ಅಮರಾವತಿ: ಸಲಿಂಗಿ ಮಹಿಳಾ ಜೋಡಿಯೊಂದು ಜೊತೆಗೂಡಿ ಬದುಕುವ ಹಕ್ಕನ್ನು ಎತ್ತಿ ಹಿಡಿದಿರುವ ಆಂಧ್ರಪ್ರದೇಶ ಹೈಕೋರ್ಟ್ ಎತ್ತಿ ಹಿಡಿದಿದ್ದು, ತಮ್ಮ ಸಂಗಾತಿಗಳನ್ನು ಆಯ್ಕೆಮಾಡುವ ಸ್ವಾತಂತ್ರ್ಯ ಈ ಜೋಡಿ ಹೊಂದಿದೆ ಎಂದು ಹೇಳಿದೆ.
ಕವಿತಾ (ಹೆಸರು ಬದಲಾಯಿಸಲಾಗಿದೆ) ಎಂಬವರು ಹೇಬಿಯಸ್ ಕಾರ್ಪಸ್ ಅರ್ಜಿ ಆಂಧ್ರ ಹೈಕೋರ್ಟಿಗೆ ಸಲ್ಲಿಸಿದ್ದರು. ಆರ್.ರಘುನಂದನ ರಾವ್ ಹಾಗೂ ಕೆ.ಮಹೇಶ್ವರ ರಾವ್ ಎಂಬ ನ್ಯಾಯಾಧೀಶರು ಒಳಗೊಂಡ ಪೀಠವು ಈ ಕುರಿತು ಮಂಗಳವಾರ ವಿಚಾರಣೆ ನಡೆಸಿ ಈ ಆದೇಶ ಕೊಟ್ಟಿದೆ.
ಮಹಿಳಾ ಸಲಿಂಗಿ ಜೋಡಿಗಳಾದ ಕವಿತಾ ಮತ್ತು ಲಲಿತಾ (ಹೆಸರು ಬದಲಾಯಿಸ ಲಾಗಿದೆ) ತಮ್ಮ ದೂರನ್ನು ಹಿಂದಿರುಗಿ ಪಡೆದಿದ್ದಾರೆ. ಇವರುಗಳ ಕುಟುಂಬದ ಸದಸ್ಯರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಯಾವುದೇ ರೀತಿಯ ಕ್ರಮ ಕೈಗೊಳ್ಳಬಾರದು ಎಂದು ಹೇಳಿರುವ ಪೀಠವು ಹೇಳಿದೆ.
ಈ ಸಲಿಂಗಿ ಜೋಡಿಯ ಕುರಿತು ಮೂಗುತೂರಿಸಬಾರದೆಂದು ಲಲಿತಾ ಮನೆಯವರಿಗೆ ಪೀಠವು ಸೂಚಿಸಿದೆ. ತಮ್ಮ ಪುತ್ರಿಯು ವಯಸ್ಸಿಗೆ ಬಂದಿದ್ದ ಆಕೆ ತನಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ಹಕ್ಕು ಇದೆ ಎಂದು ಪೀಠವು ತಿಳಿಸಿದೆ.
ವಿಜಯವಾಡದಲ್ಲಿ ಕವಿತಾ ಹಾಗೂ ಲಲಿತಾ ಸಲಿಂಗಿ ಜೋಡಿಯು ಒಂದು ವರ್ಷದಿಂದ ‘ಸಹಜೀವನ’ ನಡೆಸುತ್ತಿತ್ತು. ನನ್ನ ಸಂಗಾತಿ ಲಲಿತಾಳನ್ನು ಆಕೆಯ ಮನೆಯಲ್ಲಿ ಕೂಡಿ ಹಾಕಿಲಾಗಿದೆ ಎಂದು ಕವಿತಾ ದೂರು ನೀಡಿದ್ದರು.
ಇದರನ್ವಯ ಪೊಲೀಸರು, ಲಲಿತಾ ಅವರನ್ನು ಪತ್ತೆ ಹಚ್ಚ ಕಲ್ಯಾಣ ಕೇಂದ್ರವೊಂದರಲ್ಲಿ ಇರಿಸಿದ್ದರು. ಈ ಮಧ್ಯೆ ನಾನು ವಯಸ್ಕಳಾಗಿದ್ದು, ನನ್ನ ಸಂಗಾತಿಯೊಂದಿಗೆ ಜೀವಿಸುತ್ತೇನೆ ಎಂಬ ಬೇಡಿಕೆಯನ್ನು ಪೊಲೀಸರು ಮಾನ್ಯಮಾಡಿರಲಿಲ್ಲ. ನನ್ನ ಕುಟುಂಬದವರು ನನಗೆ ಕಿರುಕುಳ ನೀಡುತ್ತಿದ್ದಾರೆದು ಲಲಿತಾ ಪೊಲೀಸರಿಗೆ ದೂರು ನೀಡಿದ್ದರು.
ಕವಿತಾ ಹಾಗೂ ಆಕೆಯ ಮನೆಯವರು ನನ್ನ ಪುತ್ರಿಯನ್ನು ಅಪಹರಿಸಿದ್ದಾರೆ ಎಂದು ಲಲಿತಾ ತಂದೆ ದೂರು ನೀಡಿದ್ದರು. ಪೊಲೀಸರ ಮಧ್ಯಪ್ರವೇಶದ ನಂತರ ಲಲಿತಾ ವಿಜಯವಾಡಕ್ಕೆ ಮರಳಿದ್ದರು. ಆಕೆಯ ತಂದೆ ಲಲಿತಾಳನ್ನು ಮತ್ತೆ ಬಲವಂತದಿಂದ ಕರೆದುಕೊಂಡು ಹೋಗಿ, ಕಾನೂನುಬಾಹಿರವಾಗಿ ಬಂಧಿಸಿಟ್ಟಿದ್ದಾರೆ ಎಂದು ಕವಿತಾ. ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಸಲ್ಲಿಸಿದ್ದರು.
ಹೈಕೋರ್ಟ್ ನಿರ್ದೇಶನದಂತೆ, ವಿಜಯವಾಡ ಪೊಲೀಸರು ಲಲಿತಾ ಅವರನ್ನು ನ್ಯಾಯಾಲಯಕ್ಕೆ ಮಂಗಳವಾರ ಹಾಜರು ಪಡಿಸಿದ್ದರು.
ಇದನ್ನೂ ಓದಿ….ಮಂಡ್ಯ | ಧ್ವಜಾರೋಹಣದ ಮೂಲಕ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ


