ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮೈತ್ರಿಯಾದ ಮಹಾ ವಿಕಾಸ್ ಅಘಾಡಿ (ಎಂವಿಎ)ಯು ಒಟ್ಟು 160 ರಿಂದ 165 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಸರ್ಕಾರವನ್ನು ರಚಿಸಲಿದೆ ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಗುರುವಾರ ಹೇಳಿದ್ದಾರೆ. ಅದಾಗ್ಯೂ, ಎಕ್ಸಿಟ್ ಪೋಲ್‌ಗಳು ಆಡಳಿತರೂಢ ಮಹಾಯುತಿ ರಾಜ್ಯದಲ್ಲಿ ಗೆಲ್ಲಲಿವೆ ಎಂದು ಸೂಚಿಸಿವೆ. ಎಂವಿಎ 160-165
ಶನಿವಾರ ನಡೆಯಲಿರುವ ಮತ ಎಣಿಕೆಗೆ ಮುನ್ನ ಎಂವಿಎ ನಾಯಕರು ಗುರುವಾರ ಸಭೆ ನಡೆಸಲಿದ್ದಾರೆ ಎಂದು ರಾಜ್ಯಸಭಾ ಸಂಸದರೂ ಆಗಿರುವ ಸಂಜಯ್ ರಾವತ್ ಹೇಳಿದ್ದಾರೆ. ಬುಧವಾರ ಮತದಾನ ಮುಗಿದ ತಕ್ಷಣವೆ ಪ್ರಕಟವಾಗಿದ್ದ ಎಕ್ಸಿಟ್ ಪೋಲ್‌ಗಳು ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಬಹುಮತ ಸಿಗಲಿದೆ ಎಂದು ಸೂಚಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನಾವು ಮತ್ತು ನಮ್ಮ ಮಿತ್ರಪಕ್ಷಗಳಾದ ಪಿಡಬ್ಲ್ಯೂಪಿ, ಸಮಾಜವಾದಿ ಪಕ್ಷ, ಎಡಪಕ್ಷಗಳು ಸೇರಿದಂತೆ ಸಣ್ಣ ಪಕ್ಷಗಳು ಬಹುಮತದ ಗಡಿ ದಾಟುತ್ತಿವೆ. ನಾವು 160-165 ಸ್ಥಾನಗಳನ್ನು ಗೆಲ್ಲುತ್ತೇವೆ. ರಾಜ್ಯದಲ್ಲಿ ಸ್ಥಿರ ಸರ್ಕಾರ ಇರುತ್ತದೆ. ನಾನು ಅದನ್ನು ಅತ್ಯಂತ ಆತ್ಮವಿಶ್ವಾಸದಿಂದ ಹೇಳಬಲ್ಲೆ” ಎಂದು ಸಂಜಯತ್ ರಾವತ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಎಂವಿಎ 160-165
ಮಹಾ ವಿಕಾಸ್ ಅಘಾಡಿಯಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT), ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ NCP (SP) ಪಕ್ಷಗಳು ಇವೆ. ಆಡಳಿತಾರೂಢ ಮಹಾಯುತಿ ಮೈತ್ರಿಯಲ್ಲಿ ಬಿಜೆಪಿ, ಸಿಎಂ ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಎನ್‌ಸಿಪಿ ಪಕ್ಷಗಳು ಇವೆ.
ವಿರೋಧ ಪಕ್ಷದ MVA ಒಕ್ಕೂಟವು 2024 ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಉತ್ತಮ ಪ್ರದರ್ಶನವನ್ನು ಮಾಡಿತ್ತು. ಇದರ ವಿರುದ್ಧವಾಗಿ ಮಹಾಯುತಿ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಳ್ಳಲು ಭಾರಿ ಹೋರಾಟ ಮಾಡುತ್ತಿದೆ.
2019 ರ ವಿಧಾನಸಭಾ ಚುನಾವಣೆಯಲ್ಲಿ 61.74% ಮತದಾನವಾಗಿತ್ತು, ಆದರೆ ಬುಧವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಂದಾಜು 65% ದಷ್ಟು ಮತದಾನವಾಗಿದೆ ಎಂದು ತಾತ್ಕಾಲಿಕ ಅಂಕಿ ಅಂಶಗಳು ಹೇಳಿವೆ.


