- Advertisement -
- Advertisement -
ರಾಜ್ಯದ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಕಳೆದ ಎರಡು ದಶಕದಲ್ಲಿ ನಡೆದ ನಕ್ಸಲ್ ಚಟುವಟಿಕೆಯಲ್ಲಿ ಇಲ್ಲಿಯವರೆಗೆ 38 ಮಂದಿ ಪ್ರಾಣ ತೆತ್ತಿದ್ದಾರೆ. ನಕ್ಸಲರು, ಪೊಲೀಸರು ಮತ್ತು ಎಎನ್ಎಫ್ ಮುಖಾಮುಖಿಯಲ್ಲಿ ಒಟ್ಟು 38 ಮಂದಿ ಪ್ರಾಣ ಕಳೆದುಕೊಂಡಿದ್ದು, ಇದರಲ್ಲಿ 20 ಮಂದಿ ನಕ್ಸಲರು, 8 ಮಂದಿ ನಾಗರಿಕರು ಹಾಗೂ 10 ಮಂದಿ ಪೊಲೀಸರು ಸೇರಿದ್ದಾರೆ.
ಪೊಲೀಸ್ ಮತ್ತು ಎಎನ್‌ಎಫ್ ಪಡೆಯಿಂದ ಹತ್ಯೆಯಾದ 20 ನಕ್ಸಲರ ಪಟ್ಟಿ
- ಆಂಧ್ರ ಮೂಲದ ನಕ್ಸಲ್ ನಾಯಕ ಭಾಸ್ಕರ್ ಅವರನ್ನು ರಾಯಚೂರಿನಲ್ಲಿ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು
- ನಕಲ್ಸ್ ಕಾರ್ಯಕರ್ತ ರಾಯಚೂರಿನ ಬುಡ್ಡಣ್ಣ ಅವರ ಹತ್ಯೆಯಾಗಿತ್ತು
- ನಕ್ಸಲ್ ವಲಯದಲ್ಲಿ ಸರಳ ಎಂದು ಚಿರಪರಿಚಿತರಾಗಿದ್ದ ಮೈಸೂರಿನ ರಾಜೇಶ್ವರಿಯವರು ಆಂಧ್ರದಲ್ಲಿ ನಕ್ಸಲ್ ಹೋರಾಟದ ಕುರಿತು ಅಧ್ಯಯನಕ್ಕೆ ಹೋಗಿದ್ದಾಗ ನಡೆದ ಎನ್ ಕೌಂಟರ್ ವೊಂದರಲ್ಲಿ 2001ರ ಜನವರಿಯಲ್ಲಿ ಹತರಾಗಿದ್ದರು. ಇವರು ಸಾಕೇತ್ ರಾಜನ್ ಅವರ ಬಾಳಸಂಗಾತಿಯಾಗಿದ್ದರು.
- 2003ರ ನವೆಂಬರ್ 17ರಂದು ರಾಯಚೂರು ಜಿಲ್ಲೆಯ ಸಿಂಧನೂರಿನ ಹಾಜಿಮಾ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪಾರ್ವತಿ ಎಂಬಿಬ್ಬರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು.
- 2005ರ ಫೆಬ್ರವರಿ 6ರಂದು ಮಾವೋವಾದಿ ಪಕ್ಷದ ರಾಜ್ಯ ಕಾರ್ಯದರ್ಶಿ ಸಾಕೇತ್ ರಾಜನ್ ಪೊಲೀಸ್ ಎನ್‌ಕೌಂಟರ್ ಬಲಿಯಾಗಿದ್ದರು. ಇವರ ಅಂಗರಕ್ಷಕನಾಗಿದ್ದ ಸಿಂಧನೂರಿನ ಶಿವಲಿಂಗು ಅವರನ್ನು ಈ ಸಂದರ್ಭದಲ್ಲಿ ಹತ್ಯೆ ಮಾಡಲಾಗಿತ್ತು.

- 2005ರ ಜೂನ್ 23ರಂದು ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಹಳ್ಳಿಹೊಳೆ ಸಮೀಪದ ದೇವರಬಾಳು ಎಂಬಲ್ಲಿ ಪೊಲೀಸರ ಗುಂಡಿಗೆ ಬೆಳಗಾವಿಯ ಅಜಿತ್ ಕುಸುಬಿ ಮತ್ತು ಮೂಡಿಗೆರೆಯ ಉಮೇಶ್ ಬಣಕಲ್ ಬಲಿಯಾಗಿದ್ದರು.
- 2006ರ ಡಿಸೆಂಬರ್ 25ರಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಬಳಿಯ ಕಿಗ್ಗದಲ್ಲಿ ನಕ್ಸಲ್ ದಿನಕರ ಎಎನ್‌ಎಫ್‌ನಿಂದ ಹತ್ಯೆಯಾಗಿದ್ದರು.
- 2007ರ ಜುಲೈ 10ರಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗುಡ್ಡೆ ತೋಟದ ಒಡೆಯರ ಮಠದಲ್ಲಿ ಸಿಂಧನೂರಿನ ಗೌತಮ್, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪರಮೇಶ್ವರ, ಸುಂದರೇಶ್, ರಾಮೇಗೌಡ್ಲು, ಮತ್ತು ಕಾವೇರಿಯವರನ್ನು ಎಎನ್ಎಫ್ ಹತ್ಯೆ ಮಾಡಿತ್ತು.
- 2008ರ ನವೆಂಬರ್ 20ರಂದು ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಮಾವಿನಹೊಲದಲ್ಲಿ ಸೊರಬದ ಮನೋಹರ್, ನವೀನ್, ಅಭಿಲಾಷ್ ಹತ್ಯೆಯಾಗಿದ್ದರು.
- 2010ರ ಮಾರ್ಚ್ 1ರಂದು ಕಾರ್ಕಳ ತಾಲೂಕಿನ ಮುನಿಯಾಲು ಮುಟ್ಲುಪಾಡಿಯ ಮೈರೋಳಿಯಲ್ಲಿ ಬೆಳ್ತಂಗಡಿ ತಾಲೂಕು ಕುತ್ಲೂರಿನ ವಸಂತ ಗೌಡ್ಲು ಅವರನ್ನು ಹತ್ಯೆ ಮಾಡಲಾಗಿತ್ತು.
- 2024ರ ನವೆಂಬರ್ 18ರಂದು ಕಾರ್ಕಳ ತಾಲೂಕಿನ ಹೆಬ್ರಿ ಸಮೀಪದ ಕಬ್ಬಿನಾಲೆಯಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಅವರನ್ನು ಹತ್ಯೆ ಮಾಡಲಾಗಿತ್ತು.
ನಕ್ಸಲರಿಂದ ಹತ್ಯೆಯಾದ 7 ಮಂದಿ ನಾಗರೀಕರು
- ರಾಯಚೂರಿನಲ್ಲಿ ಶಂಕಿತ ನಕ್ಸಲರು ಸುದರ್ಶನ್ ರೆಡ್ಡಿಯವರನ್ನು ಹತ್ಯೆ ಮಾಡಿದ್ದರು.
- 2005ರ ಮೇ17ರಂದು ಕೊಪ್ಪ ತಾಲೂಕಿನ ಮೆಣಸಿನ ಹಾಡ್ಯದಲ್ಲಿ ಗಿರಿಜನ ಮುಖಂಡ ಶೇಷಪ್ಪಗೌಡ್ಲು ಹತ್ಯೆ
- 2007ರ ಜೂನ್ 3ರಂದು ಶೃಂಗೇರಿಯ ಕಿಗ್ಗ ಸಮೀಪದ ಗುಂಡಘಟ್ಟದಲ್ಲಿ ನಕ್ಸಲರಿಂದ ಅಂಗಡಿ ಮಾಲೀಕ ವೆಂಕಟೇಶ ಹತ್ಯೆ
- 2008ರ ಮೇ 15ರಂದು ಹೆಬ್ರಿ ಸಮೀಪದ ಸೀತಾನದಿ ಬಳಿ ನಕ್ಸಲರ ಗುಂಡಿಗೆ ಶಿಕ್ಷಕ ಭೋಜ ಶೆಟ್ಟಿ ಹಾಗೂ ಅವರ ಗೆಳೆಯ ಕೃಷಿಕ ಸುರೇಶ್ ಶೆಟ್ಟಿ ಬಲಿ
- 2008 ಡಿಸೆಂಬರ್ 7ರಂದು ಬೈಂದೂರಿನ ಹಳ್ಳಿಹೊಳೆ ಸಮೀಪದ ಕೃಷಿಕ ಜಮೀನ್ದಾರ ಕೇಶವ ಯಡಿಯಾಳರನ್ನು ಪೊಲೀಸರ ಮಾಹಿತಿದಾರನೆಂಬ ಆರೋಪದಲ್ಲಿ ಮನೆಗೆ ನುಗ್ಗಿ ನಕ್ಸಲರು ಹತ್ಯೆಗೈದಿದ್ದರು.
- 2011ರ ಡಿಸೆಂಬರ್ 28ರಂದು ಉಡುಪಿಯ ತೆಂಗಿನಮಾರುವಿನಿಂದ ಎರಡು ಕಿ.ಮೀ. ದೂರ ದಟ್ಟಾರಣ್ಯದಲ್ಲಿ ಸದಾಶಿವ ಗೌಡ ಎಂಬವರ ಶವ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
- …………………………………………………………………………………
- 2005ರ ಫೆಬ್ರವರಿ 10ರಂದು ತುಮಕೂರು ಜಿಲ್ಲೆ ಪಾವಗಡದಲ್ಲಿ ಕೆಎಸ್ಆರ್‌ಪಿ 9ನೇ ಕ್ಯಾಂಪ್ ಸಿಬ್ಬಂದಿ ಮೇಲಿನ ನಕ್ಸಲ್ ದಾಳಿಯಲ್ಲಿ ನಾಗರೀಕನೊಬ್ಬನ ಸಾವು
10 ಮಂದಿ ಪೊಲೀಸರ ಸಾವು
- 2007ರ ಜುಲೈ 17ರಂದು ಆಗುಂಬೆ ಸಮೀಪದ ಹುಲ್ಲಾರಬೈಲಿನಲ್ಲಿ ಗುಂಡಿನ ಚಕಮಕಿ, ಎಸ್ಐ ವೆಂಕಟೇಶ ಹತ್ಯೆ
- 2008ರ ನವೆಂಬರ್ 20ರಂದು ಹೊರನಾಡು ಸಮೀಪ ಮಾವಿನಹೊಲ ಬಳಿ ಎನ್‌ಕೌಂಟರ್ ವೇಳೆ ಪೇದೆ ಗುರುಪ್ರಸಾದ್ ಸಾವು
- 2011ರ ಅಗಸ್ಟ್ 9ರಂದು ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾ.ಪಂ ವ್ಯಾಪ್ತಿಯ ನಾವೂರ ಗ್ರಾಮದ ಮಂಜಲದಲ್ಲಿ ಬೆಳಗಿನ ಜಾವ ನಕ್ಸಲ್ ನಿಗ್ರಹದಳದ ಪೊಲೀಸರ ಗನ್ ಮಿಸ್ ಫೈರ್ ಆಗಿ ಎಎನ್ಎಫ್ ಸಿಬ್ಬಂದಿ ಮಹಾದೇವ ಮಾನೆ ಬಲಿ.
- 2005ರ ಫೆಬ್ರವರಿ 10ರಂದು ರಾತ್ರಿ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ವೆಂಕಟಮ್ಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬೀಡು ಬಿಟ್ಟಿದ್ದ ಕೆಎಸ್ಆರ್‌ಪಿ 9ನೇ ಕ್ಯಾಂಪ್ ಸಿಬ್ಬಂದಿ ಮೇಲೆ ನಕ್ಸಲರು ದಾಳಿ ನಡೆಸಿದ್ದರು. ಆಂಧ್ರ ಗಡಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ತೀವ್ರ ಸ್ವರೂಪ ಪಡೆದುಕೊಂಡಿದ್ದ ಸಂದರ್ಭದಲ್ಲಿ ನಡೆದ ಈ ನಕ್ಸಲ್ ದಾಳಿಯಲ್ಲಿ 7 ಪೊಲೀಸರು ಸೇರಿ 8 ಜನ ಹತರಾಗಿದ್ದರು. 300ಕ್ಕೂ ಹೆಚ್ಚು ನಕ್ಸಲರ ತಂಡ ಒಮ್ಮೆಲೇ ದಾಳಿ ನಡೆಸಿತ್ತು.
ಶರಣಾಗತಿಗೂ ಮುನ್ನ ಸರ್ಕಾರಕ್ಕೆ ಪತ್ರ : ಹಕ್ಕೊತ್ತಾಯಗಳನ್ನು ಮುಂದಿಟ್ಟ ನಕ್ಸಲ್ ಹೋರಾಟಗಾರರು


