ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನೀಡಲಾಗಿದ್ದ ಆರ್ಥಿಕ ಸಮೀಕ್ಷೆಗೆ ಸಂಬಂಧಿಸಿದ ಹೇಳಿಕೆಗಳಿಗಾಗಿ ಕಾಂಗ್ರೆಸ್ ಸಂಸದ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಜನವರಿ 7 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಬರೇಲಿಯ ನ್ಯಾಯಾಲಯವು ಸಮನ್ಸ್ ನೀಡಿದೆ. ರಾಹುಲ್ ಗಾಂಧಿ ಅವರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಧೀರ್ ಕುಮಾರ್ ಶನಿವಾರ ನೋಟಿಸ್ ಜಾರಿ ಮಾಡಿದ್ದಾರೆ. ಆರ್ಥಿಕ ಸಮೀಕ್ಷೆ
ಅಖಿಲ ಭಾರತ ಹಿಂದೂ ಮಹಾಸಂಘ ಸಂಘಟನೆಯ ಮಂಡಲ್ ಅಧ್ಯಕ್ಷ ಪಂಕಜ್ ಪಾಠಕ್ ಸಲ್ಲಿಸಿದ ಮನವಿಗೆ ಸಂಬಂಧಿಸಿ ನ್ಯಾಯಾಲಯ ಈ ಸಮನ್ಸ್ ನೀಡಿದೆ. ಪಾಠಕ್ ಅವರು ಆರಂಭದಲ್ಲಿ ಶಾಸಕ-ಸಂಸದ ನ್ಯಾಯಾಲಯ/ಸಿಜೆಎಂ ಕೋರ್ಟ್‌ಗೆ ಆಗಸ್ಟ್‌ನಲ್ಲಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ಆಗಸ್ಟ್ 27ರಂದು ಅರ್ಜಿಯನ್ನು ತಿರಸ್ಕರಿಸಿತ್ತು. ಆರ್ಥಿಕ ಸಮೀಕ್ಷೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇದರ ನಂತರ ಸೆಷನ್ಸ್ ನ್ಯಾಯಾಲಯದಲ್ಲಿ ಪರಿಷ್ಕರಣೆ ಅರ್ಜಿಯನ್ನು ಸಲ್ಲಿಸಿದ್ದು, ನ್ಯಾಯಾಲಯ ಪ್ರಸ್ತುತ ಸಮನ್ಸ್ ನೀಡಿದೆ. ಪಾಠಕ್ ಅವರನ್ನು ಪ್ರತಿನಿಧಿಸಿದ ವಕೀಲ ವೀರೇಂದ್ರ ಪಾಲ್ ಗುಪ್ತಾ ಅವರು, ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು “ಶೇಕಡಾವಾರು ದುರ್ಬಲ ವರ್ಗದವರ ಸಂಖ್ಯೆ ಹೆಚ್ಚಿದ್ದರೂ, ಅವರು ಹೊಂದಿರುವ ಆಸ್ತಿಯ ಶೇಕಡಾವಾರು ಪ್ರಮಾಣವು ತುಂಬಾ ಕಡಿಮೆಯಾಗಿದೆ ಎಂದು ಹೇಳಿದ್ದರು. ಇದೇ ರೀತಿ ಮುಂದುವರಿದರೆ ಹೆಚ್ಚಿನ ಜನಸಂಖ್ಯೆ ಹೊಂದಿರುವವರು ಹೆಚ್ಚಿನ ಆಸ್ತಿಗೆ ಬೇಡಿಕೆ ಇಡುವ ಸಾಧ್ಯತೆಯಿದೆ” ಎಂದು ಹೇಳಿದ್ದರು.
“ರಾಜಕೀಯ ಲಾಭಕ್ಕಾಗಿ ವರ್ಗ ದ್ವೇಷವನ್ನು ಸೃಷ್ಟಿಸುವ” ಗುರಿಯನ್ನು ಹೊಂದಿರುವ ಈ ಹೇಳಿಕೆಗಳ ಮೂಲಕ ದುರ್ಬಲ ವರ್ಗಗಳನ್ನು ಪ್ರಚೋದಿಸಲು ರಾಹುಲ್ ಗಾಂಧಿ ಪ್ರಯತ್ನಿಸಿದ್ದಾರೆ ಎಂದು ವಕೀಲ ಗುಪ್ತಾ ಆರೋಪಿಸಿದ್ದಾರೆ. ಕಾಂಗ್ರೆಸ್‌ನ ಹಿತಾಸಕ್ತಿಗಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳ ನಡುವೆ ದ್ವೇಷ ಬಿತ್ತಲು ಗಾಂಧಿ ಉದ್ದೇಶಪೂರ್ವಕವಾಗಿ ರಾಹುಲ್ ಗಾಂಧೀ ಪ್ರಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಬಿಎನ್ಎಸ್ ಸೆಕ್ಷನ್ 152 ಭಿನ್ನಾಬಿಪ್ರಾಯ ಹತ್ತಿಕ್ಕುವ ಅಸ್ತ್ರವಾಗಿ ಬಳಸಬಾರದು : ರಾಜಸ್ಥಾನ ಹೈಕೋರ್ಟ್
ಬಿಎನ್ಎಸ್ ಸೆಕ್ಷನ್ 152 ಭಿನ್ನಾಬಿಪ್ರಾಯ ಹತ್ತಿಕ್ಕುವ ಅಸ್ತ್ರವಾಗಿ ಬಳಸಬಾರದು : ರಾಜಸ್ಥಾನ ಹೈಕೋರ್ಟ್


