ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ 2023ರಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಧಾರ್ಮಿಕ ನಾಯಕ ಆಸಾರಾಮ್ ಬಾಪು (ಅಸುಮಲ್ ಹರ್ಪಲಾನಿ) ಅವರಿಗೆ ರಾಜಸ್ಥಾನ ಹೈಕೋರ್ಟ್ ಮಾರ್ಚ್ 31 ರವರೆಗೆ ಮಧ್ಯಂತರ ಜಾಮೀನು ನೀಡಿದೆ ಎಂದು ಪಿಟಿಐ ಮಂಗಳವಾರ ವರದಿ ಮಾಡಿದೆ. ಲೈಂಗಿಕ ದೌರ್ಜನ್ಯ ಪ್ರಕರಣ
ಒಂದು ವಾರದ ಹಿಂದೆಯಷ್ಟೆ ಅತ್ಯಾಚಾರ ಪ್ರಕರಣದಲ್ಲಿ ಆಸಾರಾಮ್‌ಗೆ ಸುಪ್ರೀಂ ಕೋರ್ಟ್ ಮಾರ್ಚ್ 31 ರವರೆಗೆ ಮಧ್ಯಂತರ ಜಾಮೀನು ನೀಡಿತ್ತು. ಸುಪ್ರೀಂ ಕೋರ್ಟ್ ಆದೇಶದ ನಂತರ, ಆಸಾರಾಮ್ ಅವರ ವಕೀಲರು ಅವರ ಶಿಕ್ಷೆಯನ್ನು ಅಮಾನತುಗೊಳಿಸಬೇಕೆಂದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಮಂಗಳವಾರ, ನ್ಯಾಯಮೂರ್ತಿಗಳಾದ ದಿನೇಶ್ ಮೆಹ್ತಾ ಮತ್ತು ವಿನೀತ್ ಕುಮಾರ್ ಮಾಥುರ್ ಅವರ ವಿಭಾಗೀಯ ಪೀಠವು ಧಾರ್ಮಿಕ ನಾಯಕನಿಗೆ ಮಧ್ಯಂತರ ಜಾಮೀನು ನೀಡಿದ್ದು, ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ರೀತಿಯಲ್ಲೆ ಇದೆ ಎಂದು ಹೇಳಿದೆ. ಲೈಂಗಿಕ ದೌರ್ಜನ್ಯ ಪ್ರಕರಣ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಒಂದು ಷರತ್ತನ್ನು ಹೊರತುಪಡಿಸಿ ಮಧ್ಯಂತರ ಜಾಮೀನಿನ ಷರತ್ತುಗಳು ಸುಪ್ರೀಂ ಕೋರ್ಟ್‌ನ ಜನವರಿ 7 ರ ಆದೇಶದಲ್ಲಿರುವಂತೆಯೇ ಇವೆ ಎಂದು ಅಸಾರಾಂ ಅವರ ವಕೀಲ ನಿಶಾಂತ್ ಬೋರಾ ಹೇಳಿದ್ದಾರೆ. “ಆಸಾರಾಮ್ ಜೋಧ್‌ಪುರದ ಹೊರಗೆ ಪ್ರಯಾಣಿಸಲು ಬಯಸಿದರೆ, ಅವರೊಂದಿಗೆ ಹೋಗಲು ಕೇಳಲಾದ ಮೂವರು ಕಾನ್‌ಸ್ಟೆಬಲ್‌ಗಳ ವೆಚ್ಚವನ್ನು ಅವರು ಭರಿಸಬೇಕಾಗುತ್ತದೆ” ಎಂದು ವಕೀಲರು ಪಿಟಿಐಗೆ ತಿಳಿಸಿದ್ದಾರೆ.
86 ವರ್ಷದ ಅವರು ಆಗಸ್ಟ್ 31, 2013 ರಿಂದ ಬಂಧನದಲ್ಲಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪಗಳನ್ನು ಎದುರಿಸುತ್ತಿದ್ದಾರೆ. ಜನವರಿ 2023 ರಲ್ಲಿ, ಗಾಂಧಿನಗರ ಸೆಷನ್ಸ್ ನ್ಯಾಯಾಲಯವು 2001 ಮತ್ತು 2006 ರ ನಡುವೆ ಮೋಟೆರಾದ ತಮ್ಮ ಆಶ್ರಮದಲ್ಲಿ 16 ವರ್ಷದ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಕ್ಕಾಗಿ ಅಸಾರಾಂಗೆ ಜೀವಾವಧಿ ಶಿಕ್ಷೆ ವಿಧಿಸಿತು.
ಶಿಕ್ಷೆಗೆ ಗುರಿಯಾಗುವ ಮೊದಲು, ಅಸಾರಾಂ ಒಬ್ಬ ಪ್ರಮುಖ ಧಾರ್ಮಿಕ ನಾಯಕರಾಗಿ ಜನಪ್ರಿಯರಾಗಿದ್ದರು. ಅವರು 1970 ರ ದಶಕದಲ್ಲಿ ಅಹಮದಾಬಾದ್‌ನ ಸಬರಮತಿ ನದಿಯ ಉದ್ದಕ್ಕೂ ತಮ್ಮ ಮೊದಲ ಆಶ್ರಮವನ್ನು ಸ್ಥಾಪಿಸಿದ್ದರು. ಮತ್ತು ಅಲ್ಲಿ ವಿವಿಧ ಉತ್ಪನ್ನಗಳು ಮತ್ತು ಆಧ್ಯಾತ್ಮಿಕ ಸಾಹಿತ್ಯವನ್ನು ಒಳಗೊಂಡ ಬಹುಕೋಟಿ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಿದ್ದರು.
ಆಗಸ್ಟ್ 2024 ರಲ್ಲಿ, ಗುಜರಾತ್ ಹೈಕೋರ್ಟ್ ಅಸಾರಾಂ ಬಾಪು ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸುವ ಮನವಿಯನ್ನು ತಿರಸ್ಕರಿಸಿತ್ತು.
ಇದನ್ನೂಓದಿ: ಸಾರಿಗೆ ನೌಕರರಿಗೆ ಸಿಗದ ಕೊರೊನಾ ಪರಿಹಾರ – ಸರ್ಕಾರದ ನಡೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ
ಸಾರಿಗೆ ನೌಕರರಿಗೆ ಸಿಗದ ಕೊರೊನಾ ಪರಿಹಾರ – ಸರ್ಕಾರದ ನಡೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ


