ಜೆರುಸಲೇಂ: ಗಾಜಾದಲ್ಲಿ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಗಳಲ್ಲಿ ಸಂಪೂರ್ಣವಾಗಿ ಕೆಲ ಪ್ಯಾಲೆಸ್ತೀನ್ ಕುಟುಂಬಗಳು ನಿರ್ನಾಮವಾಗಿವೆ. ಕೆಲವು ಬಾಂಬ್ ದಾಳಿಗಳು ಮಕ್ಕಳು ಸೇರಿದಂತೆ ಒಂದೇ ಮನೆಯ ನಾಲ್ಕು ತಲೆಮಾರುಗಳನ್ನು ನಾಶಮಾಡಿವೆ ಎಂದು ಇಸ್ರೇಲಿ ಪತ್ರಿಕೆ ಹಾರೆಟ್ಜ್ ವರದಿ ಮಾಡಿದೆ.
ಅನಾಮಧೇಯ ಪತ್ರಕರ್ತರ ಹೇಳಿಕೆಗಳನ್ನು ಉಲ್ಲೇಖಿಸಿ, ಹಾರೆಟ್ಜ್ ವರದಿಯು, “ಅಲ್-ನಸ್ರ್, ಡೊಗ್ಮುಶ್, ಸೇಲಂ, ಅಲ್-ಮಸ್ರಿ ಮತ್ತು ಅಲ್-ಅಸ್ತಲ್ ಕುಟುಂಬಗಳನ್ನು ಪ್ಯಾಲೆಸ್ತೀನ್ ಜನಸಂಖ್ಯಾ ನೋಂದಣಿಯಿಂದ ಅಳಿಸಿಹಾಕಲಾಗಿದೆ” ಎಂದು ಹೇಳಿದೆ.
ವರದಿಯು ಗಾಜಾದಲ್ಲಿನ ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳನ್ನು ಉಲ್ಲೇಖಿಸಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಪ್ರಾರಂಭ ಮತ್ತು ಈ ವರ್ಷದ ನವೆಂಬರ್ 1 ರ ನಡುವೆ ಸುಮಾರು 7,160 ಕುಟುಂಬಗಳ ನಡುವೆ ಬಾಂಬ್ ದಾಳಿ ನಡೆಸಲಾಗಿದೆ” ಎಂದು ಇದು ಬಹಿರಂಗಪಡಿಸಿದೆ.
1,410 ಕುಟುಂಬಗಳು ಸಂಪೂರ್ಣವಾಗಿ ನಾಶವಾಗಿದ್ದು, 5,444 ಜನರು ಸತ್ತಿದ್ದಾರೆ. ಹಾಗೆಯೇ 3,463 ಕುಟುಂಬಗಳಲ್ಲಿ, 7,934 ಜನರು ಸಾವನ್ನಪ್ಪಿದ್ದಾರೆ ಮತ್ತು ಇದರಲ್ಲಿ ಪ್ರತಿ ಕುಟುಂಬಕ್ಕೆ ಒಬ್ಬ ಸದಸ್ಯ ಮಾತ್ರ ಉಳಿದುಕೊಂಡಿದ್ದಾರೆ ಎಂದು ಅದು ವರದಿಯಲ್ಲಿ ಹೇಳಿದೆ.
2,287 ಕುಟುಂಬಗಳಲ್ಲಿ, 9,577 ಜನರು ಸಾವನ್ನಪ್ಪಿದ್ದು, ಇದರಲ್ಲಿ ಇಬ್ಬರು ಅಥವಾ ಹೆಚ್ಚಿನ ಕುಟುಂಬ ಸದಸ್ಯರು ಬದುಕುಳಿದಿದ್ದಾರೆ ಎಂದು ವರದಿ ತಿಳಿಸಿದೆ..
ಹಾರೆಟ್ಜ್ ಲೇಖನಕ್ಕೆ ಸಂಬಂಧಿಸಿದಂತೆ ಕಾಮೆಂಟ್‌ಗಾಗಿ ಮಾಡಿದ ವಿನಂತಿಗೆ ಇಸ್ರೇಲ್ ರಕ್ಷಣಾ ಪಡೆಗಳು ಪ್ರತಿಕ್ರಿಯಿಸಲಿಲ್ಲ ಎಂದು ಹೇಳಿದೆ.
ಇಸ್ರೇಲ್ ಗಾಜಾಪಟ್ಟಿಯ ಮೇಲೆ ನರಮೇಧದ ಯುದ್ಧವನ್ನು ಪ್ರಾರಂಭಿಸಿದೆ, ಇದು 2023ರ ಅಕ್ಟೋಬರ್ 7 ರಿಂದ 44,600 ಕ್ಕೂ ಹೆಚ್ಚು ಜನರನ್ನು ಕೊಂದು ಹಾಕಿದ್ದು, ಇದರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ.
ಕಳೆದ ತಿಂಗಳು, ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರಿಗೆ ಯುದ್ಧ ಅಪರಾಧಗಳು ಮತ್ತು ಗಾಜಾದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಬಂಧನ ವಾರಂಟ್ ಹೊರಡಿಸಿತು.
ಗಾಜಾದ ಮೇಲಿನ ಯುದ್ಧಕ್ಕಾಗಿ ಇಸ್ರೇಲ್ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ನರಮೇಧದ ಪ್ರಕರಣವನ್ನು ಎದುರಿಸುತ್ತಿದೆ.
ಇದನ್ನೂ ಓದಿ….ಮಾನಸಿಕ ಅಸ್ವಸ್ಥ ರೋಗಿಗಳನ್ನು ಬಿಸಾಡಿದ ಆಸ್ಪತ್ರೆ: ಒಂದು ಶವ ಪತ್ತೆ


