ತಮ್ಮ ಬೆಲೆಗಳಿಗೆ ಎಂಎಸ್‌ಪಿ ಖಾತರಿ ನೀಡುವ ಕಾನೂನು ರಚಿಸಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ರೈತರು ದೆಹಲಿಗೆ ಪಾದಯಾತ್ರೆ ಆರಂಭಿಸಿರುವ ನಡುವೆ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಸರ್ಕಾರವು ಎಲ್ಲಾ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಿದೆ ಎಂದು ಹೇಳಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ರೈತರ ಎಮ್‌ಎಸ್‌ಪಿ ಸಮಸ್ಯೆಗೆ ಪೂರಕವಾಗಿ ಉತ್ತರಿಸಿದ ಅವರು ಈ ಭರವಸೆ ನೀಡಿದ್ದಾರೆ. ರೈತ ಹೋರಾಟದ
“ರೈತರ ಎಲ್ಲಾ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಎಂದು ನಾನು ನಿಮ್ಮ ಮೂಲಕ ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ. ಇದು ಮೋದಿ ಸರ್ಕಾರ ಮತ್ತು ಮೋದಿ ಅವರ ಭರವಸೆಯನ್ನು ಪೂರೈಸುವ ಭರವಸೆ” ಎಂದು ಚೌಹಾಣ್ ಹೇಳಿದ್ದಾರೆ.
ವಿಪಕ್ಷಗಳನ್ನು ಉಲ್ಲೇಖಿಸಿದ ಅವರು, ನಮ್ಮ ಮಿತ್ರರು ಅಧಿಕಾರದಲ್ಲಿದ್ದಾಗ ಎಂಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ದಾಖಲೆ ಸಮೇತ ಹೇಳಿಕೆ ನೀಡಿದ್ದರು. ಅದರಲ್ಲೂ ಉತ್ಪನ್ನದ ವೆಚ್ಚಕ್ಕಿಂತ ಶೇ.50ರಷ್ಟು ಹೆಚ್ಚು ನೀಡುವ ಕುರಿತು ನನ್ನ ಬಳಿ ದಾಖಲೆ ಇದೆ ಎಂದು ಅವರು ಹೇಳಿದ್ದಾರೆ. ಅವರು ತಮ್ಮ ಪ್ರತಿಪಾದನೆಯನ್ನು ಬೆಂಬಲಿಸಲು ಮಾಜಿ ಕೃಷಿ ಸಚಿವ ಕಾಂತಿಲಾಲ್ ಭೂರಿಯಾ, ಕೃಷಿ ಮಂತ್ರಿಗಳಾದ ಶರದ್ ಪವಾರ್ ಮತ್ತು ಕೆ.ವಿ. ಥಾಮಸ್ ಅವರನ್ನು ಉಲ್ಲೇಖಿಸಿದ್ದಾರೆ. ರೈತ ಹೋರಾಟದ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅವರ ಈ ಹೇಳಿಕೆಗಳ ನಂತರ, ರಾಜ್ಯಸಭಾ ಸ್ಪೀಕರ್ ಜಗದೀಪ್ ಧಂಖರ್ ಅವರು, ಈ ಹೇಳಿಕೆಯ ದೃಢೀಕರಣಕ್ಕಾಗಿ ದಾಖಲೆಗಳನ್ನು ದಾಖಲಿಸುವಂತೆ ಕೇಳಿಕೊಂಡರು. ಅದನ್ನು ಸಚಿವ ಚೌಹಾಣ್ ಒಪ್ಪಿಕೊಂಡರು.
“ಅವರು ಎಂದಿಗೂ ರೈತರನ್ನು ಗೌರವಿಸಿಲ್ಲ ಮತ್ತು ಲಾಭದಾಯಕ ಬೆಲೆಗಳ ರೈತರ ಬೇಡಿಕೆಗಳನ್ನು ಎಂದಿಗೂ ಗಂಭೀರವಾಗಿ ಪರಿಗಣಿಸಿಲ್ಲ. 2019 ರಿಂದ ಪ್ರಧಾನಿ ನರೇಂದ್ರ ಮೋದಿ ಅವರು 50% ದಷ್ಟು ಲಾಭವನ್ನು ನೀಡುವ ಮೂಲಕ ರೈತರಿಗೆ ಉತ್ಪಾದನಾ ವೆಚ್ಚದ ಮೇಲೆ ಕನಿಷ್ಠ ಬೆಂಬಲ ಬೆಲೆಯನ್ನು ಲೆಕ್ಕ ಹಾಕಲು ನಿರ್ಧರಿಸಿದ್ದಾರೆ ಎಂದು ನಾನು ನಿಮ್ಮ ಮೂಲಕ ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ” ಎಂದು ಸಚಿವ ಚೌಹಾಣ್ ಪ್ರತಿಪಾದಿಸಿದ್ದಾರೆ.
ಮೋದಿ ಸರ್ಕಾರ ಈಗಾಗಲೇ ರೈತರಿಗೆ ಲಾಭದಾಯಕ ಬೆಲೆಗಳನ್ನು ನೀಡುತ್ತಿದೆ ಎಂದ ಅವರು, ಭತ್ತ, ಗೋಧಿ, ಜೋಳ, ಸೋಯಾಬೀನ್ ಅನ್ನು ಮೂರು ವರ್ಷಗಳ ಹಿಂದಿನ ಉತ್ಪಾದನಾ ವೆಚ್ಚದ 50%ಕ್ಕಿಂತ ಹೆಚ್ಚು ಬೆಲೆಯಲ್ಲಿ ಖರೀದಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಸರಕುಗಳ ದರಗಳು ಕುಸಿದಾಗಲೆಲ್ಲಾ ರಫ್ತು ಸುಂಕಗಳು ಮತ್ತು ಬೆಲೆಗಳನ್ನು ಬದಲಾಯಿಸುವಲ್ಲಿ ಸರ್ಕಾರ ಹಸ್ತಕ್ಷೇಪ ನಡೆಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಕೃಷಿ ಸಾಲ ಮನ್ನಾ ನೀತಿಯ ಚೌಕಟ್ಟನ್ನು ರಚಿಸಲು ಸರ್ಕಾರ ಪರಿಗಣಿಸುತ್ತಿದೆಯೇ ಎಂಬ ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಚೌಹಾಣ್, ಅದರ ಬದಲಿಗೆ ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. “ನಾವು ರೈತರ ಆದಾಯವನ್ನು ಹೆಚ್ಚಿಸಬೇಕು ಎಂದು ನಂಬುತ್ತೇವೆ. ಅದಕ್ಕಾಗಿ ಈ ಸರ್ಕಾರವು ನಿರಂತರವಾಗಿ ಕೆಲಸ ಮಾಡುತ್ತಿದೆ” ಎಂದು ಅವರು ಹೇಳಿದರು.


