ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯ ಕಾರ್ಯಾವಧಿಯನ್ನು ಮುಂದಿನ ವರ್ಷದ ಬಜೆಟ್ ಅಧಿವೇಶನದ ಕೊನೆಯ ದಿನದವರೆಗೆ ವಿಸ್ತರಿಸುವ ನಿರ್ಣಯವನ್ನು ಲೋಕಸಭೆ ಗುರುವಾರ (ನ.28) ಅಂಗೀಕರಿಸಿದೆ.
ಸಮಿತಿಯ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಜಗದಂಬಿಕಾ ಪಾಲ್ ಅವರು ಲೋಕಸಭೆಯಲ್ಲಿ ಮಂಡಿಸಿದ ನಿರ್ಣಯ ಧ್ವನಿ ಮತದ ಮೂಲಕ ಅಂಗೀಕರಾಗೊಂಡಿದೆ.
ಸಮಿತಿಯ ಕರಡು ವರದಿ ಸಿದ್ದವಾಗಿದೆ ಎಂದು ಪಾಲ್ ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬುಧವಾರ ನಡೆದ ಸಮಿತಿ ಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಪಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಭಾತ್ಯಾಗ ಮಾಡಿದ್ದರು. ಬಳಿಕ ಪಾಲ್ ಮತ್ತು ಸಮಿತಿಯ ಬಿಜೆಪಿ ಸದಸ್ಯರು, ಪ್ರತಿಪಕ್ಷ ಸದಸ್ಯರನ್ನು ಮನವೊಲಿಸಿ ಕರೆತಂದಿದ್ದರು. ನಂತರ ಎಲ್ಲರೂ ಸೇರಿಕೊಂಡು ನವೆಂಬರ್ 29ರ ಗಡುವು ವಿಸ್ತರಿಸುವ ಒಮ್ಮತದ ತೀರ್ಮಾನ ಕೈಗೊಂಡಿದ್ದರು.
ಸಮಿತಿಯ ಕಾರ್ಯಾವಧಿ ವಿಸ್ತರಣೆ ಮಾಡುವಂತೆ ಪ್ರತಿಪಕ್ಷಗಳ ಸದಸ್ಯರು ಆಗ್ರಹಿಸಿದ್ದರು. ಕರಡು ವರದಿಯಲ್ಲಿ ತಿದ್ದುಪಡಿಗೆ ಒತ್ತಾಯಿಸಿದ್ದರು.
ಇದನ್ನೂ ಓದಿ : ‘ಪಿಎಂ ವಿಶ್ವಕರ್ಮ ಯೋಜನೆ’ ಜಾತಿ ಆಧಾರಿತ ಉದ್ಯೋಗ ಉತ್ತೇಜಿಸುತ್ತದೆ, ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ : ತಮಿಳುನಾಡು ಸಿಎಂ


