ಡಿಸೆಂಬರ್ 4ರಂದು ಪುಷ್ಪ 2 (Pushpa 2: The Rule)ಸಿನಿಮಾದ ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಮತ್ತು ನಟ ಅಲ್ಲು ಅರ್ಜುನ್ ನಡುವಿನ ವಾಗ್ಯುದ್ಧ ತಾರಕಕ್ಕೇರಿದೆ.
ತೆಲಂಗಾಣ ವಿಧಾನಸಭೆಯಲ್ಲಿ ಶನಿವಾರ (ಡಿ.21) ಮಾತನಾಡಿದ್ದ ಸಿಎಂ ರೇವಂತ್ ರೆಡ್ಡಿ ” ಕಾಲ್ತುಳಿತ ಸಂಭವಿಸಿದ ಬಗ್ಗೆ ಪೊಲೀಸರು ಮಾಹಿತಿ ನೀಡಿದರೂ ಅಲ್ಲು ಅರ್ಜುನ್ ಥಿಯೇಟರ್ ಬಿಟ್ಟು ಹೋಗಲು ನಿರಾಕರಿಸಿದ್ದರು” ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಲ್ಲು ಅರ್ಜುನ್, “ಕಾಲ್ತುಳಿತ ದುರಂತ ನಡೆದು ಮಹಿಳೆ ಸಾವನ್ನಪ್ಪಿದ ಬಗ್ಗೆ ನನಗೆ ಮರುದಿನವಷ್ಟೇ ಗೊತ್ತಾಯಿತು” ಎಂದಿದ್ದಾರೆ.
“ಯಾವುದೇ ಪೊಲೀಸ್ ಬಂದು ನನಗೆ ಮಾಹಿತಿ ನೀಡಿಲ್ಲ. ಥಿಯೇಟರ್ ಆಡಳಿತದವರು ಬಂದು ಹೊರಗಡೆ ಭಾರೀ ಜನ ಸೇರಿದ್ದಾರೆ. ಹಾಗಾಗಿ, ತಾವು ದಯವಿಟ್ಟು ಇಲ್ಲಿಂದ ಹೋಗಿ ಎಂದರು. ನಾನು ತಕ್ಷಣ ಹೊರಟು ಬಂದೆ. ಮಹಿಳೆ ಸಾವನ್ನಪ್ಪಿದ ಬಗ್ಗೆ ನನಗೆ ಮರುದಿನವಷ್ಟೇ ಮಾಹಿತಿ ಗೊತ್ತಾಯಿತು” ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
Allu Arjun side
> I don't want to blame anyone
> I'm thankful to the Govt for their support
> There's lot of misinformation
> I didn't go without permission
> It's humiliation & character assassination
> I care for the child#AlluArjun #RevanthReddy— Veena Jain (@DrJain21) December 21, 2024
“ನಾನು ಥಿಯೇಟರ್‌ಗೆ ಭೇಟಿ ಕೊಡುವುದಕ್ಕೆ ಅನುಮತಿ ಇಲ್ಲ ಎಂದಿದ್ದರೆ ಪೊಲೀಸರು ತಿಳಿಸಬೇಕಿತ್ತು. ಕಾನೂನು ಪಾಲಿಸುವವನಾಗಿ ನಾನು ವಾಪಸ್ ಹೋಗುತ್ತಿದ್ದೆ” ಎಂದು ಅಲ್ಲು ಅರ್ಜುನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 4ರಂದು ಪುಷ್ಪ-2 ಸಿನಿಮಾದ ಪ್ರೀಮಿಯರ್ ಶೋ ಅನ್ನು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಆಯೋಜಿಸಲಾಗಿತ್ತು. ಇಲ್ಲಿಗೆ ಅಲ್ಲು ಅರ್ಜುನ್ ಹಠಾತ್ ಭೇಟಿ ಕೊಟ್ಟಿದ್ದರಿಂದ ಭಾರೀ ಸಂಖ್ಯೆಯಲ್ಲಿ ಜನ ಸೇರಿ ನೂಕು ನುಗ್ಗಲು ಉಂಟಾಗಿದೆ. ಈ ವೇಳೆ ಕಾಲ್ತುಳಿತ ಸಂಭವಿಸಿ ದಿಲ್‌ಸುಖ್ ನಗರ ನಿವಾಸಿ 35 ವರ್ಷದ ರೇವತಿ ಸಾವನ್ನಪ್ಪಿದ್ದಾರೆ. ಅವರ 8 ವರ್ಷದ ಮಗ ಶ್ರೀತೇಜಾ ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಚಿಕಡ್‌ಪಲ್ಲಿ ಪೊಲೀಸರು ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡುವಾಗ ಸಿಎಂ ರೇವಂತ್ ರೆಡ್ಡಿ,”ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸಂಧ್ಯಾ ಥಿಯೇಟರ್‌ಗೆ ಹೋಗಿ ಹೊರಗಡೆ ಭಾರೀ ಜನ ಸೇರಿ ಗದ್ದಲ ಉಂಟಾಗಿದೆ. ಇಲ್ಲಿಂದ ಹೊರಟು ಹೋಗಿ ಎಂದು ಅಲ್ಲು ಅರ್ಜುನ್‌ಗೆ ಮನವಿ ಮಾಡಿದ್ದರು. ಆದರೆ, ಅವರು ಸಿನಿಮಾ ಮುಗಿಯುವವರೆಗೆ ಹೋಗಲ್ಲ ಎಂದಿದ್ದಾರೆ. ಕೊನೆಗೆ ಡಿಸಿಪಿ ಹೋಗಿ ಬಂಧಿಸಬೇಕಾಗುತ್ತೆ ಎಂದು ಎಚ್ಚರಿಕೆ ಕೊಟ್ಟ ಬಳಿಕವಷ್ಟೇ ಥಿಯೇಟರ್ ಬಿಟ್ಟು ಹೋಗಿದ್ದಾರೆ” ಎಂದು ಆರೋಪಿಸಿದ್ದರು.
Naku congress ante assalu nachadu…
Revanth sir standing for a common people… 🙌
But @revanth_anumula sir guts choosaaka support cheyyaali anipisthundi 🤝#RevanthReddy #AlluArjun pic.twitter.com/exIHjYAIH7— ꪜꪜ 🇮🇳🕉 (@TFIBaagundaali) December 21, 2024
ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ಕೂಡ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ಅಲ್ಲು ಅರ್ಜುನ್ ವಿರುದ್ದ ಕಿಡಿಕಾರಿದ್ದಾರೆ. “ಚಿತ್ರ ಈಗ ಹಿಟ್ ಆಗಬಹುದು” ಎಂದಿದ್ದಾರೆ.
> Theatre asked permission
> Police denied it
> But still Allu Arjun came & stampede happened
> People lost lives, but still he didn't left, police forced him out
> Even while leaving he did roadshowHeartbreaking, if true 😑#RevanthReddy #AlluArjun pic.twitter.com/e4SzTflfU1
— Veena Jain (@DrJain21) December 21, 2024
ಕಾಲ್ತುಳಿತ ಸಂಭವಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ “ಚಿತ್ರ ಹಿಟ್ ಆಗಲಿದೆ” ಎಂದು ಹೇಳಿದ್ದಾಗಿ ಅಕ್ಬರುದ್ದೀನ್ ಓವೈಸಿ ಆರೋಪಿಸಿದ್ದಾರೆ.
” ಜನರು ಸಾಯುವಾಗ ನಾನು ಆ ರೀತಿಯ ಹೇಳಿಕೆಗಳನ್ನು ಕನಸಿನಲ್ಲೂ ಹೇಳುವವನಲ್ಲ. ನನ್ನ ವಿರುದ್ದ ಈ ರೀತಿಯ ಆರೋಪಗಳು ನನ್ನ ತೇಜೋವದೆ ಮಾಡುವ ಉದ್ದೇಶ ಹೊಂದಿದೆ. ಕಳೆದ 20 ವರ್ಷಗಳಲ್ಲಿ ಕಷ್ಟಪಟ್ಟು ಮೇಲೆ ಬಂದ ನಾನು ಈ ಹೆಸರು, ಗೌರವವನ್ನು ಗಳಿಸಿಕೊಂಡಿದ್ದೇನೆ” ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ಮುಂದುರಿದು “ನಾನು ಯಾರನ್ನೂ ದೂಷಿಸುವುದಿಲ್ಲ. ನನ್ನ ಹೆಸರಿನಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿಗಳ ಕುರಿತು ಸ್ಪಷ್ಟನೆ ನೀಡಿದ್ದೇನೆ” ಅಷ್ಟೆ ಎಂದಿದ್ದಾರೆ.
“ಮಹಿಳೆ ಸಾವನ್ನಪ್ಪಿದ ವಿಷಯ ತಿಳಿದು ಅವರ ಕುಟುಂಬವನ್ನು ಭೇಟಿ ಮಾಡಲು ನಾನು ನನ್ನ ಸಿಬ್ಬಂದಿಯನ್ನು ಕಳಿಸಿದ್ದೆ. ನನ್ನ ಮೇಲೆ ಆ ಕುಟುಂಬ ದೂರು ದಾಖಲಿಸಿದ್ದರಿಂದ ನಾನು ಹೋಗುವುದು ಕಾನೂನಾತ್ಮಕವಾಗಿ ತಪ್ಪಾಗುತ್ತದೆ ಎಂದು ಹೋಗಿರಲಿಲ್ಲ. ಗಾಯಗೊಂಡಿರುವ ಬಾಲಕನ ಬಗ್ಗೆ ನಾವು ಕಾಳಜಿವಹಿಸುತ್ತೇವೆ. ಮುಂದೆ ಅವರ ಕುಟುಂಬವನ್ನು ನಾವು ನೋಡಿಕೊಳ್ಳುತ್ತೇವೆ” ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ಇದನ್ನೂ ಓದಿ : ಮಹಾರಾಷ್ಟ್ರ ಖಾತೆ ಹಂಚಿಕೆ | ಶಿಂದೆಗೆ ಎರಡು ಮತ್ತೊಂದು, ಅಜಿತ್‌ಗೆ ಹಣಕಾಸು


