ತೆಲಂಗಾಣದ ತಹಶೀಲ್ದಾರ್ ಕಚೇರಿಯಲ್ಲಿ ವಿಜಯಾ ರೆಡ್ಡಿ ತಹಶೀಲ್ದಾರ್ ರನ್ನು ಕೊಲೆಗೈದ ಮೂರು ದಿನಗಳ ನಂತರ ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ಇಂಥಹುದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಕರ್ನೂಲ್ ನ ತಹಶೀಲ್ದಾರ್ ಉಮಾ ಮಹೇಶ್ವರಿ ಅವರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಕುಡಿದು ಕಚೇರಿಯೊಳಗೆ ಬಂದಿದ್ದ ಐದು ಮಂದಿ ಉಮಾ ಮಹೇಶ್ವರಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಯಾವುದೇ ಅರ್ಜಿಯನ್ನೂ ಸಹ ವರು ತಂದಿರಲಿಲ್ಲ. ಕಂಠಪೂರ್ತಿ ಕುಡಿದು ಬಂದಿದ್ದ ಅವರನ್ನು ನೋಡಿ ಭಯಗೊಂಡಿದ್ದೆ. ಹೀಗಾಗಿ ಕುರ್ಚಿಗೆ ಮತ್ತು ಭೇಟಿಯಾಗಲು ಬಂದವರ ಮಧ್ಯೆ ಬ್ಯಾರಿಕೇಡ್ ನಂತೆ ಹಗ್ಗ ಕಟ್ಟಿದ್ದೆ ಎಂದು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಕಚೇರಿಯಲ್ಲಿ ಉಮಾ ಮಹೇಶ್ವರಿ ಕುಡುಕರ ವರ್ತನೆಯಿಂದ ಭೀತಿಗೊಳಗಾಗಿದ್ದರು. ಆದ್ದರಿಂದ ಅವರು ಹಗ್ಗ ಕಟ್ಟಿದ್ದರು. ಆ ಕುಡುಕರು ಹೋದ ಒಂದು ಗಂಟೆಯ ನಂತರ ಹಗ್ಗ ಬಿಚ್ಚಿದರು ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಮೂರು ದಿನಗಳ ಹಿಂದೆ ತೆಲಂಗಾಣದಲ್ಲಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿಜಯಾ ರೆಡ್ಡಿ ಅವರನ್ನು ಲಂಚ ಕೇಳಿದ್ದರು ಎಂದು ಆರೋಪಿಸಿ ಕಚೇರಿಯಲ್ಲೇ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು.


