಿಕೆಯಲ್ಲಿ ಹೆಚ್ಚಾಗಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಆರ್ಮ್‌ಸ್ಟ್ರಾಂಗ್ ಕೊಲೆ ಪ್ರಕರಣ | ಆರೋಪಿಗಳ ಬಂಧನದ ಪ್ರಯತ್ನಗಳಲ್ಲಿ ತಮಿಳುನಾಡು ಪೊಲೀಸ್
ಆರ್ಮ್‌ಸ್ಟ್ರಾಂಗ್ ಕೊಲೆ ಪ್ರಕರಣ | ಆರೋಪಿಗಳ ಬಂಧನದ ಪ್ರಯತ್ನಗಳಲ್ಲಿ ತಮಿಳುನಾಡು ಪೊಲೀಸ್


