ಹರಿಯಾಣದ ಅಂಬಾಲಾ ಬಳಿಯ ಶಂಭು ಗಡಿಯಲ್ಲಿ ಒಂಬತ್ತು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಾ ಬಿಡಾರ ಹೂಡಿದ್ದ ರೈತರ ಮೇಲೆ ಹರಿಯಾಣ ಪೊಲೀಸರು ಶುಕ್ರವಾರ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಪ್ರತಿಭಟನೆಯನ್ನು ಪುನರಾರಂಭಿಸಿರುವ ರೈತರು ದೆಹಲಿಯತ್ತ ಮೆರವಣಿಗೆ ನಡೆಸಲು ಪ್ರಯತ್ನಿಸುತ್ತಿರುವಾಗ ಬ್ಯಾರಿಕೇಡ್‌ಗಳನ್ನು ಮುರಿದಿದ್ದಾರೆ.
ಪ್ರತಿಭಟನೆ ವೇಳೆ ಒಬ್ಬ ರೈತನನ್ನು ಬಂಧಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಎಂಎಸ್‌ಪಿಗೆ ಕಾನೂನು ಖಾತರಿಯ ಕುರಿತು ರೈತರೊಂದಿಗೆ ನಾಲ್ಕು ಸುತ್ತಿನ ಮಾತುಕತೆ ನಡೆಸಿದ ಸರ್ಕಾರ, ಅವರೊಂದಿಗೆ ಚರ್ಚೆ ನಡೆಸಲು ಮುಕ್ತವಾಗಿದೆ ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರತಿಭಟನಾ ನಿರತ ರೈತರು ಮುಖ್ಯವಾಗಿ ಬೆಳೆಗಳಿಗೆ ಎಂಎಸ್‌ಪಿಗೆ ಕಾನೂನು ಖಾತರಿಯನ್ನು ಬಯಸುತ್ತಿದ್ದಾರೆ. ಈ ಹಿಂದೆ ರೈತರು ಫೆಬ್ರವರಿ 13 ಮತ್ತು ಫೆಬ್ರವರಿ 21 ರಂದು ದೆಹಲಿ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದ್ದರು. ಆದಾಗ್ಯೂ, ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶಂಭು ಮತ್ತು ಖಾನೌರಿಯಲ್ಲಿ ಅವರನ್ನು ಭದ್ರತಾ ಪಡೆಗಳು ತಡೆದವು. ರೈತರು, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಅಡಿಯಲ್ಲಿ, ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.
#WATCH | Police use tear gas to disperse protesting #farmers at the Haryana-Punjab #ShambhuBorder.
Track LIVE updates 🔗https://t.co/wHqRtYWek6
(📽️: ANI) pic.twitter.com/wqMoBBZB2J
— Hindustan Times (@htTweets) December 6, 2024
ರೈತ ಮುಖಂಡರಾದ ಸುರ್ಜಿತ್ ಸಿಂಗ್ ಫೂಲ್, ಸತ್ನಾಮ್ ಸಿಂಗ್ ಪನ್ನು, ಸವೀಂದರ್ ಸಿಂಗ್ ಚೌತಾಲಾ, ಬಲ್ಜಿಂದರ್ ಸಿಂಗ್ ಚಡಿಯಾಲ ಮತ್ತು ಮಂಜಿತ್ ಸಿಂಗ್ ನೇತೃತ್ವದಲ್ಲಿ 101 ರೈತರ ಗುಂಪು ಮಧ್ಯಾಹ್ನ 1 ಗಂಟೆಗೆ ಸಂಸತ್ತಿನತ್ತ ಪಾದಯಾತ್ರೆ ಆರಂಭಿಸಿದೆ. ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಪ್ರತಿಭಟನಾ ಸ್ಥಳದಲ್ಲಿದ್ದು, ರಾಷ್ಟ್ರ ರಾಜಧಾನಿಯತ್ತ ಮೆರವಣಿಗೆ ನಡೆಸಿದ 101 ರೈತರಲ್ಲಿ ಇರಲಿಲ್ಲ.
VIDEO | Farmers' 'Delhi Chalo' march: "Why is the government behaving with us like an enemy country? We are citizens of this country and have made a lot of sacrifices for the nation," says farmer leader Sarwan Singh Pandher at a press conference on Shambhu border.
(Full video… pic.twitter.com/X6YnDdcBK9
— Press Trust of India (@PTI_News) December 6, 2024
ಪ್ರತಿಭಟನಾ ನಿರತ ರೈತರು, ತ್ರಿವರ್ಣ ಧ್ವಜಗಳನ್ನು ಬೀಸುತ್ತಾ ಬ್ಯಾರಿಕೇಡಿಂಗ್‌ನ ಒಂದು ಪದರವನ್ನು ಒಡೆದಿದ್ದು, ಕಾಂಕ್ರೀಟ್ ಬ್ಲಾಕ್‌ಗಳು, ಕಬ್ಬಿಣದ ಮೊಳೆಗಳು ಮತ್ತು ಮುಳ್ಳುತಂತಿಗಳ ಭಾರೀ ಭದ್ರತೆ ಅವರು ಮತ್ತಷ್ಟು ಚಲಿಸದಂತೆ ತಡೆಯಿತು.
ಅಂಬಾಲದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ
ರೈತ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಅಂಬಾಲಾದಲ್ಲಿ ಡಿಸೆಂಬರ್ 9 ರವರೆಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ರೈತರನ್ನು ನಿಭಾಯಿಸಲು ಸಾಕಷ್ಟು ಪಡೆಗಳಿವೆ ಎಂದು ಪೊಲೀಸರು ಹೇಳಿದ್ದು, ಭಾರೀ ಬ್ಯಾರಿಕೇಡ್ ಅಳವಡಿಸಲಾಗಿದೆ. ಈ ನಡುವೆ ಅಂಬಾಲ ಜಿಲ್ಲಾಡಳಿತವು ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಕೂಟಗಳನ್ನು ನಿಷೇಧ ಹೇಳಿದೆ.
WATCH | #Haryana security forces fired tear gas shells and rubber bullets at farmers at the Haryana-Shambhu border. According to leaders of the Kisan Mazdoor Morcha, four members of their group have been injured so far. Despite the action, the farmers have refused to retreat.… pic.twitter.com/LZ09UW0mVc
— The Indian Express (@IndianExpress) December 6, 2024
ರೈತ ಮುಖಂಡ ಪಂಧೇರ್ ಮಾತನಾಡಿ, ರೈತರು ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ಹೋಗುವ ಬದಲು ಕಾಲ್ನಡಿಗೆಯಲ್ಲಿ ಮೆರವಣಿಗೆ ಮಾಡುತ್ತಾರೆ. ನಾವು ಕಳೆದ ಎಂಟು ತಿಂಗಳಿಂದ ಇಲ್ಲಿ ಕುಳಿತಿದ್ದೇವೆ. ರೈತರ ಆಂದೋಲನಕ್ಕೆ ಖಾಪ್ ಪಂಚಾಯತ್‌ಗಳು ಮತ್ತು ವ್ಯಾಪಾರಿ ಸಮುದಾಯದ ಸದಸ್ಯರಿಂದ ಬೆಂಬಲ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್ ಇಡೀ ಜೀವನವನ್ನು ಸಾಮಾಜಿಕ ಹೋರಾಟ-ಸಮಾಜದ ಪರಿವರ್ತನೆಗಾಗಿ ತೊಡಗಿಸಿಕೊಂಡಿದ್ದರು: ಮುಖ್ಯಮಂತ್ರಿ ಸಿದ್ದರಾಮಯ್ಯ
ಅಂಬೇಡ್ಕರ್ ಇಡೀ ಜೀವನವನ್ನು ಸಾಮಾಜಿಕ ಹೋರಾಟ-ಸಮಾಜದ ಪರಿವರ್ತನೆಗಾಗಿ ತೊಡಗಿಸಿಕೊಂಡಿದ್ದರು: ಮುಖ್ಯಮಂತ್ರಿ ಸಿದ್ದರಾಮಯ್ಯ


