ಬೇವು, ನಿಂಬೆ ರಸ, ಅರಿಶಿನ ಮತ್ತು ದಾಲ್ಚಿನ್ನಿಯಂತಹ ಪದಾರ್ಥಗಳನ್ನು ಸೇವಿಸಿದ ಕಾರಣಕ್ಕೆ ತಮ್ಮ ಪತ್ನಿಯ ಸ್ತನ ಕ್ಯಾನ್ಸರ್ ಗುಣವಾಗಿದೆ ಎಂದಿದ್ದ ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರ ಹೇಳಿಕೆಗೆ ಆಂಕೊಲಾಜಿಸ್ಟ್‌ಗಳು ವಿರೋಧ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯವಾಗಿ ಸಾಬಿತಾಗದ ಪರಿಹಾರಗಳನ್ನು ಅವಲಂಬಿಸಬೇಡಿ ಎಂದು ದೇಶದ ಹಲವಾರು ಉನ್ನತ ವೈದ್ಯರು ಟಿಪ್ಪಣಿ ಬಿಡುಗಡೆ ಮಾಡಿದ್ದಾರೆ. ತಜ್ಞರೊಂದಿಗೆ ಚಿಕಿತ್ಸೆ ಪಡೆಯಿರಿ
ಕಳೆದ ವಾರ ಮಾಧ್ಯಮಗೋಷ್ಠಿಯಲ್ಲಿ ಸಿಧು ಈ ಹೇಳಿಕೆ ನೀಡಿದ್ದರು. ಇದರ ನಂತರ, ದೇಶದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಯಾಗಿರುವ ಟಾಟಾ ಮೆಮೋರಿಯಲ್ ಸೆಂಟರ್ (ಟಿಎಂಸಿ)ಯ 262 ಕ್ಕೂ ಹೆಚ್ಚು ಹಾಲಿ ಮತ್ತು ಮಾಜಿ ಆಂಕೊಲಾಜಿಸ್ಟ್‌ಗಳು ಸಿಧು ಅವರ ಪ್ರತಿಪಾದನೆಗೆ ಯಾವುದೇ ಆಧಾರಗಳಿಲ್ಲ ಎಂದು ಪ್ರತ್ಯೇಕ ಹೇಳಿಕೆಗಳಲ್ಲಿ ತಿಳಿಸಿದ್ದಾರೆ. ತಜ್ಞರೊಂದಿಗೆ ಚಿಕಿತ್ಸೆ ಪಡೆಯಿರಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಸಂಭವನೀಯ ಕ್ಯಾನ್ಸರ್‌ನ ಲಕ್ಷಣಗಳು ಕಂಡುಬಂದಲ್ಲಿ ಸೂಕ್ತ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷಿಸಿ. ಕ್ಯಾನ್ಸರ್ ರೋಗ ಆಗಿರುವುದು ಕಂಡುಬಂದರೆ, ತರಬೇತಿ ಪಡೆದ ವೈದ್ಯರು ಸಲಹೆ ನೀಡಿದ ಸಾಕ್ಷ್ಯ ಆಧಾರಿತ ಚಿಕಿತ್ಸೆಯನ್ನು ತೆಗೆದುಕೊಳ್ಳುವಂತೆ ನಾವು ಸಾರ್ವಜನಿಕರನ್ನು ಒತ್ತಾಯಿಸುತ್ತೇವೆ” ಎಂದು ಟಿಎಂಸಿ ಹೇಳಿಕೆಯಲ್ಲಿ ತಿಳಿಸಿದೆ.
“ಈ ಉತ್ಪನ್ನಗಳ ಬಗ್ಗೆ ಕೆಲವು ಸಂಶೋಧನೆಗಳು ನಡೆಯುತ್ತಿದೆ. ಅವುಗಳನ್ನು ಕ್ಯಾನ್ಸರ್ ವಿರೋಧಿ ಚಿಕಿತ್ಸೆಯಲ್ಲಿ ಬಳಸುವಂತೆ ಶಿಫಾರಸು ಮಾಡಲು ಯಾವುದೇ ವೈದ್ಯಕೀಯ ಆಧಾರ ಇಲ್ಲ. ಸಾಬೀತಾಗದ ಪರಿಹಾರಗಳನ್ನು ಅನುಸರಿಸುವ ಮೂಲಕ ರೋಗಿಗಳ ಚಿಕಿತ್ಸೆಯನ್ನು ವಿಳಂಬ ಮಾಡದಂತೆ ನಾವು ಸಾರ್ವಜನಿಕರನ್ನು ಒತ್ತಾಯಿಸುತ್ತೇವೆ. ಅದರ ಬದಲಿಗೆ ವೈದ್ಯರನ್ನು ಸಂಪರ್ಕಿಸಿ, ಮೇಲಾಗಿ ಕ್ಯಾನ್ಸರ್ ತಜ್ಞರನ್ನು ಸಂಪರ್ಕಿಸಿ,” ಎಂದು ಟಿಎಂಸಿಯ ಹಳೆ ವಿದ್ಯಾರ್ಥಿಗಳ ಹೇಳಿಕೆಯು ಸಾರ್ವಜನಿಕರನ್ನು ಎಚ್ಚರಿಸಿದೆ.
ಸಕ್ಕರೆ, ಹಾಲಿನ ಉತ್ಪನ್ನಗಳು, ಸಂಸ್ಕರಿಸಿದ ಎಣ್ಣೆ, ಗೋಧಿ ಮತ್ತು ಸಂಸ್ಕರಿಸಿದ ಗೋಧಿ, ನಿಂಬೆ ರಸ, ಅರಿಶಿನ, ದಾಲ್ಚಿನ್ನಿ, ಬೇವಿನ ಎಲೆಗಳು, ಗೂಸ್್ಬೆರ್ರಿಸ್ ಮತ್ತು ಕ್ವಿನೋವಾ ಬಳಕೆ ಸೇರಿದಂತೆ ಆಹಾರದ ಬದಲಾವಣೆಗಳು ತಮ್ಮ ಪತ್ನಿ ನಾಲ್ಕನೇ ಹಂತದ ಕ್ಯಾನ್ಸರ್ ಅನ್ನು ಗುಣಪಡಿಸಿದೆ ಎಂದು ಸಿಧು ಈ ಹಿಂದೆ ಹೇಳಿದ್ದರು.
ತಮ್ಮ ಹೇಳಿಕೆಗಳನ್ನು ವಿರೋಧಿಸಿ ವೈದ್ಯಕೀಯ ಸಂಘಟನೆಗಳು ಮುನ್ನಲೆಗೆ ಬಂದ ನಂತರ ಸೋಮವಾರ (ನವೆಂಬರ್ 25) X ನಲ್ಲಿ ಸಿಧು ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಡಯಟ್ ಯೋಜನೆಯನ್ನು” ಚಿಕಿತ್ಸೆಯ ಅನುಕೂಲತೆಯಾಗಿ ನೋಡಬೇಕು ಮತ್ತು ವೈದ್ಯರೊಂದಿಗೆ ಸಮಾಲೋಚಿಸಿದ ನಂತರ ಅದನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.
ಅದಾಗ್ಯೂ, ಸ್ವತಃ ವೈದ್ಯೆಯಾಗಿರುವ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರು ಆಹಾರದ ಬದಲಾವಣೆಯಿಂದ ನಾನು ಪ್ರಯೋಜನ ಪಡೆದಿದ್ದೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ವಕ್ಫ್ ಮಸೂದೆ ವಿರುದ್ಧ ನಿರ್ಣಯ ಮಂಡಿಸಲಾಗುವುದು ಎಂದ ಪಶ್ಚಿಮ ಬಂಗಾಳ ಸಚಿವರು
ವಕ್ಫ್ ಮಸೂದೆ ವಿರುದ್ಧ ನಿರ್ಣಯ ಮಂಡಿಸಲಾಗುವುದು ಎಂದ ಪಶ್ಚಿಮ ಬಂಗಾಳ ಸಚಿವರು


