ಹಿಂದಿನ ಹಲವು ಆಡಳಿತಾತ್ಮಕ ನಿಯಮ ನಿಬಂಧನೆಗಳಿಂದ ಲಿಂಗತ್ವ ಅಲ್ಪಸಂಖ್ಯಾತರ, ಲೈಂಗಿಕ ಕಾರ್ಮಿಕರ ಮತ್ತು ದೇವದಾಸಿಯರ ಮತ್ತು ಒಂಟಿ ಮಹಿಳೆಯರ ಮಕ್ಕಳ ಹಕ್ಕುಗಳಿಗೆ ಚ್ಯುತಿ ಆಗುತ್ತಿರುವುದು ಸಾಧಾರಣ ಎಂದು ಪರಿಗಣಿಸಲ್ಪಡುತ್ತಿರುವ ಅತಿ ಗಂಭೀರ ವಿಷಯವಾಗಿದೆ ಎಂದು ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಡಾ. ಅಕ್ಕಯ್ ಪದ್ಮಶಾಲಿ ಅವರು ಶುಕ್ರವಾರ ಹೇಳಿದರು. ಸೌಲಭ್ಯಕ್ಕಾಗಿ ದಾಖಲಾತಿ ಬೇಕು
ಅವರು ಇತರ ಸಮುದಾಯದ ಜೊತೆಗೆ ಸೇರಿ ಲಿಂಗತ್ವ ಅಲ್ಪಸಂಖ್ಯಾತರ, ಲೈಂಗಿಕ ಕಾರ್ಮಿಕರ, ದೇವದಾಸಿಯರ ಮತ್ತು ಒಂಟಿ ಮಹಿಳೆಯರ ಮಕ್ಕಳ ಹಕ್ಕುಗಳಿಗಾಗಿ ‘ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಂದೋಲನ’ವನ್ನು ಚಾಲನೆ ನೀಡಿ ಮಾತನಾಡುತ್ತಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಅವರು, “ಕಾಲಗಳು ಉರುಳಿದಂತೆ ನಮ್ಮ ಸಾಮಾಜಿಕ ಸಂರಚನೆ ಮತ್ತು ಕುಟುಂಬ ವ್ಯವಸ್ಥೆಗಳಲ್ಲಿ ಹೊಸ ಹೊಸ ಬದಲಾವಣೆಗಳು ನಿರಂತರ ಆಗುತ್ತಲೇ ಇವೆ. ಈ ಹಿಂದಿನ ಹಲವು ಆಡಳಿತಾತ್ಮಕ ನಿಯಮ ನಿಬಂಧನೆಗಳಿಂದ ಲಿಂಗತ್ವ ಅಲ್ಪಸಂಖ್ಯಾತರ, ಲೈಂಗಿಕ ಕಾರ್ಮಿಕರ ಮತ್ತು ದೇವದಾಸಿಯರ ಮತ್ತು ಒಂಟಿ ಮಹಿಳೆಯರ ಮಕ್ಕಳ ಹಕ್ಕುಗಳಿಗೆ ಚ್ಯುತಿ ಆಗುತ್ತಿರುವುದು ಸಾಧಾರಣ ಎಂದು ಪರಿಗಣಿಸಲ್ಪಡುತ್ತಿರುವ ಅತಿ ಗಂಭೀರ ವಿಷಯವಾಗಿದೆ” ಎಂದು ಹೇಳಿದರು. ಸೌಲಭ್ಯಕ್ಕಾಗಿ ದಾಖಲಾತಿ ಬೇಕು
“ಸಿಂಗಲ್ ಮದರ್ ಮಕ್ಕಳ ತಂದೆಯ ಹೆಸರನ್ನು ಕೊಡುವ ಸ್ಥಿತಿಯಲ್ಲಿ ಇರುವುದಿಲ್ಲ. ಈ ಮಗುವಿನ ತಂದೆ ಎಂದು ಅವನು ಒಪ್ಪಿರುವುದೇ ಇಲ್ಲ. ತಂದೆ ಹೆಸರು ಇಲ್ಲ, ಆಧಾರ್ ಕಾರ್ಡ್ ಇಲ್ಲ ಎಂಬ ಒಂದೇ ಕಾರಣಕ್ಕೆ ಈ ಮಕ್ಕಳಿಗೆ ಸರ್ಕಾರಗಳಿಂದ ಸಿಗಬೇಕಾದ ಸೇವಾ ಸೌಲಭ್ಯಗಳನ್ನು ಉದಾಹರಣೆಗೆ ಆರೋಗ್ಯ, ಶೈಕ್ಷಣಿಕ ಸೇವಾ ಸೌಲಭ್ಯಗಳನ್ನು ಸಿಗದಂತಾಗಿವೆ. ಕಡ್ಡಾಯವಾಗಿ ತಂದೆಯ ಹೆಸರನ್ನು ನಮೂದಿಸಲೇಬೇಕೆಂಬ ನಿಯಮ ನಿಬಂಧನೆಗಳು ಕಗ್ಗಂಟಾಗಿ ಪರಿಣಮಿಸಿ ಈ ಮಕ್ಕಳ ಹಕ್ಕುಗಳನ್ನು ಸಮಾಧಿ ಮಾಡುತ್ತಿವೆ” ಎಂದು ಅವರು ಹೇಳಿದರು.

“ನಿಯಮ ನಿಬಂಧನೆಗಳು, ದಾಖಲಾತಿಗಳು ಮಕ್ಕಳ ಹಕ್ಕುಗಳಿಗೆ ಪೂರಕವಾಗಿ ಇರಬೇಕೆ ಹೊರತು ಮಾರಕವಾಗಿರಬಾರದು. ಸೌಲಭ್ಯಗಳಿಗಾಗಿ ದಾಖಲಾತಿಗಳು ಬೇಕು ಆದರೆ ದಾಖಲಾತಿಗಳಿಂದಲೇ ಸೌಲಭ್ಯಗಳು ಎಂಬಂತಾಗಬಾರದು. ಈ ಮಕ್ಕಳು ಪಡೆದುಕೊಳ್ಳುವ ಆರೋಗ್ಯ ಶಿಕ್ಷಣ ಇನ್ನಿತರ ಯಾವುದೇ ಒಂದು ಸೌಲಭ್ಯಗಳನ್ನು ಕೊಡಲು ಈ ಮಕ್ಕಳ ತಂದೆಯ ಹೆಸರು, ವಿಳಾಸ, ಫೋನ್ ನಂಬರ್, ಸಹಿ ಮತ್ತು ಭಾವಚಿತ್ರಗಳು ಕಡ್ಡಾಯವಾಗಿ ಒದಗಿಸಬೇಕೆಂಬ ನಿಬಂಧನೆ ಅಪ್ರಸ್ತುತವಾಗುತ್ತದೆ” ಎಂದು ಅವರು ಹೇಳಿದರು.
“ಈ ಸಂದರ್ಭಗಳಲ್ಲಿ ತಂದೆಯ ಹೆಸರನ್ನು ನಮೂದಿಸಬೇಕೋ ಅಥವಾ ಬೇಡವೋ ಎಂಬ ನಿರ್ಧಾರವನ್ನು ಆ ಮಗುವಿನ ತಾಯಿ ಅಥವಾ ಪೋಷಕಿಯ ಆಯ್ಕೆಗೆ ಬಿಡಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಇರುವಂತಹ ನಿಯಮ ನಿಬಂಧನೆಗಳಲ್ಲಿ ಬದಲಾವಣೆಯನ್ನು ತಂದು ಒಂದು ಹೊಸ ನೀತಿಯನ್ನು ರೂಪಿಸಬೇಕು. ಈ ಆಂದೋಲನ ಚಾಲನೆ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು.” ಎಂದು ಅಕ್ಕಯ್ ಅವರು ಹೇಳಿದರು.
ಆನ್‌ಲೈನ್ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್, ಸ್ಪೆಸ್ ಫಾರ್ ಡ್ರೀಮ್ಸ್‌ನ ವಿಕ್ಟೊರಿಯಾ ಪ್ರದೀಪ್, ಸಾಧನಾ ಮಹಿಳಾ ಸಂಘದ ಗೀತಾ, ಪ್ರಕೃತಿ ಕಲಾ ಸೇವಾ ಸಮಿತಿಯ ಆಶಾ ಹೆಚ್.ಎಲ್., ಗಾಯತ್ರಿ, ರಕ್ಷಿತಾ, ಮಾಳವಿಕ ಒಂದೆಡೆ, ಕಾವ್ಯ ಆಪ್ತಮಿತ್ರ, ಕರ್ನಾಟಕ ಅಂತರ್ಲಿಂಗಿ ಅಸೋಸಿಯೇಷನ್ ಅಧ್ಯಕ್ಷೆ ಕುಮಾರಿ ಅಬಿದಾ ಬೇಗಮ್, ಸನೋ ರಾಮನಗರ ಇನ್ನಿತರರು ಭಾಗವಹಿಸಿದರು.
ಇದನ್ನೂ ಓದಿ: ಅಂಬೇಡ್ಕರ್ ಇಡೀ ಜೀವನವನ್ನು ಸಾಮಾಜಿಕ ಹೋರಾಟ-ಸಮಾಜದ ಪರಿವರ್ತನೆಗಾಗಿ ತೊಡಗಿಸಿಕೊಂಡಿದ್ದರು: ಮುಖ್ಯಮಂತ್ರಿ ಸಿದ್ದರಾಮಯ್ಯ
ಅಂಬೇಡ್ಕರ್ ಇಡೀ ಜೀವನವನ್ನು ಸಾಮಾಜಿಕ ಹೋರಾಟ-ಸಮಾಜದ ಪರಿವರ್ತನೆಗಾಗಿ ತೊಡಗಿಸಿಕೊಂಡಿದ್ದರು: ಮುಖ್ಯಮಂತ್ರಿ ಸಿದ್ದರಾಮಯ್ಯ


