ತಮಿಳುನಾಡಿನ ಚೆನ್ನೈ ಸಮೀಪದ ಶ್ರೀಪೆರಂಬದೂರಿನಲ್ಲಿರುವ ಸ್ಯಾಮ್‌ಸಂಗ್ ಕಂಪನಿಯ ಸ್ಥಾವರದಲ್ಲಿ ಸ್ಯಾಮ್‌ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್ (ಎಸ್‌ಐಡಬ್ಲ್ಯುಯು) ನೋಂದಾಯಿಸಲು ಮದ್ರಾಸ್ ಹೈಕೋರ್ಟ್ ಡಿಸೆಂಬರ್ 5 ಗುರುವಾರ ತಮಿಳುನಾಡು ಸರ್ಕಾರಕ್ಕೆ ಆರು ವಾರಗಳ ಕಾಲಾವಕಾಶ ನೀಡಿದೆ. 6 ವಾರಗಳಲ್ಲಿ ಸ್ಯಾಮ್‌ಸಂಗ್
ನ್ಯಾಯಮೂರ್ತಿ ಡಿ. ಭರತ ಚಕ್ರವರ್ತಿ ನೇತೃತ್ವದ ಪೀಠವು ಜೂನ್‌ನಲ್ಲಿ ಸಲ್ಲಿಸಿದ ಅರ್ಜಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಟ್ರೇಡ್ ಯೂನಿಯನ್‌ಗಳ ರಿಜಿಸ್ಟ್ರಾರ್‌ಗೆ ಸೂಚಿಸಿದೆ. ಕಾನೂನಿನ ಪ್ರಕಾರ, ಕಾರ್ಮಿಕ ಇಲಾಖೆಗೆ ಅರ್ಜಿಯನ್ನು ಕಳುಹಿಸಿದ 45 ದಿನಗಳಲ್ಲಿ ಒಕ್ಕೂಟವನ್ನು ನೋಂದಾಯಿಸಬೇಕಿದೆ. 6 ವಾರಗಳಲ್ಲಿ ಸ್ಯಾಮ್‌ಸಂಗ್
ಸ್ಯಾಮ್‌ಸಂಗ್ ಘಟಕದ 1,200 ಕ್ಕೂ ಹೆಚ್ಚು ಕಾರ್ಮಿಕರು ಹಲವು ತಿಂಗಳಿನಿಂದ ಉತ್ತಮ ವೇತನ, ಕೆಲಸದ ಪರಿಸ್ಥಿತಿಗಳು ಮತ್ತು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಗೆ ಸಂಯೋಜಿತವಾದ ಕಾರ್ಮಿಕ ಒಕ್ಕೂಟದ ಮಾನ್ಯತೆಗಾಗಿ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ. ಕಾರ್ಮಿಕರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ ಎಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ ನಂತರವೂ ಪ್ರತಿಭಟನಾಕಾರರನ್ನು ಬಂಧಿಸಲು ಭಾರೀ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಯೂನಿಯನ್ ನೋಂದಣಿಯನ್ನು ವಿಳಂಬ ಮಾಡಿದ್ದಕ್ಕಾಗಿ ತಮಿಳುನಾಡು ಸರ್ಕಾರದ ಕಾರ್ಮಿಕ ಇಲಾಖೆ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಎಸ್‌ಐಡಬ್ಲ್ಯೂಯು ಪ್ರಧಾನ ಕಾರ್ಯದರ್ಶಿ ಪಿ. ಎಲ್ಲನ್ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಸ್ಯಾಮ್‌ಸಂಗ್ ಇಂಡಿಯಾ ಇಂಪ್ಲೀಡಿಂಗ್ ಅರ್ಜಿಯನ್ನು ಸಲ್ಲಿಸಿತ್ತು.
ಸ್ಯಾಮ್‌ಸಂಗ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಆರ್. ರಾಜಗೋಪಾಲ್, ಕಂಪನಿಯು ಯಾವುದೇ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
“ಸ್ಯಾಮ್‌ಸಂಗ್ ಅಂತರಾಷ್ಟ್ರೀಯ ಕಂಪನಿಯಾಗಿದೆ. ಕಾರ್ಮಿಕರು ಒಕ್ಕೂಟವನ್ನು ನೋಂದಾಯಿಸುವ ಹಕ್ಕನ್ನು ಹೊಂದಿದ್ದಾರೆ ಆದರೆ Samsung ಹೆಸರನ್ನು ಬಳಸುವ ಮೂಲಭೂತ ಹಕ್ಕು ಅವರಿಗೆ ಇಲ್ಲ. ಅವರ ಮುಷ್ಕರದಿಂದ ನಮಗೆ 100 ಮಿಲಿಯನ್ ಡಾಲರ್ ನಷ್ಟ ಉಂಟಾಗಿದೆ” ಎಂದು ಅವರು ಹೇಳಿದ್ದಾರೆ.
ಗುರುವಾರ ಮತ್ತೆ ಅರ್ಜಿಯನ್ನು ಆಲಿಸಿದ ಮದ್ರಾಸ್ ಹೈಕೋರ್ಟ್, ಟ್ರೇಡ್ ಯೂನಿಯನ್ಸ್ ಆಕ್ಟ್, 1926 ರ ಅಡಿಯಲ್ಲಿ ಆದೇಶವನ್ನು ಹೊರಡಿಸುವುದು ಟ್ರೇಡ್ ಯೂನಿಯನ್/ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತರ ಶಾಸನಬದ್ಧ ಕರ್ತವ್ಯವಾಗಿದೆ ಎಂದು ಹೇಳಿದೆ.
ಕಾರ್ಮಿಕರ ಜೊತೆಗೆ ನಡೆಸಿದ ಹಲವಾರು ಸುತ್ತಿನ ಚರ್ಚೆಯ ನಂತರ, ತಮಿಳುನಾಡು ಸರ್ಕಾರವು ಯೂನಿಯನ್ ಅನ್ನು ಗುರುತಿಸಲಾಗುವುದು ಎಂದು ಕಾರ್ಮಿಕರಿಗೆ ಭರವಸೆ ನೀಡಿತ್ತು ಮತ್ತು ಅಕ್ಟೋಬರ್ 16 ರಂದು ಮುಷ್ಕರವನ್ನು ಹಿಂತೆಗೆದುಕೊಳ್ಳಲಾಯಿತು.
ಇದನ್ನೂ ಓದಿ: ತಮಿಳುನಾಡು | ಮುಷ್ಕರ ಕೈಬಿಟ್ಟ ಸ್ಯಾಮ್‌ಸಂಗ್ ಕಾರ್ಮಿಕರು : ಸಂಧಾನ ಸಭೆ ಬಳಿಕ ಸರ್ಕಾರ ಘೋಷಣೆ
ತಮಿಳುನಾಡು | ಮುಷ್ಕರ ಕೈಬಿಟ್ಟ ಸ್ಯಾಮ್‌ಸಂಗ್ ಕಾರ್ಮಿಕರು : ಸಂಧಾನ ಸಭೆ ಬಳಿಕ ಸರ್ಕಾರ ಘೋಷಣೆ


