ವಂಚನೆ ಮತ್ತು ಲಂಚದ ಆರೋಪದ ಮೇಲೆ ಖ್ಯಾತ ಉದ್ಯಮಿ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಸೇರಿದಂತೆ ಹಲವರ ವಿರುದ್ಧ ಯುಎಸ್ ನ್ಯಾಯಾಲಯ ದೋಷಾರೋಪ ಹೊರಿಸಿದ ಕೆಲವೇ ದಿನಗಳ ನಂತರ, ಯಂಗ್ ಇಂಡಿಯಾ ಸ್ಕಿಲ್ ಯೂನಿವರ್ಸಿಟಿಗಾಗಿ ಅದಾನಿ ಫೌಂಡೇಶನ್ ವಾಗ್ದಾನ ಮಾಡಿದ ₹100 ಕೋಟಿಗಳನ್ನು ಸ್ವೀಕರಿಸುವುದಿಲ್ಲ ಎಂದು ತೆಲಂಗಾಣ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಿದೆ.
ಸರ್ಕಾರವು ಅದಾನಿ ಫೌಂಡೇಶನ್‌ನ ಅಧ್ಯಕ್ಷರಿಗೆ ಪತ್ರವನ್ನು ಬರೆದು ತಮ್ಮ ಸಮೂಹದಿಂದ ಹಣವನ್ನು ಸ್ವೀಕರಿಸದ ತನ್ನ ನಿರ್ಧಾರ ತಿಳಿಸಿದೆ.
ಅಕ್ಟೋಬರ್ 18, 2024 ರಂದು, ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿದ್ದಾಗ ₹100 ಕೋಟಿ ದೇಣಿಗೆ ನೀಡುವುದನ್ನು ಘೋಷಿಸಲಾಯಿತು.
ರಾಜ್ಯ ಐಟಿ ಮತ್ತು ಕೈಗಾರಿಕೆಗಳ ಪ್ರಧಾನ ಕಾರ್ಯದರ್ಶಿ ಜಯೇಶ್ ರಂಜನ್ ಅವರು ನವೆಂಬರ್ 24, 2024 ರ ಪತ್ರದಲ್ಲಿ ಅದಾನಿ ಫೌಂಡೇಶನ್‌ನ ಅಧ್ಯಕ್ಷೆ ಪ್ರೀತಿ ಜಿ ಅದಾನಿಗೆ ಬರೆದ ಪತ್ರದಲ್ಲಿ, ಸರ್ಕಾರವು ಯಾವುದೇ ದಾನಿಗಳಿಗೆ ಹಣದ ಭೌತಿಕ ವರ್ಗಾವಣೆಯನ್ನು ಕೇಳಿಲ್ಲ ಎಂದು ಹೇಳಿದ್ದಾರೆ. ಸೆಕ್ಷನ್ 80ಜಿ ಅಡಿಯಲ್ಲಿ ವಿಶ್ವವಿದ್ಯಾನಿಲಯವು ಐಟಿ ವಿನಾಯಿತಿಯನ್ನು ಪಡೆದಿರಲಿಲ್ಲ.
“ಈ ವಿನಾಯಿತಿ ಆದೇಶವು ಇತ್ತೀಚೆಗೆ ಬಂದಿದ್ದರೂ, ಪ್ರಸ್ತುತ ಸಂದರ್ಭಗಳು ಮತ್ತು ಉದ್ಭವಿಸುವ ವಿವಾದಗಳನ್ನು ಗಮನದಲ್ಲಿಟ್ಟುಕೊಂಡು ಹಣವನ್ನು ವರ್ಗಾವಣೆ ಮಾಡದಂತೆ ಮುಖ್ಯಮಂತ್ರಿಗಳು ನನಗೆ ಸೂಚಿಸಿದ್ದಾರೆ” ಎಂದು ಜಯೇಶ್ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ; ಅದಾನಿ ಗ್ರೂಪ್‌ನೊಂದಿಗಿನ ಇಂಧನ ಒಪ್ಪಂದ ಪರಿಶೀಲಿಸಲು ಮುಂದಾದ ಬಾಂಗ್ಲಾ ಮಧ್ಯಂತರ ಸರ್ಕಾರ


