ರಾಜಸ್ಥಾನ ರಾಜ್ಯದ ದೌಸಾದಲ್ಲಿ 150 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಐದು ವರ್ಷದ ಬಾಲಕನನ್ನು ಹೊರತೆಗೆಯಲು ರಕ್ಷಣಾ ಅಧಿಕಾರಿಗಳು 56 ಗಂಟೆಗಳ ಸತತ ಪ್ರಯತ್ನಗಳ ಹೊರತಾಗಿಯೂ ಬಾಲಕ ಮೃತಪಟ್ಟಿದ್ದಾನೆ.
ಎರಡು ದಿನಗಳ ಕಾಲ ಕೊಳವೆ ಬಾವಿಯೊಳಗೆ ಸಿಲುಕಿದ್ದ ಬಾಲಕ ಹೊರಗೆ ತೆಗೆಯುವಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ, ಆತನನ್ನು ಹಗ್ಗದಿಂದ ಬೋರ್‌ವೆಲ್‌ನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವನು ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೈದಾನದಲ್ಲಿ ಆಟವಾಡುತ್ತಿದ್ದ ಆರ್ಯನ್ ಬೋರ್‌ವೆಲ್‌ನಲ್ಲಿ ಬಿದ್ದಿದ್ದು, ಒಂದು ಗಂಟೆಯ ನಂತರ ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು. ಪೈಪ್ ಆತನಿಗೆ ಆಮ್ಲಜನಕವನ್ನು ಪೂರೈಸಲಾಯಿತು. ಅವನ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಬೋರ್‌ವೆಲ್‌ಗೆ ಕ್ಯಾಮೆರಾವನ್ನು ಸೇರಿಸಲಾಯಿತು.
ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಮಗುವನ್ನು ತಲುಪಲು ಡ್ರಿಲ್ಲಿಂಗ್ ಮೆಷಿನ್‌ಗಳನ್ನು ಬಳಸಿ ಸಮಾನಾಂತರ ಹೊಂಡವನ್ನು ತೋಡಲಾಯಿತು. ಡ್ರಿಲ್ಲಿಂಗ್ ಮೆಷಿನ್‌ನಲ್ಲಿ ತಾಂತ್ರಿಕ ದೋಷ ಮತ್ತು ಸುಮಾರು 160 ಅಡಿಗಳಷ್ಟು ನೀರಿನ ಮಟ್ಟ ಸೇರಿದಂತೆ ಕಾರ್ಯಾಚರಣೆಯಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸಿದ್ದಾರೆ ಎಂದು ಅವರು ಹೇಳಿದರು.
ಆದರೆ, ಅಗೆಯುವ ಪ್ರಯತ್ನಗಳು ಪ್ರಯೋಜನವಿಲ್ಲ ಎಂದು ಗೊತ್ತಾಗಿದ್ದು, ಬಾಲಕನ ಮೇಲೆ ಮಣ್ಣು ಬಿದ್ದಿದ್ದರಿಂದ, ರಕ್ಷಣಾ ಸಿಬ್ಬಂದಿ ಅವನ ಸುತ್ತಲೂ ಹಗ್ಗವನ್ನು ಕಟ್ಟಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಅವನನ್ನು ಹೊರತೆಗೆದರು.
ಇದನ್ನೂ ಓದಿ; ಮಹಾರಾಷ್ಟ್ರ ಚುನಾವಣೆಯ ವೇಳೆ ಬಳಸಿದ ‘ವೋಟ್ ಜಿಹಾದ್’ ನಂತಹ ಪದಗಳ ಬಗ್ಗೆ ವಿಶ್ಲೇಷಿಸಲಾಗುತ್ತಿದೆ: ಚುನಾವಣಾ ಅಧಿಕಾರಿ


