ಶಂಕಿತ ಕುಕಿ ಉಗ್ರಗಾಮಿಗಳ ವಿರುದ್ಧ ಕೇಂದ್ರ ಸರ್ಕಾರವು “ಸಾಮೂಹಿಕ ಕಾರ್ಯಾಚರಣೆ” ಪ್ರಾರಂಭಿಸಬೇಕೆಂದು ಒತ್ತಾಯಿಸಿ ಮಣಿಪುರದ ಆಡಳಿತಾರೂಢ ಎನ್‌ಡಿಎ ಶಾಸಕರು ಅಂಗೀಕರಿಸಿದ ನಿರ್ಣಯವು “ವಿಭಜಕ, ಏಕಪಕ್ಷೀಯ ಮತ್ತು ಕೋಮುವಾದ” ಆಗಿದೆ ಎಂದು ಕುಕಿ-ಹ್ಮಾರ್-ಜೋಮಿ ಬುಡಕಟ್ಟು ಸಮುದಾಯಗಳ ಹತ್ತು ಶಾಸಕರು ಹೇಳಿದ್ದಾರೆ. ಈ ಹತ್ತು ಶಾಸಕರಲ್ಲಿ 7 ಮಂದಿ ಬಿಜೆಪಿ ಪಕ್ಷದವರಾಗಿದ್ದು, ಒಬ್ಬರು ಪಕ್ಷೇತರ ಶಾಸಕ ಮತ್ತು ಇಬ್ಬರು ಕುಕಿ ಪೀಪಲ್ಸ್ ಅಲೈಯನ್ಸ್ ಶಾಸಕರಾಗಿದ್ದಾರೆ. ಮಣಿಪುರ
ಕೇವಲ ಒಂದು ಸಮುದಾಯದ ವಿರುದ್ಧ ಸಾಮೂಹಿಕ ಕಾರ್ಯಾಚರಣೆಯನ್ನು ಪ್ರಾರಂಭಿಸುವುದು ಪಕ್ಷಪಾತವಾಗಿದೆ ಎಂದು ಈ ಶಾಸಕರು ಹೇಳಿದ್ದಾರೆ. “ಎಲ್ಲಾ ಬಂಡುಕೋರ ಗುಂಪುಗಳಿಂದ ಎಲ್ಲಾ ಅಕ್ರಮ ಶಸ್ತ್ರಾಸ್ತ್ರಗಳನ್ನು ಮರುಪಡೆಯಲು ರಾಜ್ಯದಾದ್ಯಂತ ಸಾಮೂಹಿಕ ಕಾರ್ಯಾಚರಣೆಗಳನ್ನು ನಡೆಸಬೇಕು” ಎಂದು ಶಾಸಕರು ಹೇಳಿದ್ದಾರೆ. ಮಣಿಪುರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
10 ಮಂದಿ ಶಾಸಕರ ಹೇಳಿಕೆಗೂ ಒಂದು ದಿನ ಮುಂಚಿತವಾಗಿ, ನವೆಂಬರ್ 18 ರಂದು, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನೇತೃತ್ವದ 28 ಎನ್‌ಡಿಎ ಶಾಸಕರು ನವೆಂಬರ್ 11 ರಂದು ಜಿರಿಬಾಮ್‌ನಲ್ಲಿ ಆರು ಮೈತೇಯಿ ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿ ಹತ್ಯೆಗೈದ ಶಂಕಿತ ಕುಕಿ ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ಣಯವನ್ನು ಅಂಗೀಕರಿಸಿದ್ದರು. ಈ ನಿರ್ಣಯದಲ್ಲಿ, ಏಳು ದಿನಗಳೊಳಗೆ ಶಂಕಿತ ಉಗ್ರರನ್ನು “ಕಾನೂನುಬಾಹಿರ ಸಂಘಟನೆ” ಎಂದು ಘೋಷಿಸುವಂತೆ ಕೇಂದ್ರವನ್ನು ಒತ್ತಾಯಿಸಲಾಗಿದೆ.
ರಾಜ್ಯದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಕಾರಣ ರಾಜ್ಯದ ಐದು ಕಣಿವೆ ಜಿಲ್ಲೆಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯಿದೆ (AFSPA)ಯನ್ನು ಜಾರಿಗೊಳಿಸಿರುವುದನ್ನು ಪರಿಶೀಲಿಸುವಂತೆ ಎನ್‌ಡಿಎ ಶಾಸಕರು ಒತ್ತಾಯಿಸಿದ್ದರು. “ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆ” ಗಾಗಿ ಶೋಧನೆ ನಡೆಸಲು, ಜನರನ್ನು ಬಂಧಿಸಲು ಮತ್ತು ಗುಂಡಿನ ದಾಳಿ ನಡೆಸಲು ಸೇನಾ ಸಿಬ್ಬಂದಿಗೆ AFSPA ಕಾಯಿದೆಯು ಅಧಿಕಾರವನ್ನು ನೀಡುತ್ತದೆ. ಒಂದು ವೇಳೆ ಈ ದಾಳಿಯಲ್ಲಿ ವ್ಯಕ್ತಿಯು ಮೃತಪಟ್ಟರೆ ಕಾಯಿದೆ ಸೇನಾ ಸಿಬ್ಬಂದಿಗೆ ರಕ್ಷಣೆ ನೀಡುತ್ತದೆ.
ಮುಖ್ಯಮಂತ್ರಿ ಬಿರೇನ್ ನೇತೃತ್ವದ ಎನ್‌ಡಿಎ ಶಾಸಕರ ಈ ನಿರ್ಣಯವನ್ನು ಕುಕಿ-ಹ್ಮಾರ್-ಝೋಮಿ ಸಮುದಾಯದ 10 ಶಾಸಕರು ವಿರೋಧಿಸಿದ್ದು, “ಏಕಪಕ್ಷೀಯವಾಗಿ ರಾಜ್ಯ ಸರ್ಕಾರವು ತಮಗೆ ಅನುಕೂಲಕರವಾಗಿ ಒಂದು ಬುಡಕಟ್ಟು ಸಮುದಾಯದ ಹಕ್ಕುಗಳನ್ನು ನಿಗ್ರಹಿಸುವ ಮತ್ತು ಮೊಟಕುಗೊಳಿಸುವಲ್ಲಿ ಜಿರಿಬಾಮ್ ಘಟನೆಯ ಅನಗತ್ಯ ಲಾಭವನ್ನು ಪಡೆಯುತ್ತಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಬೆದರಿಸುವ ಮಟ್ಟಕ್ಕೂ ಧೈರ್ಯಶಾಲಿಯಾಗಿ ವರ್ತಿಸಿದೆ” ಎಂದು ಅವರು ಆರೋಪಿಸಿದ್ದಾರೆ.
ಇತ್ತೀಚಿನ ಮೂರು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ಹಸ್ತಾಂತರಿಸುವಂತೆ ಎನ್‌ಡಿಎ ಶಾಸಕರ ನಿರ್ಣಯವನ್ನು ಉಲ್ಲೇಖಿಸಿರುವ ಕುಕಿ-ಹ್ಮಾರ್-ಝೋಮಿ ಶಾಸಕರು, 2023ರ ಮೇ ತಿಂಗಳಲ್ಲಿ ಮೈತೇಯಿ ಮತ್ತು ಕುಕಿ-ಜೋ-ಹ್ಮಾರ್‌ಗಳ ನಡುವೆ ಘರ್ಷಣೆಗಳು ಭುಗಿಲೆದ್ದ ನಂತರ ನಡೆದ ಎಲ್ಲಾ ನಾಗರಿಕ ಹತ್ಯೆಗಳ ಪ್ರಕರಣಗಳನ್ನು ಎನ್‌ಐಎಗೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದಾರೆ.
2023ರ ಮೇ ತಿಂಗಳಲ್ಲಿ ಮೈತೇಯಿ ಮತ್ತು ಕುಕಿ-ಜೊ-ಹ್ಮಾರ್ ಸಮುದಾಯಗಳ ನಡುವೆ ಘರ್ಷಣೆಗಳು ಪ್ರಾರಂಭವಾದಾಗಿನಿಂದ ಕನಿಷ್ಠ 255 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 59,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ನವೆಂಬರ್ 14 ರಂದು, ಜನಾಂಗೀಯ ಹಿಂಸಾಚಾರದ ಉಲ್ಬಣದ ನಂತರ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ AFSPA ಕಾಯಿದೆಯನ್ನು ಜಾರಿ ಮಾಡಲಾಗಿದೆ. ಮಾಡಲಾಗಿದೆ. ಮಾಡಲಾಗಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ‘ಜಿರಿಬಾಮ್ ಎನ್‌ಕೌಂಟರ್‌ನಲ್ಲಿ ಹತರಾದವರು ಹುತಾತ್ಮರು’ ಎಂದು ಪ್ರತಿಪಾದಿಸಿದ ಕುಕಿ ಬಿಜೆಪಿ ಶಾಸಕ
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ‘ಜಿರಿಬಾಮ್ ಎನ್‌ಕೌಂಟರ್‌ನಲ್ಲಿ ಹತರಾದವರು ಹುತಾತ್ಮರು’ ಎಂದು ಪ್ರತಿಪಾದಿಸಿದ ಕುಕಿ ಬಿಜೆಪಿ ಶಾಸಕ
ಮಣಿಪುರ ಹಿಂಸಾಚಾರ: ‘ಜಿರಿಬಾಮ್ ಎನ್‌ಕೌಂಟರ್‌ನಲ್ಲಿ ಹತರಾದವರು ಹುತಾತ್ಮರು’ ಎಂದು ಪ್ರತಿಪಾದಿಸಿದ ಕುಕಿ ಬಿಜೆಪಿ ಶಾಸಕ


