ಪಾಟ್ನಾ: ಇನ್ನು 10 ತಿಂಗಳ ನಂತರ, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಬಿಹಾರದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗವು 2025ರ ಸೆಪ್ಟೆಂಬರ್‌ನಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.
ಬಿಜೆಪಿಯ ಎರಡನೇ ಅತ್ಯಂತ ಶಕ್ತಿಶಾಲಿ ವ್ಯಕ್ತಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಿಹಾರ ವಿಧಾನಸಭೆಯು ನಿತೀಶ್ ನಾಯಕತ್ವದಲ್ಲಿ ಎನ್‌ಡಿಎ ಸ್ಪರ್ಧಿಸುತ್ತದೆಯೇ ಅಥವಾ ಮಹಾರಾಷ್ಟ್ರದಂತೆ ಅಲ್ಲಿ ಸ್ಪರ್ಧಿಸುತ್ತದೆಯೇ ಎಂದು ಮಾಧ್ಯಮದವರು ಕೇಳಿದಾಗ “ನಾವು ಚರ್ಚಿಸಿ, ನಿರ್ಧರಿಸುತ್ತೇವೆ”. ಬಿಹಾರದಲ್ಲಿ 2025ರಲ್ಲಿ ನಡೆಯುವ ಚುನಾವಣೆಯಲ್ಲಿ ಯಾವುದೇ ಮುಖ್ಯಮಂತ್ರಿಯ ಮುಖವಿರುವುದಿಲ್ಲವೆಂದಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.
ಶಾ ಅವರ ಈ ಹೇಳಿಕೆಯು ಮತ್ತಷ್ಟು ವಿವಾದದ ಕಿಡಿಹೊತ್ತಿಸಿದೆ. ಆದರೆ ಜೆಡಿಯು ಬಿಹಾರದಲ್ಲಿ ಮಹಾರಾಷ್ಟ್ರದಂತೆ ಇರುವುದಿಲ್ಲವೆಂದು ಸ್ಪಷ್ಟಪಡಿಸಿದೆ. ನಿತೀಶ್ ಅವರು ಏಕನಾಥ್ ಶಿಂಧೆಯಂತೆ ಅಲ್ಲ ಎಂದು ನಿತೀಶ್ ಅವರ ಆಪ್ತ ಸಹಾಯಕರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
2005ರಿಂದಲೂ ನಿತೀಶ್ ಹೆಸರಿನಲ್ಲಿ ಜನರು ಮತ ಚಲಾಯಿಸಿದ್ದಾರೆ. ಕಾನೂನುರಹಿತ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಖಾತ್ರಿಪಡಿಸಿದ ಮತ್ತು ಬಿಹಾರವನ್ನು ಮತ್ತೆ ಅಭಿವೃದ್ಧಿ ಪಥಕ್ಕೆ ತಂದ ನಿತೀಶ್ ಅವರ ಉತ್ತಮ ಆಡಳಿತಕ್ಕಾಗಿ ಮತದಾರರು ಅವರ ಪರವಾಗಿ ನಿಂತಿದ್ದಾರೆ ಎಂದು ಅವರ ಸಹಾಯಕ ಹೇಳಿದ್ದಾರೆ.
ಬಿಹಾರ ವಿಧಾನಸಭೆಯಲ್ಲಿ ಬಿಜೆಪಿಯು ಪ್ರಸ್ತುತ ಏಕೈಕ ದೊಡ್ಡ ಪಕ್ಷವಾಗಿದ್ದರೂ ಸಹ ಅದಕ್ಕೆ ಇಲ್ಲಿಯವರೆಗೆ ಮುಖ್ಯಮಂತ್ರಿಯನ್ನು ಹೊಂದಿಲ್ಲದ ಒಂದು ರಾಜ್ಯವಾಗಿ ಬಿಹಾರ ಉಳಿದಿದೆ. 2025 ರಲ್ಲಿ ಬಿಹಾರದಲ್ಲಿ ಬಿಜೆಪಿ ತನ್ನದೇ ಆದ ಮುಖ್ಯಮಂತ್ರಿಯನ್ನು ಹೊಂದುವ ಸಮಯ ಬಂದಿದೆ ಎಂದು ಕೆಲವು ರಾಜ್ಯ ಮಟ್ಟದ ನಾಯಕರು ಸೂಚಿಸಿದ್ದಾರೆ. ಇದು ಚುನಾವಣಾ ಲೆಕ್ಕಾಚಾರಕ್ಕಿಂತ ಹೊರಗಿದೆ.
ಹೀಗಾಗಿಯೇ ಬಿಹಾರ ಚುನಾವಣೆಯನ್ನು ನಿತೀಶ್ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಬಿಜೆಪಿ ಭಾನುವಾರ ಸ್ಪಷ್ಟಪಡಿಸಿದೆ. “ಮುಂದಿನ ವರ್ಷದ ಚುನಾವಣೆಯು ನಿತೀಶ್ ಮತ್ತು ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸ್ಪರ್ಧಿಸುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಡಿಸೆಂಬರ್ 22 ರಂದು ನವದೆಹಲಿಯಲ್ಲಿ ಹೇಳುವ ಮೂಲಕ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಬಿಜೆಪಿಗೆ ಇಷ್ಟವಿರಲಿ ಇಲ್ಲದಿರಲಿ, ನಿತೀಶ್ ಕುಮಾರ್ ಅವರನ್ನು ಅವಲಂಭಿಸಲು ಮೂರು ಕಾರಣಗಳಿವೆ. ಮೊದಲನೆಯದಾಗಿ, ಬಿಹಾರವನ್ನು ಸಮರ್ಥವಾಗಿ ಆಳಿದ ಮತ್ತು ಅಭಿವೃದ್ಧಿಯ ವೇಗದ ಹಾದಿಯಲ್ಲಿ ಇರಿಸಿರುವ ಪ್ರಾಮಾಣಿಕ, ಕಳಂಕರಹಿತ ರಾಜಕಾರಣಿಯ ವ್ಯಕ್ತಿತ್ವವನ್ನು ಅವರು ಹೊಂದಿರುವುದು.
ಎರಡನೆಯದಾಗಿ, ನಿತೀಶ್ ಅವರ ಶೇಕಡಾ 15 ರಷ್ಟು ನಿಷ್ಟವಂತ ಮತದಾರರು ಅವರ ಮೈತ್ರಿಯನ್ನು ಲೆಕ್ಕಿಸದೆ ಯಾವಾಗಲೂ ಅವರ ಬೆಂಬಲಕ್ಕೆ ನಿಂತಿರುವುದು.
ಬಿಜೆಪಿಯ ಶೇ.19 , ಚಿರಾಗ್ ಪಾಸ್ವಾನ್‌ರ ಎಲ್‌ಜೆಪಿಯಿಂದ ಶೇ.5 ಮತ್ತು ಇತರರು ಶೇಕಡಾ 2.5 ಸೇರಿದರೆ ಇದು ಮೈತ್ರಿಕೂಟಕ್ಕೆ ಶೇ. 40 ಕ್ಕಿಂತ ಹೆಚ್ಚು ಮತಗಳನ್ನು ಗಳಿಸುತ್ತದೆ. ಇದು ಪ್ರಚಂಡ ವಿಜಯವನ್ನು ಖಚಿತಪಡಿಸುತ್ತದೆ. ಇದು 2010ರಲ್ಲಿ ಮತ್ತು 2015ರಲ್ಲಿ ಸಾಬೀತಾಗಿದೆ.
ಮೂರನೆಯದಾಗಿ, ಮುಖ್ಯಮಂತ್ರಿಯಾಗಬಲ್ಲ ಒಬ್ಬ ನಾಯಕನನ್ನು ಬಿಜೆಪಿ ಎಂದಿಗೂ ಬೆಳೆಸಲಿಲ್ಲ. ದಿವಂಗತ ಸುಶೀಲ್ ಮೋದಿ ಅವರನ್ನು ಹೊರತುಪಡಿಸಿ, ಬಿಜೆಪಿಯ ಯಾವುದೇ ಉಪಮುಖ್ಯಮಂತ್ರಿಗಳು ನಿತೀಶ್ ಅವರ ಸಮಗ್ರತೆ ಮತ್ತು ಆಡಳಿತ ಕೌಶಲ್ಯಕ್ಕೆ ಸರಿಸಾಟಿಯಾಗಬಲ್ಲ ನಾಯಕರಾಗಿ ಬೆಳೆಯಲಿಲ್ಲ.


