ರಾಜ್ಯಸಭೆಯಲ್ಲಿ ಮಾತನಾಡುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆಯನ್ನು ವಿರೋಧಿಸಿ ಡಿಸೆಂಬರ್ 19ರಂದು ಸಂಸತ್ ಭವನದ ಬಳಿ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಸಂಸದರು ಪ್ರತಿಭಟನೆ ಹಮ್ಮಿಕೊಂಡಿದ್ದರು.
ಸಂಸತ್ ಆವರಣದಲ್ಲಿ ಮೆರವಣಿಗೆ ನಡೆಸಿದ ಪ್ರತಿಪಕ್ಷಗಳ ಸಂಸದರು ಅಮಿತ್ ಶಾ ಅವರು ಕ್ಷಮೆಯಾಚಿಸಬೇಕು. ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.
ಇದೇ ವೇಳೆ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟದ ಸಂಸದರು ಸಂಸತ್ತಿನ ಮಕರ ದ್ವಾರದ ಬಳಿ ಪ್ರತಿಭಟಿಸಿ “ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಅಂಬೇಡ್ಕರ್ ಅವರನ್ನು ಹೀನಾಯವಾಗಿ ನಡೆಸಿಕೊಂಡಿದೆ. ಈಗ ಅಂಬೇಡ್ಕರ್ ಮೇಲೆ ಹುಸಿ ಅಭಿಮಾನ ತೋರಿಸುತ್ತಿದೆ” ಎಂದು ಘೋಷಣೆಗಳನ್ನು ಕೂಗಿದ್ದರು.
ಇಂಡಿಯಾ ಮತ್ತು ಎನ್‌ಡಿಎ ಸಂಸದರು ಸಂಸತ್ ದ್ವಾರದ ಬಳಿ ಮುಖಾಮುಖಿಯಾದಾಗ ಘರ್ಷಣೆ ಉಂಟಾಗಿತ್ತು. ತನ್ನ ಇಬ್ಬರು ಸಂಸದರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಳ್ಳಿದ್ದಾರೆ. ಇದರಿಂದ ಅವರು ನೆಲಕ್ಕೆ ಬಿದ್ದು ಗಾಯಗಳಾಗಿವೆ ಎಂದು ಬಿಜೆಪಿ ಆರೋಪಿಸಿತ್ತು.
ಕಾಂಗ್ರೆಸ್ ಕೂಡ, ಅದರ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿ ಸಂಸದರು ತಳ್ಳಿದ್ದಾರೆ. ಇದರಿಂದ ಅವರ ಮೊಣಕಾಲಿಗೆ ಗಾಯವಾಗಿದೆ ಎಂದು ಆರೋಪಿಸಿತ್ತು.
ಎರಡೂ ಕಡೆಯವರು ಪರಸ್ಪರ ಆರೋಪಗಳನ್ನು ಮಾಡಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಬಿಜೆಪಿಯ ಇಬ್ಬರು ಸಂಸದರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಂಗ್ರೆಸ್‌ನ ರಾಹುಲ್ ಗಾಂಧಿ ವಿರುದ್ದ ಬಿಜೆಪಿಯ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸಂಸತ್ ದ್ವಾರದ ಬಳಿ ಸಂಸದರ ನಡುವೆ ಘರ್ಷಣೆ ಉಂಟಾದಾಗ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ನೀಡಿದ್ದರು. ಅದನ್ನು ಕ್ಷಣ ಮಾತ್ರದಲ್ಲಿ ತಿರುಚಿದ ಬಿಜೆಪಿಯ ಹಲವು ಸಂಸದರು ಸುಳ್ಳು ಬರಹಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ವಿಡಿಯೋದಲ್ಲಿ ಏನಿದೆ?
ರಾಹುಲ್ ಗಾಂಧಿ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಹೀಗಿದೆ…”ದೇಕಿಯೇ, ಹಾನ್ ಕಿಯಾ ಹೈ, ಕಿಯಾ ಹೈ, ಮಗರ್ ಟೀಕ್ ಹೈ…ಧಕ್ಕಾ-ಮುಕ್ಕಿ ಸೇ ಹಮ್ನೇ ಕುಚ್ ಹೋತಾ ನಹೀ ಹೈ..ಮಗರ್” (ನೋಡಿ, ಹೌದು ಅದು ಸಂಭವಿಸಿದೆ, ಅದು ಸಂಭವಿಸಿದೆ ಆದರೆ ಅದು ಸರಿ, ನಾವು ಗಲಾಟೆಯಿಂದ ವಿಚಲಿತರಾಗುವುದಿಲ್ಲ … ಆದರೆ …)
ರಾಹುಲ್ ಗಾಂಧಿ ಹೇಳಿಕೆಯ ವಿಡಿಯೋವನ್ನು ಡಿ. 19ರಂದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು “ರಾಹುಲ್ ಗಾಂಧಿಯೇ ತಾನು ತಳ್ಳಿದ್ದೇನೆ ಎಂದು ಒಪ್ಪಿಕೊಳ್ಳುತ್ತಿದ್ದಾರೆ ಮತ್ತು ತಳ್ಳುವುದರಿಂದ ಏನನ್ನೂ ಸಾಧಿಸಲಾಗುವುದಿಲ್ಲ ಎಂದು ನಾಚಿಕೆಯಿಲ್ಲದೆ ಹೇಳುತ್ತಿದ್ದಾರೆ. ಅವರ ತಳ್ಳುವಿಕೆಯಿಂದಾಗಿ, ಹಿರಿಯ ಸಂಸದರ ತಲೆಗೆ ಗಾಯವಾಗಿದೆ, ಇಬ್ಬರು ಸಂಸದರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಳ್ಳುವಿಕೆಯಿಂದ ಏನೂ ಆಗುವುದಿಲ್ಲ ಎಂದು ರಾಹುಲ್ ಜಿ ಹೇಳುತ್ತಿದ್ದಾರೆ. ದುರಹಂಕಾರ, ದಬ್ಬಾಳಿಕೆ ಮತ್ತು ಸರ್ವಾಧಿಕಾರವು ಗಾಂಧಿ ಕುಟುಂಬದ ರಕ್ತನಾಳಗಳಲ್ಲಿ ಓಡುತ್ತಿದೆ … ನಾಚಿಕೆಗೇಡಿನ ಸಂಗತಿ” ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದರು.
राहुल गांधी ख़ुद मान रहे हैं कि उन्होंने धक्कामुक्की की है, और बड़ी बेशर्मी से कह रहे हैं कि धक्का मुक्की से कुछ नहीं होता।
इनके धक्के से एक वरिष्ठ सांसद का सर फट गया, दो सांसद अस्पताल में भर्ती हैं और राहुल जी कह रहे धक्के से कुछ नहीं होता।
अहंकार, अत्याचार और तानाशाही गांधी… pic.twitter.com/MSD8UZey55
— Anurag Thakur (@ianuragthakur) December 19, 2024
ಬಿಜೆಪಿ ಪಕ್ಷದ ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ಉಸ್ತುವಾರಿಯಾಗಿರುವ ಅಮಿತ್ ಮಾಳವಿಯಾ ಅವರು ಡಿ.19ರಂದು ಎಕ್ಸ್‌ನಲ್ಲಿ ರಾಹುಲ್ ಗಾಂಧಿಯ ಹೇಳಿಕೆಯ ವಿಡಿಯೋ ಹಂಚಿಕೊಂಡಿದ್ದು, “ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಅವರ ಮೇಲೆ ಹಲ್ಲೆ ಮಾಡಿರುವುದಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕ್ಯಾಮರಾ ಮುಂದೆ ಒಪ್ಪಿಕೊಂಡಿದ್ದಾರೆ” ಎಂದು ಬರೆದುಕೊಂಡಿದ್ದರು.
Leader of Opposition Rahul Gandhi admits on camera to having assaulted BJP MP Pratap Sarangi, leaving him grievously injured. This calls for criminal charges against him. There is overwhelming evidence, video footage and his own admission to convict Rahul Gandhi. The law must… pic.twitter.com/WSxCDD23Pz
— Amit Malviya (@amitmalviya) December 19, 2024
ಬಿಜೆಪಿಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೂಡ ಡಿ.19ರಂದು ಎಕ್ಸ್‌ನ ವಿಡಿಯೋ ಹಂಚಿಕೊಂಡು, “ಬಿಜೆಪಿ ಸಂಸದರ ಮೇಲೆ ದೌರ್ಜನ್ಯ ನಡೆಸಿರುವುದನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ” ಎಂದು ಬರೆದುಕೊಂಡಿದ್ದರು.
After admitting to manhandling, Shri Rahul Gandhi shamelessly dismisses his aggressive behaviour by saying, "Nothing happens with a push."
It's shameful that he downplays an incident that has caused a head injury to a senior MP and two MPs being hospitalized, all due to his… pic.twitter.com/mmtN0ly8Hs
— Tejasvi Surya (@Tejasvi_Surya) December 19, 2024
ಇದೇ ಪ್ರತಿಪಾದನೆಯೊಂದಿಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಝಾದ್ ಪೂನವಾಲಾ, ಪಕ್ಷದ ಗುಜರಾತ್ ಘಟಕದ ಮಾಧ್ಯಮ ವಿಭಾಗದ ಸಹ-ಉಸ್ತುವಾರಿ ಝುಬಿನ್ ಅಶಾರ ಮತ್ತು ಬಿಜೆಪಿ ಅಸ್ಸಾ ರಾಜ್ಯ ಘಟಕದ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ರಾಹುಲ್ ಗಾಂಧಿಯ ಹೇಳಿಕೆಯ ವಿಡಿಯೋ ಹಂಚಿಕೊಳ್ಳಲಾಗಿತ್ತು.
ಈ ಹಿಂದೆ ಹಲವಾರು ಕೋಮುದ್ವೇಷದ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲಪಂಥೀಯ ಎಕ್ಸ್ ಬಳಕೆದಾರರಾದ ಮಿ.ಸಿನ್ಹಾ ಕೂಡ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದರು.
ಫ್ಯಾಕ್ಟ್‌ಚೆಕ್ : ಬಿಜೆಪಿ ನಾಯಕರು ಹಂಚಿಕೊಂಡ ಬಳಿಕ ರಾಹುಲ್ ಗಾಂಧಿಯ ಹೇಳಿಕೆಯ ವಿಡಿಯೋ ವೈರಲ್ ಆಗಿತ್ತು. ಹಾಗಾಗಿ, ನಾವು ಅದರ ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಈ ವೇಳೆ ಆ ವಿಡಿಯೋ ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿದ್ದ ವಿಡಿಯೊಂದರ ಒಂದು ಭಾಗ (ಕ್ಲಿಪ್) ಎಂದು ಗೊತ್ತಾಗಿದೆ.
ಎಎನ್‌ಐ ಹಂಚಿಕೊಂಡಿದ್ದ ಸಂಪೂರ್ಣ ವಿಡಿಯೋ ಕೆಳಗಿದೆ…
#WATCH | Lok Sabha LoP Rahul Gandhi says, "This might be on your camera. I was trying to go inside through the Parliament entrance, BJP MPs were trying to stop me, push me and threaten me. So this happened…Yes, this has happened (Mallikarjun Kharge being pushed). But we do not… https://t.co/q1RSr2BWqu pic.twitter.com/ZKDWbIY6D6
— ANI (@ANI) December 19, 2024
ಎಎನ್‌ಐ ಹಂಚಿಕೊಂಡಿದ್ದ ವಿಡಿಯೋವನ್ನು ನಾವು ಸಂಪೂರ್ಣ ವೀಕ್ಷಿಸಿದ್ದೇವೆ. ಈ ವೇಳೆ ನಮಗೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯ ಸತ್ಯಾಸತ್ಯತೆ ಗೊತ್ತಾಗಿದೆ.
ರಾಹುಲ್ ಗಾಂಧಿಯವರು ಸಂಸತ್ ಬಳಿ ನಡೆದ ಘರ್ಷಣೆಯ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ, ವರದಿಗಾರರೊಬ್ಬರು “ಖರ್ಗೆ ಜಿ ಕೆ ಸಾತ್ ಧಕ್ಕಾ-ಮುಕ್ಕಿ ಹುವಾ ಹೈ?” (ಖರ್ಗೆಯವರನ್ನೂ ತಳ್ಳಲಾಗಿದೆಯೇ?) ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ “ಹಾನ್ ಕಿಯಾ ಹೈ, ಕಿಯಾ ಹೈ, ಮಗರ್ ಟೀಕ್ ಹೈ…ಧಕ್ಕಾ-ಮುಕ್ಕಾ ಸೇ ಹಮ್ನೇ ಕುಚ್ ಹೋತಾ ನಹೀ ಹೈ..”(ಹೌದು, ಅದು ಸಂಭವಿಸಿದೆ, ಅದು ಸಂಭವಿದೆ, ಆದರೂ, ಪರವಾಗಿಲ್ಲ..ತಳ್ಳಾಟ ಮತ್ತು ನೂಕಾಟ ನಮ್ಮ ಮೇಲೆ ಯಾವುದೇ ಪರಣಾಮ ಬಿರುವುದಿಲ್ಲ ) ಎಂದು ಹೇಳಿದ್ದಾರೆ.
ಎಎನ್‌ಐ ಹಂಚಿಕೊಂಡಿದ್ದ ವಿಡಿಯೋ ಜೊತೆಗೆ ರಾಹುಲ್ ಗಾಂಧಿಯ ಹೇಳಿಕೆಯನ್ನು ಅಕ್ಷರ ರೂಪದಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು. ಅದರಲ್ಲಿ(yes, this happend (ಹೌದು, ಅದು ಸಂಭವಿಸಿದೆ (ಮಲ್ಲಿಕಾರ್ಜುನ ಖರ್ಗೆ ಅವರನ್ನು ತಳ್ಳಲಾಗಿದೆ) ಎಂದು ಎಎನ್‌ಐ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಎಎನ್‌ಐ ಇದೇ ವಿಷಯದಲ್ಲಿ ಪ್ರಕಟಿಸಿರುವ ಮತ್ತೊಂದು ವಿಸ್ಕೃತ ವರದಿಯಲ್ಲೂ ಇದೇ ಸಾಲುಗಳನ್ನು ಉಲ್ಲೇಖಿಸಲಾಗಿದೆ.

ಸ್ಪಷ್ಟವಾಗಿ ಹೇಳುವುದಾದರೆ, ಮಾಧ್ಯಮದವರು ಕೇಳಿದಾಗ “ಹೌದು, ಅದು ಸಂಭವಿಸಿದೆ ಅಥವಾ ಅಗಿದೆ. ಆದರೆ, ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದರು. ಅಂದರೆ, ಮಲ್ಲಿಕಾರ್ಜುನ ಖರ್ಗೆಯವರನ್ನು ತಳ್ಳಲಾಗಿದೆಯಾ? ಎಂದು ವರದಿಗಾರರು ಕೇಳಿದ್ದಕ್ಕೆ ” ಹೌದು, ತಳ್ಳಲಾಗಿದೆ. ಆದರೆ, ಅದರ ಬಗ್ಗೆ ನಾವು ತಲೆ ಕೆಡಸಿಕೊಳ್ಳುವುದಿಲ್ಲ ಅಥವಾ ಅದು ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ರಾಹುಲ್ ಗಾಂಧಿ ಉತ್ತರಿಸಿದ್ದಾರೆ. ಅಲ್ಲದೆ, ಬಿಜೆಪಿ ಸಂಸದರನ್ನು ತಳ್ಳಿರುವುದನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿರುವುದಲ್ಲ. ಬಿಜೆಪಿ ಸಂಸದರು ಎಎನ್‌ಐ ಪೋಸ್ಟ್ ಮಾಡಿದ್ದ ವಿಡಿಯೋವನ್ನು ಅರ್ಧ ಮಾತ್ರ ಹಂಚಿಕೊಂಡು ಸುಳ್ಳು ಪ್ರತಿಪಾದನೆ ಮಾಡಿದ್ದಾರೆ.
ಇದನ್ನೂ ಓದಿ : FACT CHECK : ಅಜ್ಮೀರ್ ದರ್ಗಾ ವಿರುದ್ಧ ಪಂಜಿನ ಮೆರವಣಿಗೆ ವೇಳೆ ಬೆಂಕಿ ಅವಘಡ..ವೈರಲ್ ವಿಡಿಯೋದ ಅಸಲಿಯತ್ತೇನು?


