ಭಾರತದ ಸಾರ್ವತ್ರಿಕ ಚುನಾವಣೆಯ ಕುರಿತು ಸಿಇಒ ಮಾರ್ಕ್ ಝುಕರ್ಬರ್ಗ್ ನೀಡಿರುವ ಹೇಳಿಕೆ ಸಂಬಂಧ ಮೆಟಾ ಇಂಡಿಯಾ ಕಂಪನಿ ಕ್ಷಮೆಯಾಚಿಸಿದೆ.
ಕೋವಿಡ್ ನಿಭಾಯಿಸುವಲ್ಲಿ ವಿಫಲವಾದ ಕಾರಣ 2024ರ ಚುನಾವಣೆಯಲ್ಲಿ ಭಾರತದ ಈಗಿನ ಆಡಳಿತ ಪಕ್ಷ ಸೋತಿತು ಎಂದು ಝುಕರ್ ಬರ್ಗ್ ಹೇಳಿದ್ದರು.
ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಅವರ ಎಕ್ಸ್ ಪೋಸ್ಟ್ಗೆ ಪ್ರತಿಕ್ರಿಯೆಯಾಗಿ ಮೆಟಾ ಇಂಡಿಯಾದ ಉಪಾಧ್ಯಕ್ಷ ಶಿವನಾಥ್ ತುಕ್ರಾಲ್ ಮಂಗಳವಾರ (ಜ.14) ಕ್ಷಮೆಯಾಚಿಸಿದ್ದು, ಝುಕರ್ಬರ್ಗ್ ಅವರ ಹೇಳಿಕೆಯನ್ನು ‘ವಾಸ್ತವಿಕವಾಗಿ ತಪ್ಪು’ ಎಂದು ಕರೆದಿದ್ದಾರೆ.
“2024ರ ಚುನಾವಣೆಗಳಲ್ಲಿ ಅಧಿಕಾರದಲ್ಲಿದ್ದ ಪಕ್ಷಗಳು ಮರು ಆಯ್ಕೆಯಾಗಿಲ್ಲ ಎಂಬ ಮಾರ್ಕ್ ಅವರ ಅಭಿಪ್ರಾಯವು ಹಲವಾರು ದೇಶಗಳಲ್ಲಿ ನಿಜವಾಗಿದೆ. ಆದರೆ, ಆದರೆ ಭಾರತದಲ್ಲಿ ಅಲ್ಲ”
“ಈ ಅಜಾಗರೂಕ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ” ಎಂದು ತುಕ್ರಾಲ್ ಸಚಿವ ವೈಷ್ಣವ್ ಅವರ ಪೋಸ್ಟ್ಗೆ ಕಾಮೆಂಟ್ ಆಗಿ ಬರೆದಿದ್ದಾರೆ.
As the world’s largest democracy, India conducted the 2024 elections with over 640 million voters. People of India reaffirmed their trust in NDA led by PM @narendramodi Ji’s leadership.
Mr. Zuckerberg’s claim that most incumbent governments, including India in 2024 elections,…
— Ashwini Vaishnaw (@AshwiniVaishnaw) January 13, 2025
ಜೋ ರೋಗನ್ ಅವರೊಂದಿಗಿನ ಪಾಡ್ಕಾಸ್ಟ್ನಲ್ಲಿ ಝುಕರ್ಬರ್ಗ್ ಅವರು ”
ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಸರ್ಕಾರ ನಿರ್ವಹಿಸಿದ ರೀತಿಗೆ ಜಾಗತಿಕವಾಗಿ ಇರುವ ಅಸಮಾಧಾನಕ್ಕೆ ಭಾರತ ಒಂದು ಉದಾಹರಣೆ ಎಂದು ಹೇಳಿದ್ದರು. ಕೋವಿಡ್ ನಂತರ ನಡೆದ ಚುನಾವಣೆಗಳಲ್ಲಿ ಭಾರತದಲ್ಲಿ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ಅಧಿಕಾರದಲ್ಲಿದ್ದ ಪಕ್ಷಗಳು ಸೋತವು” ಎಂದಿದ್ದರು.
ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯ ನೇತೃತ್ವ ವಹಿಸಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಝುಕರ್ಬರ್ಗ್ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ತಮ್ಮ ತಂಡ ಮೆಟಾಗೆ ಸಮನ್ಸ್ ಜಾರಿ ಮಾಡಲಿದೆ ಎಂದು ಮಂಗಳವಾರ ಹೇಳಿದ್ದರು.
“ಈ ತಪ್ಪಿಗಾಗಿ ಮೆಟಾ ಭಾರತೀಯ ಸಂಸತ್ತು ಮತ್ತು ಈ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು” ಎಂದು ದುಬೆ ಆಗ್ರಹಿಸಿದ್ದರು.
ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯಿಸಿ “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ, ಭಾರತವು 2024 ರ ಚುನಾವಣೆಯನ್ನು 640 ಮಿಲಿಯನ್ಗಿಂತಲೂ ಹೆಚ್ಚು ಮತದಾರರೊಂದಿಗೆ ನಡೆಸಿತು. ಭಾರತದ ಜನರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಎನ್ಡಿಎ ಮೇಲೆ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದ್ದಾರೆ”
“2024ರ ಚುನಾವಣೆಗಳಲ್ಲಿ ಭಾರತ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳು ಕೋವಿಡ್ ನಂತರ ಸೋತವು ಎಂಬ ಝುಕರ್ಬರ್ಗ್ ಅವರ ಹೇಳಿಕೆ ವಾಸ್ತವಿಕವಾಗಿ ತಪ್ಪಾಗಿದೆ” ಎಂದಿದ್ದರು.
“800 ಮಿಲಿಯನ್ ಜನರಿಗೆ ಉಚಿತ ಆಹಾರ, 2.2 ಬಿಲಿಯನ್ ಉಚಿತ ಲಸಿಕೆಗಳು ಮತ್ತು ಕೋವಿಡ್ ಸಮಯದಲ್ಲಿ ವಿಶ್ವದಾದ್ಯಂತ ರಾಷ್ಟ್ರಗಳಿಗೆ ಸಹಾಯದಿಂದ ಹಿಡಿದು, ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುನ್ನಡೆಸುವವರೆಗೆ, ಪ್ರಧಾನಿ ಮೋದಿಯವರ ನಿರ್ಣಾಯಕ 3ನೇ ಅವಧಿಯ ಗೆಲುವು ಉತ್ತಮ ಆಡಳಿತ ಮತ್ತು ಸಾರ್ವಜನಿಕ ನಂಬಿಕೆಗೆ ಸಾಕ್ಷಿಯಾಗಿದೆ” ಎಂದು ಬರೆದುಕೊಂಡಿದ್ದರು.
“ಝುಕರ್ಬರ್ಗ್ ಅವರಿಂದಲೇ ತಪ್ಪು ಮಾಹಿತಿಯನ್ನು ನೋಡುವುದು ನಿರಾಶಾದಾಯಕವಾಗಿದೆ. ಸತ್ಯ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯೋಣ” ಎಂದಿದ್ದರು.
ಲೋಕಸಭೆ 2024ರ ಚುನಾವಣೆ ಸೋಲಿನ ಬಗ್ಗೆ ಜುಕರ್ಬರ್ಗ್ ಹೇಳಿಕೆ – ಭಾರತದ ವರ್ಚಸ್ಸಿಗೆ ಧಕ್ಕೆ ಎಂದ ಬಿಜೆಪಿ


