ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ನೀಡಿರುವ ಹೇಳಿಕೆ ಖಂಡಿಸಿ ಪ್ರತಿಪಕ್ಷ ಸಂಸದರು ಇಂದೂ (ಡಿ.20) ಕೂಡ ದೆಹಲಿಯ ವಿಜಯ್ ಚೌಕದಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ.
ಪ್ರತಿಪಕ್ಷ ಸಂಸದರು ವಿಜಯ ಚೌಕದಿಂದ ಸಂಸತ್ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
भाजपा कितना भी ध्यान भटकाने का प्रयास कर ले, लेकिन बाबा साहेब का अपमान न तो देश की जनता बर्दाश्त करेगी और न ही हम अपनी मांग से पीछे हटेंगे। भाजपा को माफी मांगनी ही होगी। pic.twitter.com/TuJ5JjowMX
— Priyanka Gandhi Vadra (@priyankagandhi) December 20, 2024
ಈ ವೇಳೆ ಮಾತನಾಡಿದ ಸಂಸದೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. “ಇದು ಬಿಜೆಪಿಯ ಹತಾಶೆಯ ಮಟ್ಟವನ್ನು ತೋರಿಸುತ್ತದೆ” ಎಂದು ಹೇಳಿದರು.
“ಇಡೀ ದೇಶ ನೋಡುತ್ತಿದೆ, ಅವರು (ಬಿಜೆಪಿ) ರಾಹುಲ್ ಗಾಂಧಿಯ ಮೇಲೆ ಈ ಹಿಂದೆ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಸುಳ್ಳು ಹೇಳುವ ಮೂಲಕ ಹೊಸ ಎಫ್‌ಐಆರ್‌ಗಳನ್ನು ದಾಖಲಿಸುತ್ತಿದ್ದಾರೆ. ಇದು ಅವರ ಹತಾಶೆಯ ಮಟ್ಟವನ್ನು ತೋರಿಸುತ್ತದೆ” ಎಂದು ಪ್ರಿಯಾಂಕಾ ಕಿಡಿಕಾರಿದರು.
ಪ್ರತಿಪಕ್ಷಗಳ ಹಲವು ಸಂಸದರು ಪ್ರತಿಭಟನೆಯಲ್ಲಿ ಪ್ರಿಯಾಂಕಾ ಗಾಂಧಿಗೆ ಸಾಥ್ ನೀಡಿದರು. “ಬಾಬಾ ಸಾಹೇಬರ ಅವಮಾನ ಸಹಿಸುವುದಿಲ್ಲ ಎಂಬ ಭಿತ್ತಿ ಪತ್ರಗಳನ್ನು ಹಿಡಿದುಕೊಂಡಿದ್ದ ಸಂಸದರು, ಅಮಿತ್ ಶಾ ಕ್ಷಮೆ ಯಾಚಿಸಬೇಕು ಮತ್ತು ರಾಜೀನಾಮೆ ನೀಡಬೇಕು ಎಂದು ಅವರು ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿದ ಪೊಲೀಸರು


