ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲಾ ನ್ಯಾಯಾಲಯವು 14ನೇ ಶತಮಾನದ ಐತಿಹಾಸಿಕ ಅಟಾಲಾ ಮಸೀದಿಯ ಸಮೀಕ್ಷೆಗೆ ಆದೇಶಿಸಲು ಸೋಮವಾರ (ಡಿ.16) ನಿರಾಕರಿಸಿದೆ.
ಡಿಸೆಂಬರ್ 12ರಂದು ಮಧ್ಯಂತರ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಮುಂದಿನ ಆದೇಶದವರೆಗೆ ಮಸೀದಿಗಳ ಸಮೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ನೀಡದಂತೆ ಸೂಚಿಸಿದೆ. ಈ ಹಿನ್ನೆಲೆ, ಜೌನ್‌ಪುರ ಜಿಲ್ಲಾ ನ್ಯಾಯಾಲಯ ಮಸೀದಿಯ ಸಮೀಕ್ಷೆಗೆ ಆದೇಶಿಸಲು ನಿರಾಕರಿಸಿದೆ ಎಂದು ವರದಿಯಾಗಿದೆ.
No survey order for now in the #AtalaMosque case.
In light of #SupremeCourt's December 12 order, the #JaunpurCourt has now posted the matter for orders on March 2, 2025.
Court said: office to not issue any main writ. strict compliance of the order of the Supreme Court be made. https://t.co/vJ2Bk9ucui
— Live Law (@LiveLawIndia) December 16, 2024
‘ಸ್ವರಾಜ್ ವಾಹಿನಿ ಅಸೋಸಿಯೇಷನ್’ ಎಂಬ ಹಿಂದುತ್ವ ಸಂಘಟನೆ ಮತ್ತು ಸಂತೋಷ್ ಕುಮಾರ್ ಮಿಶ್ರಾ ಎಂಬವರು ಪುರಾತನ ಮಸೀದಿಯನ್ನು ‘ಅಟಾಲಾ ದೇವಿ ಮಂದಿರ’ ಎಂದು ಘೋಷಿಸಲು ಕೋರಿದ್ದರು. ಸನಾತನದ ಧರ್ಮದ ಅನುಯಾಯಿಗಳು ಅಲ್ಲಿ ಪೂಜೆ ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ಪ್ರತಿಪಾದಿಸಿದ್ದರು.
ಮಸೀದಿಯನ್ನು ಮಂದಿರ ಎಂದು ಘೋಷಿಸುವಂತೆ ಕೋರಿ ಈ ಹಿಂದೆ ಹಿಂದುತ್ವ ಸಂಘಟನೆಗಳು ಸಲ್ಲಿಸಿರುವ ಬಹುತೇಕ ಅರ್ಜಿಗಳನ್ನು ವಿಚಾರಣೆ ನಡೆಸಿರುವ ದೇಶದ ವಿವಿಧ ನ್ಯಾಯಾಲಯಗಳು, ಮಸೀದಿಗಳ ಸಮೀಕ್ಷೆಗೆ ಆದೇಶಿಸಿವೆ. ಡಿಸೆಂಬರ್ 12ರ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಇದೇ ಮೊದಲ ಬಾರಿಗೆ ಸಮೀಕ್ಷೆಗೆ ಆದೇಶಿಸಲು ನಿರಾಕರಿಸಿದೆ.
ಜೌನ್‌ಪುರ ಜಿಲ್ಲಾ ನ್ಯಾಯಾಲಯದ ಸಿವಿಲ್ ಜಡ್ಜ್ (ಜೆಡಿ) ಸುಧಾ ಶರ್ಮಾ ಅವರು ಪ್ರಕರಣ ಮುಂದಿನ ವಿಚಾರಣೆಯನ್ನು 2025ರ ಮಾರ್ಚ್ 2ಕ್ಕೆ ಮುಂದೂಡಿದ್ದಾರೆ. ಇದನ್ನೂ 12 ದಿನಗಳ ಮುಂಚೆ ಆರಾಧನಾ ಸ್ಥಳಗಳ ಕಾಯ್ದೆ-1991ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಬಾಬರಿ ಮಸೀದಿಯ ಜಾಗವನ್ನು ರಾಮಮಂದಿರಕ್ಕೆ ಬಿಟ್ಟುಕೊಟ್ಟು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬಳಿಕ ದೇಶದಲ್ಲಿ ಮಸೀದಿಯಡಿ ಮಂದಿರ ಹುಡುಕುವ ಪರಿಪಾಠ ಹೆಚ್ಚಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಮಥುರಾದ ಶಾಹಿ ಈದ್ಗಾ-ಕೃಷ್ಣ ಜನ್ಮಭೂಮಿ, ವಾರಣಾಸಿಯ ಜ್ಞಾನವಾಪಿ, ಸಂಭಾಲ್‌ನ ಶಾಹಿ ಜಾಮಾ ಮಸೀದಿ, ಅಜ್ಮೀರ್ ದರ್ಗಾ ಶರೀಫ್ ಸೇರಿದಂತೆ ವಿವಿಧ ಮಸೀದಿ ದರ್ಗಾಗಳನ್ನು ದೇವಸ್ಥಾನವೆಂದು ಘೋಷಿಸಲು ಕೋರಲಾಗಿದೆ. ಈ ಪೈಕಿ ಬಹುತೇಕ ಪ್ರಕರಣಗಳಲ್ಲಿ ನ್ಯಾಯಾಲಯಗಳು ಸಮೀಕ್ಷೆಗೆ ಆದೇಶಿಸಿದೆ.
1991ರ ಆರಾಧನಾ ಸ್ಥಳಗಳ ಕಾಯ್ದೆ ದೇಶಕ್ಕೆ ಸ್ವಾತಂತ್ರ್ಯ ಬರುವಾಗ ಆರಾಧನಾ ಸ್ಥಳಗಳು ಹೇಗಿತ್ತೋ, ಅದೇ ಸ್ವರೂಪದಲ್ಲಿ ಮುಂದುವರೆಸಲು ಹೇಳುತ್ತದೆ. ಆದರೆ, ನ್ಯಾಯಾಲಯದ ಸಮೀಕ್ಷೆ ಆದೇಶಗಳು ಈ ಕಾನೂನಿಗೆ ವಿರುದ್ದವಾಗಿದೆ. ಈ ಕಳವಳಕಾರಿ ಬೆಳವಣಿಗೆಯ ವಿರುದ್ದ ಹಲವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಸೀದಿಗಳ ಸಮೀಕ್ಷೆಗೆ ಆದೇಶಿಸುವುದಕ್ಕೆ ಮಧ್ಯಂತರ ತಡೆ ನೀಡಿದೆ. ಆರಾಧನಾ ಸ್ಥಳಗಳ ಕಾಯ್ದೆಯನ್ನು ಪಾಲಿಸುವಂತೆ ಕೆಳ ನ್ಯಾಯಾಲಯಗಳಿಗೆ ಸೂಚಿಸಿದೆ. ಡಿಸೆಂಬರ್ 12ರಂದು ನೀಡಿರುವ ಈ ಆದೇಶ ಅತ್ಯಂತ ಮಹತ್ವದ್ದಾಗಿದೆ.
ಮತ್ತೊಂದೆಡೆ ಆರಾಧನಾ ಸ್ಥಳಗಳ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿಯೂ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿವೆ. ಅದು ಫೆಬ್ರವರಿಯಲ್ಲಿ ವಿಚಾರಣೆಗೆ ಬರಲಿದೆ.
ಇದನ್ನೂ ಓದಿ : ಪರ್ಭಾನಿ ಹಿಂಸಾಚಾರ: ಪೊಲೀಸ್ ಚಿತ್ರಹಿಂಸೆಯೇ ಕಾನೂನು ವಿದ್ಯಾರ್ಥಿಯ ಸಾವಿಗೆ ಕಾರಣ; ದೃಢಪಡಿಸಿದ ವರದಿ


