ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ರಾಜ್ಯ ನಾಯಕತ್ವದ ವಿರುದ್ದ ನಿರಂತರ ಹೇಳಿಕೆಗಳನ್ನು ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಿಜೆಪಿ ಹೈಕಮಾಂಡ್ ಇಂದು (ಡಿ.2) ಶೋಕಾಸ್ ನೋಟಿಸ್ ನೀಡಿದೆ.
ಬಿಜೆಪಿ ಶಿಸ್ತು ಸಮಿತಿ ನೀಡಿರುವ ನೋಟಿಸ್‌ನಲ್ಲಿ “ಪಕ್ಷದ ರಾಜ್ಯ ಘಟಕದ ವಿರುದ್ದ ನಿರಂತರ ವಾಗ್ದಾಳಿ ನಡೆಸುತ್ತಿದ್ದೀರಿ. ಪಕ್ಷದ ನಿರ್ದೇಶನಗಳನ್ನು ಧಿಕ್ಕರಿಸಿ, ಎಲ್ಲಾ ವಿಚಾರಗಳಲ್ಲಿಯೂ ಪಕ್ಷದ ಅಧಿಕೃತ ನಿಲುವಿನ ವಿರುದ್ದ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದೀರಿ. ಅವೆಲ್ಲವೂ ಮಾಧ್ಯಮಗಳು ಮತ್ತು ಇತರ ವೇದಿಕೆಗಳಲ್ಲಿ ವರದಿಯಾಗಿದೆ” ಎಂದು ಹೇಳಲಾಗಿದೆ.
BJP issues a show cause notice to Karnataka MLA Basangouda Patil Yatnal for making remarks against state-level party leadership.
"Your continuing tirade against the state-level party leadership and your defiance of party directives and making public pronouncements and stance in… pic.twitter.com/7vVsRsMmWr
— ANI (@ANI) December 2, 2024
“ಈ ಹಿಂದೆ ಹಲವು ಬಾರಿ ನೋಟಿಸ್ ನೀಡಿದ್ದರೂ, ಮತ್ತೆ ಆ ರೀತಿ ಮಾಡುವುದಿಲ್ಲ ಎಂದು ನೀವೇ ಭರವಸೆ ನೀಡಿದ್ದೀರಿ. ಆದರೆ, ಅಶಿಸ್ತು ಮುಂದುವರೆದಿರುವುದು ಕಳವಳದ ಸಂಗತಿ. ನಿಮ್ಮ ಹಿರಿತನ, ಪಕ್ಷದೊಂದಿಗಿನ ದೀರ್ಘಕಾಲದ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಶಿಸ್ತು ಸಮಿತಿ ನಿಮ್ಮ ಹೇಳಿಕೆಗಳ ಬಗ್ಗೆ ಈ ಹಿಂದೆ ಮೃದು ನಿಲುವು ತಾಳಿತ್ತು” ಎಂದು ಉಲ್ಲೇಖಿಸಲಾಗಿದೆ.
ರಾಜಕೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳಲ್ಲಿ ಪಕ್ಷದ ನಿಲುವನ್ನು ಧಿಕ್ಕರಿಸಿ, ನಾಯಕರ ವಿರುದ್ದವೂ ಆರೋಪಗಳನ್ನು ಮಾಡಿದ್ದೀರಿ. ಇದು ಪಕ್ಷದ ಶಿಸ್ತಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಸಂಬಂಧ ಪಕ್ಷವು, ನಿಮ್ಮ ವಿರುದ್ದ ಏಕೆ ಕ್ರಮ ಕೈಗೊಳ್ಳಬಾರದು ಎಂದು 10 ದಿನಗಳ ಒಳಗಾಗಿ ವಿವರಣೆ ನೀಡಿ ಎಂದು ಸೂಚಿಸಲಾಗಿದೆ.
ಇದನ್ನೂ ಓದಿ : ತಾರಕಕ್ಕೇರಿದ ಯತ್ನಾಳ್-ವಿಜಯೇಂದ್ರ ವಾಗ್ಯುದ್ಧ : ದೆಹಲಿ ತಲುಪಿದ ಬಿಜೆಪಿ ಬಣ ಕದನ


