ಮಹಾರಾಷ್ಟ್ರದಲ್ಲಿ ಚುನಾವಣೆಯ ನಡುವೆ ಬಿಟ್ ಕಾಯಿನ್ ಸದ್ದು ಮಾಡಿದೆ. ಪ್ರತಿಪಕ್ಷಗಳ ನಾಯಕರಾದ ಕಾಂಗ್ರೆಸ್‌ನ ನಾನಾ ಪಟೋಲೆ ಮತ್ತು ಬಿಜೆಪಿಯ ಸುಪ್ರಿಯಾ ಸುಳೆ ಅವರು ಚುನಾವಣೆಗೆ ಹಣ ನೀಡಲು ಅಕ್ರಮವಾಗಿ ಬಿಟ್‌ಕಾಯಿನ್‌ಗಳನ್ನು ಬಳಸಿರುವುದಾಗಿ ಬಿಜೆಪಿ ಆರೋಪಿಸಿದೆ.
ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನೂ ಗುರಿಯಾಗಿಸಿದ್ದಾರೆ. ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸುವಂತೆ ಸವಾಲು ಹಾಕಿದ್ದಾರೆ.
ಚುನಾವಣೆಯ ಹಿನ್ನೆಲೆ ಬಿಜೆಪಿ ತಮ್ಮ ವಿರುದ್ದ ಷಡ್ಯಂತ್ರ ಮಾಡುತ್ತಿದೆ ಎಂಬ ಪ್ರತಿಪಕ್ಷ ನಾಯಕರ ಆರೋಪಗಳನ್ನು ಅಲ್ಲಗಳೆದಿರುವ ಸಂಬಿತ್ ಪಾತ್ರ, “ಶಂಕಿತ ಕ್ರಿಪ್ಟೋ ಕರೆನ್ಸಿ ವಂಚನೆ ವರ್ಷಗಳ ಹಿಂದೆಯೇ ನಡೆದಿದೆ. ಪ್ರತಿಪಕ್ಷಗಳ ಒಕ್ಕೂಟ ಈ ಹಿಂದಿನ ಚುನಾವಣೆಯಲ್ಲೂ ಅದರ ಹಣ ಬಳಸಿದೆ” ಎಂದಿದ್ದಾರೆ. ಈ ಹಗರಣದಲ್ಲಿ ಇದುವರೆಗೆ ಒಳಗೊಂಡಿರುವ ಹಣ 235 ಕೋಟಿ ರೂ. ಎಂದು ಸಂಬಿತ್ ಪಾತ್ರ ಹೇಳಿದ್ದಾರೆ.
ಸುಪ್ರಿಯಾ ಸುಳೆ ತನ್ನ ವಿರುದ್ದದ ಆರೋಪಗಳನ್ನು ನಿರಾಕರಿಸಿದ್ದು, ಅವರ ಧ್ವನಿಯಲ್ಲಿರುವ ಆಡಿಯೋ ನಕಲಿ ಎಂದಿದ್ದಾರೆ. ಚುನಾವಣಾ ಆಯೋಗ ಮತ್ತು ಮಹಾರಾಷ್ಟ್ರ ಪೊಲೀಸರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
“ಅಮಾಯಕ ಮತದಾರರನ್ನು ಕುತಂತ್ರ ಮೂಲಕ ಸೆಳೆಯಲು ಸುಳ್ಳು ಮಾಹಿತಿಯನ್ನು ಹರಡುತ್ತಿರುವುದು ಗೊತ್ತಿರುವ ವಿಷಯ” ಎಂದು ಸುಳೆ ಹೇಳಿದ್ದಾರೆ.
ಕ್ರಿಪ್ಟೋ ಕರೆನ್ಸಿ ಟ್ರೇಡ್‌ನಲ್ಲಿ ಭಾಗಿಯಾಗಿರುವ ಗೌರವ್ ಮೆಹ್ತಾ ಎಂಬ ವ್ಯಕ್ತಿ ಪ್ರತಿಪಕ್ಷ ನಾಯಕರಿಗೆ ಸಹಾಯ ಮಾಡಲು ಬಿಟ್‌ಕಾಯಿನ್‌ಗಳನ್ನು ಎನ್‌ಕ್ಯಾಶ್ ಮಾಡಿದ ನಂತರ ತನ್ನ ಜೀವಕ್ಕೆ ಅಪಾಯದ ಭಯದಿಂದ ಸಾರ್ವಜನಿಕವಾಗಿ ಹೋಗಲು ನಿರ್ಧರಿಸಿದ್ದಾರೆ. ಈ ಮೂಲಕ ಈ ವಿಷಯ ಬೆಳಕಿಗೆ ಬಂದಿದೆ ಎಂದು ಸಂಬಿತ್ ಪಾತ್ರಾ ಆರೋಪಿಸಿದ್ದಾರೆ.
ಈಗ ನಡೆದಿರುವ ಹಗರಣದ ಮೂಲ 2018ರಲ್ಲಿ ನಡೆದ ಕ್ರಿಪ್ಟೋ ಕರೆನ್ಸಿ ವಂಚನೆಗೆ ಸಂಬಂಧಿಸಿದೆ. ಈ ಹಿಂದೆ ಮಾಜಿ ಐಪಿಎಸ್ ಅಧಿಕಾರಿ ರವೀಂದ್ರನಾಥ್ ಪಾಟೀಲ್ ತನಿಖೆಗೆ ಸಹಾಯ ಮಾಡಲು ಕ್ರಿಪ್ಟೋ ತಜ್ಞರಾಗಿ ಹೋಗಿದ್ದರು. ಬಳಿಕ ಅವರು ಕ್ರಿಪ್ಟೋ ಕರೆನ್ಸಿ ವ್ಯಾಲೆಟ್ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಬಂಧಿತರಾದರು ಎಂದು ಹೇಳಿದ್ದಾರೆ.
ಪಾಟೀಲ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ ಪಾತ್ರಾ, ವ್ಯಾಲೆಟ್ ನಾಪತ್ತೆ ಪ್ರಕರಣದಲ್ಲಿ ಇತರ ಇಬ್ಬರು ಐಪಿಎಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಮೆಹ್ತಾ ಅವರು ಪಾಟೀಲ್ ವಿರುದ್ಧ ಸಾಕ್ಷ್ಯವನ್ನು ನೀಡಿದ್ದಾರೆ. ಸುಳೆ ಮತ್ತು ಪಟೋಲೆ ಅವರ ಧ್ವನಿ ದಾಖಲೆಗಳನ್ನು ಹಂಚಿಕೊಂಡಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ನಾನಾ ಪಟೋಲೆ ತನ್ನ ವಿರುದ್ದ ಆರೋಪಗಳನ್ನು ಅಲ್ಲಗಳೆದಿದ್ದು, “ರಾಜ್ಯ ಚುನಾವಣೆಯ ಮೇಲೆ ಪ್ರಭಾವ ಬೀರಲು ಬಿಟ್‌ಕಾಯಿನ್ ದುರುಪಯೋಗದ ಈ ಆರೋಪ ಹೊರಿಸಲಾಗಿದೆ. ನನ್ನ ವಿರುದ್ದದ ಸುಳ್ಳಾರೋಪದ ವಿರುದ್ದ ಕಾನೂನು ಹೋರಾಟ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
ಭಂಡಾರಾ ಜಿಲ್ಲೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಟೋಲೆ, “ತಾನೊಬ್ಬ ರೈತ, ಬಿಟ್‌ಕಾಯಿನ್‌ಗೆ ಯಾವುದೇ ಸಂಬಂಧವಿಲ್ಲ” ಎಂದಿದ್ದಾರೆ.
ರಾಜ್ಯ ಚುನಾವಣೆಗಾಗಿ ಪ್ರತಿಪಕ್ಷ ನಾಯಕರು ಬಿಟ್‌ಕಾಯಿನ್ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮಂಗಳವಾರ ಸುಪ್ರಿಯಾ ಸುಳೆ ಮತ್ತು ನಾನಾ ಪಟೋಲೆ ಅವರದ್ದು ಎನ್ನಲಾದ ಆಡಿಯೋಗಳನ್ನು ಬಿಡುಗಡೆ ಮಾಡಿದೆ.
ಇಬ್ಬರು ಪ್ರತಿಪಕ್ಷ ನಾಯಕರಿಗೆ ಸೇರಿದ್ದು ಎನ್ನಲಾದ ಆಡಿಯೋಗಳನ್ನು ಬಿಡುಗಡೆ ಮಾಡಿರುವ ಬಿಜೆಪಿ ನಾಯಕ ಸುಧಾಂಶು ತ್ರಿವೇದಿ, “ಎಂವಿಎ ತನ್ನ ಸೋಲನ್ನು ಗೋಡೆಯ ಮೇಲಿನ ಬರಹದಂತೆ ನೋಡುತ್ತಿದೆ” ಎಂದಿದ್ದಾರೆ.
ಇದನ್ನೂ ಓದಿ | FACT CHECK : ಮುಂಬೈ ಸಿದ್ದಿ ವಿನಾಯಕ ದೇವಸ್ಥಾನದ ಜಾಗ ತನ್ನದೆಂದ ವಕ್ಫ್ ಬೋರ್ಡ್..ವೈರಲ್ ಸುದ್ದಿಯ ಅಸಲಿಯತ್ತೇನು?


