ತನ್ನ ಕಂಪೆನಿಯ ಮೇಲೆ ಅಮೆರಿಕದ ಅಧಿಕಾರಿಗಳು ಮಾಡಿರುವ ಆರೋಪಗಳ ಬಗ್ಗೆ ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಗೌತಮ್ ಅದಾನಿ ಅವರು ಪ್ರತಿಕ್ರಿಯಿಸಿದ್ದು, ಘಟನೆಯ ಬಗ್ಗೆ ಪತ್ರಿಕೆಗಳು ತಪ್ಪಾಗಿ ಮತ್ತು ಅಜಾಗರೂಕ ವರದಿ ಮಾಡಿವೆ ಎಂದು ಶನಿವಾರ ಹೇಳಿದ್ದಾರೆ. ಅಮೆರಿಕ ದೋಷಾರೋಪಣೆಗೆ
“ಎರಡು ವಾರಗಳ ಹಿಂದೆಯೇ ಅದಾನಿ ಗ್ರೀನ್ ಎನರ್ಜಿಯಲ್ಲಿನ ಅನುಸರಣೆ ಪ್ರಕ್ರಿಯೆಗಳ ಬಗ್ಗೆ ನಾವು ಅಮೆರಿಕದಿಂದ ಆರೋಪಗಳನ್ನು ಎದುರಿಸಿದ್ದೇವೆ ಎಂದು ನಿಮ್ಮಲ್ಲಿ ಹೆಚ್ಚಿನವರು ಓದಿದ್ದೀರಿ. ಆದರೆ ನಾವು ಇಂತಹ ಸವಾಲುಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ.” ಎಂದು ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅದಾನಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಪ್ರತಿಯೊಂದು ದಾಳಿಯು ನಮ್ಮನ್ನು ಬಲಪಡಿಸುತ್ತದೆ ಮತ್ತು ಪ್ರತಿ ಅಡಚಣೆಯು ಅದಾನಿ ಗ್ರೂಪ್‌ಗೆ ಮತ್ತಷ್ಟು ಚೇತರಿಸಿಕೊಳ್ಳುವ ಮೆಟ್ಟಿಲು ಆಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ” ಎಂದು ಅದಾನಿ ಹೇಳಿದ್ದಾರೆ.
ಅಮರಿಕದಲ್ಲಿ ಅದಾನಿ ಗ್ರೂಪ್‌ಗೆ ಸಂಬಂಧಿಸಿರುವ ಅದಾನಿ ಮತ್ತು ಇತರರ ದೋಷಾರೋಪಣೆಗೆ ಸಂಬಂಧಿಸಿದ ಬೆಳವಣಿಗೆಗಳನ್ನು ಖಾಸಗಿ ಕಂಪನಿಗಳು, ವ್ಯಕ್ತಿಗಳು ಮತ್ತು ಅಮೆರಿಕ ನ್ಯಾಯಾಂಗ ಇಲಾಖೆಯನ್ನು ಒಳಗೊಂಡಿರುವ ಕಾನೂನು ವಿಷಯವಾಗಿ ಪರಿಗಣಿಸುವುದಾಗಿ ಭಾರತ ಸರ್ಕಾರ ಹೇಳಿದ ಒಂದು ದಿನದ ನಂತರ ಅದಾನಿ ಈ ಹೇಳಿಕೆ ನೀಡಿದ್ದಾರೆ.
ಮೋದಿ ಅವರ ಆಪ್ತ ಉದ್ಯಮಿ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಹಿರಿಯ ಕಾರ್ಯನಿರ್ವಾಹಕ ವನೀತ್ ಜೈನ್ ಅವರು ಸೆಕ್ಯುರಿಟೀಸ್ ವಂಚನೆ ಮತ್ತು ಅಮೆರಿಕದ ಸೆಕ್ಯುರಿಟೀಸ್ ನಿಯಮಗಳ ಉಲ್ಲಂಘನೆಗಾಗಿ ಪಿತೂರಿ ನಡೆಸಿದ್ದಾರೆ ಎಂದು ದೋಷಾರೋಪಣೆಯಲ್ಲಿ ಆರೋಪಿಸಲಾಗಿದೆ. ಅದಾನಿ ಗ್ರೀನ್ ಎನರ್ಜಿ ಕಾರ್ಯನಿರ್ವಾಹಕರು ಅಂತರಾಷ್ಟ್ರೀಯ ನಿಧಿಯನ್ನು ಪಡೆಯಲು ಲಂಚದ ಆಮಿಷ ನೀಡಿದ್ದರು ಎಂದು ಅದು ಆರೋಪಿಸಿದೆ.
ಅದಾನಿ ಮತ್ತು ಅವರ ಸಹಚರರು 2021 ಮತ್ತು 2023 ರ ನಡುವೆ ಭಾರತೀಯ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್ ಅಥವಾ 2,200 ಕೋಟಿ ರೂಪಾಯಿಗಳನ್ನು ಲಂಚವಾಗಿ ಪಾವತಿಸಲು ಸಂಚು ರೂಪಿಸಿದ್ದಾರೆ ಎಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ಪ್ರತಿಪಾದಿಸಿದ್ದಾರೆ. ಅಲ್ಲದೆ, ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಛತ್ತೀಸ್‌ಗಢ ಮತ್ತು ಜಮ್ಮು ಕಾಶ್ಮೀರದ ಅಧಿಕಾರಿಗಳು ಲಂಚ ಪಡೆದಿದ್ದಾರೆ ಎನ್ನಲಾಗಿದೆ.
“ಸಾಕಷ್ಟು ಸ್ಥಾಪಿತ ವರದಿಗಳ ಹೊರತಾಗಿಯೂ, ಅದಾನಿ ಕಡೆಯಿಂದ ‘ವಿದೇಶಿ ಭ್ರಷ್ಟ ಆಚರಣೆಗಳ ಕಾಯ್ದೆ’ಯ ಉಲ್ಲಂಘನೆ ಆಗಿದೆ ಎಂದು ಯಾರೋಬ್ಬರೂ ಆರೋಪ ಮಾಡಿಲ್ಲ. ಜೊತೆಗೆ ನ್ಯಾಯಕ್ಕೆ ಅಡ್ಡಿಪಡಿಸುವ ಪಿತೂರಿ ನಡೆಸಲಾಗಿದೆ ಎಂಬ ಆರೋಪ ಹೊರಿಸಲಾಗಿಲ್ಲ. ಆದರೂ, ಇಂದಿನ ಜಗತ್ತಿನಲ್ಲಿ ನಕಾರಾತ್ಮಕತೆಯು ಸತ್ಯಗಳಿಗಿಂತ ವೇಗವಾಗಿ ಹರಡುತ್ತದೆ” ಎಂದು ಅದಾನಿ ಶನಿವಾರ ಹೇಳಿದ್ದಾರೆ.
ಜೊತೆಗೆ ಹಿಂಡೆನ್‌ಬರ್ಗ್ ವರದಿಯನ್ನು ಉಲ್ಲೇಖಿಸಿರುವ ಅದಾನಿ, ಪಟ್ಟಭದ್ರ ಮಾಧ್ಯಮ ಹಿತಾಸಕ್ತಿಗಳಿಂದ ರಾಜಕೀಯ ಪ್ರೇರಿತ ದಾಳಿ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೆ, ಅಮೆರಿಕದ ಅಧಿಕಾರಿಗಳು ಮಾಡಿರುವ ಆರೋಪಗಳನ್ನು ಅದಾನಿ ಗ್ರೂಪ್ ನಿರಾಕರಿಸಿದ್ದು, ಅವುಗಳನ್ನು “ಆಧಾರರಹಿತ” ಎಂದು ಕರೆದಿದೆ.
ವಿದೇಶಿ ಭ್ರಷ್ಟ ಆಚರಣೆಗಳ ಕಾಯಿದೆಯು ಅಮೆರಿಕದ ಕಾನೂನಾಗಿದ್ದು, ಹೆಚ್ಚಿನ ವ್ಯಾಪಾರ ವ್ಯವಹಾರಗಳಿಗಾಗಿ ವಿದೇಶಿ ಅಧಿಕಾರಿಗಳಿಗೆ ಲಂಚ ಪಾವತಿಸುವುದನ್ನು ಕಾಯಿದೆಯು ನಿಷೇಧಿಸುತ್ತದೆ.
ಇದನ್ನೂ ಓದಿ: ಮಹಾರಾಷ್ಟ್ರ ಮತದಾನದ ಅಂಕಿ ಅಂಶಗಳಲ್ಲಿ ವ್ಯತ್ಯಾಸ; ಕಾಂಗ್ರೆಸ್ ಪ್ರತಿಪಾದನೆ ತಿರಸ್ಕರಿಸಿದ ಚುನಾವಣಾ ಆಯೋಗ
ಮಹಾರಾಷ್ಟ್ರ ಮತದಾನದ ಅಂಕಿ ಅಂಶಗಳಲ್ಲಿ ವ್ಯತ್ಯಾಸ; ಕಾಂಗ್ರೆಸ್ ಪ್ರತಿಪಾದನೆ ತಿರಸ್ಕರಿಸಿದ ಚುನಾವಣಾ ಆಯೋಗ


