ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷವು ತನ್ನ 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕಾಣಿಸಿಕೊಂಡ ಆರು ಜನರು ಪಕ್ಷಾಂತರವಾಗಿ ಎಎಪಿಗೆ ಸೇರಿದ ನಾಯಕರಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಮೂವರು ಬಿಜೆಪಿಯಿಂದ ಪಕ್ಷಾಂತರ ಆಗಿದವರಾಗಿದ್ದು, ಮೂವರು ಕಾಂಗ್ರೆಸ್‌ನಿಂದ ಎಎಪಿಗೆ ಸೇರಿದ ನಾಯಕರಾಗಿದ್ದಾರೆ. 2025ರ ದೆಹಲಿ ವಿಧಾನಸಭೆ
ಬಿಜೆಪಿಯ ಮಾಜಿ ಶಾಸಕ ಬ್ರಹ್ಮ್ ಸಿಂಗ್ ತನ್ವಾರ್ ಅವರು ಛತ್ತರ್‌ಪುರದಿಂದ ಸ್ಪರ್ಧಿಸಲಿದ್ದು, ಕಿರಾರಿಯಿಂದ ಬಿಜೆಪಿಯ ಮಾಜಿ ಶಾಸಕ ಅನಿಲ್ ಝಾ ಅವರು ಎಎಪಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಘೋಷಿಸಿದೆ. ಬಿಜೆಪಿಯ ಮಾಜಿ ನಾಯಕ ಮತ್ತು ಎರಡು ಬಾರಿ ಕೌನ್ಸಿಲರ್ ಆಗಿರುವ ಬಿ.ಬಿ. ತ್ಯಾಗಿ ಅವರು ಲಕ್ಷ್ಮಿ ನಗರದಿಂದ ಆಮ್ ಆದ್ಮಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ನಾಯಕ ಮತೀನ್ ಅಹ್ಮದ್ ಅವರ ಪುತ್ರ ಚೌಧರಿ ಜುಬೇರ್ ಅಹ್ಮದ್ ಅವರು ಸೀಲಂಪುರದಿಂದ ಸ್ಪರ್ಧಿಸುತ್ತಿರುವುದಾಗಿ ಎಎಪಿ ಘೋಷಿಸಿದೆ. ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿರುವ ವೀರ್ ಸಿಂಗ್ ಧಿಂಗನ್ ಅವರನ್ನು ಎಎಪಿ ಸೀಮಾಪುರಿಯಿಂದ ಟಿಕೆಟ್ ನೀಡಿದ್ದು, ಈ ವರ್ಷವಷ್ಟೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡ ಕಾಂಗ್ರೆಸ್ ಮಾಜಿ ಶಾಸಕ ಸೋಮೇಶ್ ಶೌಕೀನ್ ಮಟಿಯಾಲದಿಂದ ಸ್ಪರ್ಧಿಸಲಿದ್ದಾರೆ. 2025ರ ದೆಹಲಿ ವಿಧಾನಸಭೆ
First list of AAP candidates for Delhi Elections is OUT‼️
All the best to all the candidates ✌️🏻
फिर लायेंगे केजरीवाल ! 🔥#PhirLayengeKejriwal pic.twitter.com/YTbnqpzqEC
— AAP (@AamAadmiParty) November 21, 2024
ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕ ಕೈಲಾಶ್ ಗಹ್ಲೋಟ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಕೆಲವೇ ದಿನಗಳಲ್ಲಿ ಈ ಘೋಷಣೆ ಹೊರಬಿದ್ದಿದೆ.
2020ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವನೆಯಲ್ಲಿ ರಾಜ್ಯದ 70 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷವು ಬರೋಬ್ಬರಿ 62 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಕೇವಲ 8 ಕ್ಷೇತ್ರಗಳನ್ನು ಗೆದ್ದು ಹೀನಾಯವಾಗಿ ಸೋತಿತ್ತು. ಕಾಂಗ್ರೆಸ್ ಯಾವುದೆ ಕ್ಷೇತ್ರವನ್ನು ಗೆಲ್ಲಲು ವಿಫಲವಾಗಿತ್ತು. ಅದಾಗ್ಯೂ, ಪ್ರಸ್ತುತ ದೆಹಲಿ ವಿಧಾನಸಭೆಯಲ್ಲಿ ಎಎಪಿ 58 ಶಾಸಕರನ್ನು ಹೊಂದಿದ್ದು, ಬಿಜೆಪಿ 7 ಶಾಸಕರನ್ನು ಹೊಂದಿದೆ. ವಿವಿಧ ಕಾರಣಗಳಿಗೆ ರಾಜ್ಯದ 5 ಕ್ಷೇತ್ರಗಳು ತೆರವುಗೊಂಡಿದೆ.
ಇದನ್ನೂ ಓದಿ: ನಿರ್ಮಲಾ ಸೀತಾರಾಮನ್, ಕಟೀಲ್ ವಿರುದ್ಧದ ಸುಲಿಗೆ ಪ್ರಕರಣ | ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್
ನಿರ್ಮಲಾ ಸೀತಾರಾಮನ್, ಕಟೀಲ್ ವಿರುದ್ಧದ ಸುಲಿಗೆ ಪ್ರಕರಣ | ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್


