1987ರಲ್ಲಿ ಉತ್ತರ ಪ್ರದೇಶದ ಹಾಶಿಂಪುರದಲ್ಲಿ 42 ಮುಸ್ಲಿರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಎಂಟು ಅಪರಾಧಿಗಳಿಗೆ ಜಾಮೀನು ನೀಡಿದೆ ಎಂದು ಪಿಟಿಐ ವರದಿ ಮಾಡಿದೆ. ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು ಅಪರಾಧಿಗಳು 2018 ರಿಂದ ಜೈಲಿನಲ್ಲಿದ್ದಾರೆ ಎಂದು ಹೇಳಿದೆ. ಈ ಹಿಂದೆ ದೆಹಲಿ ಹೈಕೋರ್ಟ್ ಅವರ ಖುಲಾಸೆಯನ್ನು ರದ್ದುಗೊಳಿಸಿತ್ತು. 1987ರ ಹಾಶಿಂಪುರ ಹತ್ಯಾಕಾಂಡ
1987ರ ಮೇ 22ರಂದು ನಡೆದ ಈ ಅಪರಾಧದಲ್ಲಿ ಉತ್ತರ ಪ್ರದೇಶ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ ಪೊಲೀಸರು ರಾಜ್ಯದ ಮೀರತ್ ಜಿಲ್ಲೆಯ ಹಾಶಿಂಪುರದಿಂದ 42 ಮುಸ್ಲಿರನ್ನು ಬಂಧಿಸಿ, ಲಾರಿಯಲ್ಲಿ ಕೂರಿಸಿ, ಹತ್ತಿರದ ಕಾಲುವೆಗೆ ಓಡಿಸಿ, ಅವರೆಲ್ಲರನ್ನೂ ಗುಂಡಿಕ್ಕಿ ನಂತರ ಶವಗಳನ್ನು ನೀರಿಗೆ ಎಸೆದಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇದು ನಡೆದು ಒಂದು ದಿನದ ನಂತರ, ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿಯ ಸದಸ್ಯರೊಂದಿಗೆ ಗುಂಪೊಂದು ಮೀರತ್‌ನ ಮಲಿಯಾನಾ ಗ್ರಾಮವನ್ನು ಎಲ್ಲಾ ಕಡೆಯಿಂದ ಸುತ್ತುವರೆದು ಮುಸ್ಲಿಂ ಮಹಿಳೆಯ ಮತ್ತು ಮಕ್ಕಳು ಸೇರಿದಂತೆ ಎಲ್ಲರ ಮೇಲೆ ಗುಂಡು ಹಾರಿಸಿತ್ತು. 1987ರ ಹಾಶಿಂಪುರ ಹತ್ಯಾಕಾಂಡ
ಘಟನೆಯ ವಿಚಾರಣೆ ನಡೆಸಿದ್ದ 2015 ರ ವಿಚಾರಣಾ ನ್ಯಾಯಾಲಯವು ಪ್ರಾಂತೀಯ ಸಶಸ್ತ್ರ ಕಾನ್ಸ್ಟಾಬ್ಯುಲರಿಯ 16 ಸಿಬ್ಬಂದಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿತು. ಆದರೆ ಅಕ್ಟೋಬರ್ 31, 2018 ರಂದು, ನ್ಯಾಯಮೂರ್ತಿಗಳಾದ ಎಸ್ ಮುರಳೀಧರ್ ಮತ್ತು ವಿನೋದ್ ಗೋಯೆಲ್ ಅವರನ್ನೊಳಗೊಂಡ ದೆಹಲಿ ಹೈಕೋರ್ಟ್ ಪೀಠವು ಈ ತೀರ್ಪನ್ನು ತಳ್ಳಿಹಾಕಿತ್ತು.
ಶುಕ್ರವಾರ ನಾಲ್ವರು ಅಪರಾಧಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಅಮಿತ್ ಆನಂದ್ ತಿವಾರಿ ಅವರು, 2018 ರಲ್ಲಿ ಹೈಕೋರ್ಟ್‌ನ ತೀರ್ಪು ತಪ್ಪಾದ ಆಧಾರದ ಮೇಲೆ ಇದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದಾರೆ. ಮೇಲ್ಮನವಿ ಪ್ರಕ್ರಿಯೆಯಲ್ಲಿ ಅಪರಾಧಿಗಳ ವರ್ತನೆಯು ಅನುಕರಣೀಯವಾಗಿದೆ ಎಂದು ತಿವಾರಿ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಸುಪ್ರೀಂಕೋರ್ಟ್ ಅವರ ವಾದಗಳನ್ನು ಅಂಗೀಕರಿಸಿ ಎಂಟು ಅಪರಾಧಿಗಳ ಜಾಮೀನು ಅರ್ಜಿಯನ್ನು ಅಂಗೀಕರಿಸಿದೆ.


