ರಾಜ್ಯದಲ್ಲಿ ಖರೀದಿಸುವ ಎಲ್ಲಾ ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕಕ್ಕೆ 100% ವಿನಾಯಿತಿಯನ್ನು ತೆಲಂಗಾಣ ಸರ್ಕಾರವು ನವೆಂಬರ್ 17 ಭಾನುವಾರ ಘೋಷಿಸಿದೆ. ಈ ನೀತಿಯು ಡಿಸೆಂಬರ್ 31, 2026 ರವರೆಗೆ ಎರಡು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ನಾಲ್ಕು ಚಕ್ರಗಳು, ವಾಣಿಜ್ಯ ಪ್ರಯಾಣಿಕ ವಾಹನಗಳು (ಟ್ಯಾಕ್ಸಿಗಳು ಮತ್ತು ಆಟೋ ರಿಕ್ಷಾಗಳು ಸೇರಿದಂತೆ), ಎಲೆಕ್ಟ್ರಿಕ್ ಲೈಟ್‌ವೈಟ್ ಸರಕು ವಾಹಕಗಳು, ಟ್ರ್ಯಾಕ್ಟರ್‌ಗಳು ಮತ್ತು ಬಸ್‌ಗಳಿಗೆ ಇದು ಅನ್ವಯಿಸುತ್ತದೆ.
ತೆಲಂಗಾಣದ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್ ಅವರು ಈ ಘೋಷಣೆ ಮಾಡಿದ್ದು, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಆಗುತ್ತಿರುವ ವಾಯು ಮಾಲಿನ್ಯದ ಸಮಸ್ಯೆಯು ಹೈದರಾಬಾದ್‌ನಲ್ಲಿ ಕೂಡಾ ಆಗದಿರಲಿ ಎಂಬ ಉದ್ದೇಶಕ್ಕಾಗಿ ಈ ಉಪಕ್ರಮ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದ್ದಾರೆ. ಸಾರ್ವಜನಿಕರಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಮಹತ್ವವನ್ನು ಸಚಿವರು ಒತ್ತಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬಳಕೆದಾರರ ಅನುಕೂಲಕ್ಕಾಗಿ ಚಾರ್ಜಿಂಗ್ ಸ್ಟೇಷನ್‌ಗಳ ದೃಢವಾದ ಜಾಲವನ್ನು ಸ್ಥಾಪಿಸಲು ಸರ್ಕಾರವು ಎಲೆಕ್ಟ್ರಿಕ್ ವಾಹನ ತಯಾರಕರನ್ನು ಒತ್ತಾಯಿಸಿದೆ. ಈ ವಿನಾಯಿತಿಯು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನಿರ್ವಹಿಸಲ್ಪಡುವ ಎಲೆಕ್ಟ್ರಿಕ್ ವಾಹನಗಳು ಮತ್ತು ತಮ್ಮ ಉದ್ಯೋಗಿಗಳನ್ನು ಸಾಗಿಸಲು ಉದ್ಯಮಗಳ ಒಡೆತನದ ಬಸ್‌ಗಳಿಗೆ (ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದನ್ನು ಹೊರತುಪಡಿಸಿ) ಅನ್ವಯಿಸುತ್ತದೆ.
ದೆಹಲಿ ಮತ್ತು ಗುಜರಾತ್ ನಂತರ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಎನರ್ಜಿ ಸ್ಟೋರೇಜ್ ನೀತಿಯನ್ನು ಪ್ರಾರಂಭಿಸಿದ ದೇಶದ ಮೂರನೇ ರಾಜ್ಯವಾಗಿದೆ ತೆಲಂಗಾಣ 2020 ರಲ್ಲಿ ಹೊರಹೊಮ್ಮಿತ್ತು. ರಾಜ್ಯವು ಎಲೆಕ್ಟ್ರಿಕ್ ವಾಹನಗಳು, ಶೇಖರಣಾ ವ್ಯವಸ್ಥೆಗಳು ಮತ್ತು ಘಟಕಗಳ ತಯಾರಿಕೆಯ ಕೇಂದ್ರವಾಗಿದೆ. ರಾಜ್ಯ ಸರ್ಕಾರವು ಈ ಕ್ಷೇತ್ರದಲ್ಲಿ 4ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆಗಳನ್ನು ಆಕರ್ಷಿಸಲು ಮತ್ತು 2030 ರ ವೇಳೆಗೆ ಈ ವಲಯದಲ್ಲಿ 1,20,000 ಉದ್ಯೋಗಗಳನ್ನು ಸೃಷ್ಟಿಸಲು ಬಯಸಿದೆ.
ಇದನ್ನೂ ಓದಿ: ಮಣಿಪುರದ ಪ್ರಸ್ತುತ ಪರಿಸ್ಥಿತಿ ಕುರಿತು ರಾಷ್ಟ್ರಪತಿಗಳಿಗೆ ಖರ್ಗೆ ಪತ್ರ ಬರೆಯುತ್ತಾರೆ: ಜೈರಾಮ್ ರಮೇಶ್
ಮಣಿಪುರದ ಪ್ರಸ್ತುತ ಪರಿಸ್ಥಿತಿ ಕುರಿತು ರಾಷ್ಟ್ರಪತಿಗಳಿಗೆ ಖರ್ಗೆ ಪತ್ರ ಬರೆಯುತ್ತಾರೆ: ಜೈರಾಮ್ ರಮೇಶ್


