ಪೂಜಾ ಸ್ಥಳಗಳ ಕಾಯ್ದೆ ಕುರಿತು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರು ಮೇ 2022ರಲ್ಲಿ ನೀಡಿರುವ ಹೇಳಿಕೆಗಳು ಮಸೀದಿ-ಮಂದಿರ ಕುರಿತ ಎಲ್ಲಾ ವಿವಾದಗಳಿಗೆ ಮೂಲ ಕಾರಣ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಶನಿವಾರ (ನ.30) ಹೇಳಿದ್ದಾರೆ.
“ಪೂಜಾ ಸ್ಥಳಗಳ ಕಾಯ್ದೆಯು ಧಾರ್ಮಿಕ ಸ್ಥಳದ ಸ್ವರೂಪ ಬದಲಾವಣೆಯನ್ನು ನಿಷೇಧಿಸಿದ್ದರೂ, ಕೇವಲ ಸ್ಥಳವೊಂದರ ಧಾರ್ಮಿಕ ಲಕ್ಷಣವನ್ನು ಖಚಿತಪಡಿಸಿಕೊಳ್ಳುವುದು ಕಾಯ್ದೆಯನ್ನು ಉಲ್ಲಂಘಿಸುವುದಿಲ್ಲ” ಎಂದು ಚಂದ್ರಚೂಡ್ 2022ರಲ್ಲಿ ಮೌಖಿವಾಗಿ ಹೇಳಿದ್ದರು.
ಲೇಖಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ರಾಜ್ ಮೋಹನ್ ಗಾಂಧಿಯವರು ಸದನದಲ್ಲಿ ಪೂಜಾ ಸ್ಥಳಗಳ ಮಸೂದೆ -1991ರ ಕುರಿತು ಮಾಡಿದ್ದ ಭಾಷಣವನ್ನು ನೆನಪಿಸಿಕೊಂಡಿರುವ ಜೈರಾಮ್ ರಮೇಶ್, “ಇತಿಹಾಸದ ತಪ್ಪುಗಳನ್ನು ಸೇಡಿನ ಭಾವನೆಯೊಂದಿಗೆ ಸರಿಪಡಿಸಲು ಬಯಸುವವರು ಹೆಚ್ಚೆಚ್ಚು ವಿನಾಶವನ್ನುಂಟು ಮಾಡುತ್ತಾರೆ ಎನ್ನುವುದು ಹಿಂದು ಮಹಾಕಾವ್ಯ ಮಹಾಭಾರತದ ಪ್ರಮುಖ ಪಾಠವಾಗಿದೆ” ಎಂದು ಗಾಂಧಿ ಆಗ ಹೇಳಿದ್ದರು ಎಂದಿದ್ದಾರೆ.
On Sept 12, 1991, the Rajya Sabha debated the Bill that subsequently became the Places of Worship (Special Provisions) Act, 1991. This is in the news very much these days because of oral observations made by the just-retired Chief Justice of India D.Y. Chandrachud on May 20, 2022… pic.twitter.com/gDOaAXBQrJ
— Jairam Ramesh (@Jairam_Ramesh) November 30, 2024
ಗಾಂಧಿಯವರ ಭಾಷಣವು ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು, ಇತಿಹಾಸ ಮತ್ತು ರಾಜಕೀಯ ಕುರಿತಂತೆ ಶ್ರೇಷ್ಠ ಭಾಷಣವಾಗಿತ್ತು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಕಾಂಗ್ರೆಸ್ ಪೂಜಾ ಸ್ಥಳಗಳ ಕಾಯ್ದೆಗೆ ತಾನು ಬದ್ಧವಾಗಿದ್ದೇನೆ ಎಂದು ಶುಕ್ರವಾರ (ನ.29) ಹೇಳಿದೆ. ಆಡಳಿತ ಬಿಜೆಪಿ ಈ ಕಾಯ್ದೆಯನ್ನು ನಿರ್ಲಜ್ಜವಾಗಿ ಉಲ್ಲಂಘಿಸುತ್ತಿದೆ ಎಂದು ಅದು ಆರೋಪಿಸಿದೆ.
ಉತ್ತರ ಪ್ರದೇಶ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ನ್ಯಾಯಾಲಯ ಸೂಚಿಸಿರುವುದು, ಆ ಬಳಿಕ ನಡೆದ ಹಿಂಸಾಚಾರ ಮತ್ತು ಸೂಫಿ ಸಂತ ಖ್ವಾಜಾ ಮುಈನುದ್ದೀನ್ ಚಿಸ್ತಿಯವರ ಅಜ್ಮೀರ್ ದರ್ಗಾ ದೇವಾಯಲಯ ಎಂದು ವಾದಿಸಿರುವ ಅರ್ಜಿಯ ವಿಚಾರಣೆಗೆ ನ್ಯಾಯಾಲಯ ಒಪ್ಪಿರುವ ಬೆನ್ನಲ್ಲೇ ಕಾಂಗ್ರೆಸ್ ತನ್ನ ನಿಲುವು ವ್ಯಕ್ತಪಡಿಸಿದೆ.
1991ರ ಪೂಜಾ ಸ್ಥಳಗಳ ಕಾಯ್ದೆಯು ಸ್ವತಂತ್ರ ಭಾರತದಲ್ಲಿ ಪೂಜಾ ಸ್ಥಳಗಳ ಸ್ವರೂಪ ಬದಲಾವಣೆಯನ್ನು ನಿಷೇಧಿಸುತ್ತದೆ. ಅಯೋಧ್ಯೆಯ ಬಾಬರಿ ಮಸೀದಿಯ ಸ್ಥಳ ಮಾತ್ರ ಈ ಕಾನೂನಿನಿಂದ ಹೊರತಾಗಿತ್ತು. ಅಲ್ಲಿ ಈಗ ಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿ ತೆರವುಗೊಳಿಸಿ ರಾಮ ಮಂದಿರ ನಿರ್ಮಿಸಲಾಗಿದೆ.
ಇದನ್ನೂ ಓದಿ : ನಾಗರಿಕ ಹಕ್ಕುಗಳ ಹೋರಾಟಗಾರ ನದೀಮ್ ಖಾನ್ ಅಕ್ರಮ ಬಂಧನ ಯತ್ನ; ದೆಹಲಿ ಪೊಲೀಸರ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲು


