ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ನಡೆದ ಹಸುವಿನ ಕೆಚ್ಚಲು ಕೊಯ್ದ ಘಟನೆ ಹಿನ್ನೆಲೆಯಲ್ಲಿ ಹಸುವಿನ ಮಾಲೀಕ ಕರ್ಣ ಅವರ ತಾಯಿ ಸವರಿ ಅಮ್ಮಳ್, ಸಹೋದರಿ ಅಮುದಾ ಅವರಿಗೆ ಸಚಿವ ಜಮೀರ್ ಅಹಮದ್ ಖಾನ್ ಅವರು ಮೂರು ಲಕ್ಷ ರೂ. ವೆಚ್ಚದಲ್ಲಿ ಮೂರು ಹಸು ಖರೀದಿಸಿ ನೀಡಿದ್ದಾರೆ. ಕೆಚ್ಚಲು ಕೊಯ್ದ ಪ್ರಕರಣ
ಅಘಾತಕಾರಿ ಘಟನೆಯಲ್ಲಿ ದುಷ್ಕರ್ಮಿಯು ಎರಡು ಹಸುಗಳ ಕೆಚ್ಚಲು ಕೊಯ್ದು, ಮತ್ತೊಂದು ಹಸುವಿಗೆ ಗಾಯಗೊಳಿಸಿದ್ದನು. ಆರೋಪಿಯನ್ನು ಬೆಂಗಳೂರು ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಆತನನ್ನು ಬಿಹಾರದ ಚಂಪಾರಣ್ ಜಿಲ್ಲೆಯ ಶೇಖ್ ನಸ್ರು ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಜಮೀರ್ ಅವರ ನಡೆಯ ಬಗ್ಗೆ ಮಾತನಾಡಿದ ಅಮುದಾ, “ಹಸು ನಿರಾಕರಿಸಿದ ನನ್ನ ಸಹೋದರನ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಜಮೀರಣ್ಣ ಅವರು ಒಳ್ಳೆ ಮನಸ್ಸಿನಿಂದ ಹಸು ಕೊಡಿಸಿದ್ದಾರೆ. ಕೆಲವರು ಇದರಲ್ಲಿ ರಾಜಕಾರಣ ಮಾಡುತ್ತಿದ್ದು, ನಾವು ಶಾಸಕರ ಜತೆ ಇದ್ದೇವೆ” ಎಂದು ಹೇಳಿದ್ದಾರೆ. ಕೆಚ್ಚಲು ಕೊಯ್ದ ಪ್ರಕರಣ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆರೋಪಿಯನ್ನು ಜನವರಿ 25 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿ ಹೇಳಿದೆ. ಹಸುಗಳ ಮೇಲೆ ದಾಳಿ ಮಾಡುವಾಗ ಆರೋಪಿಯು ಕುಡಿದಿದ್ದ ಎಂದು ಪೊಲೀಸರ (ಪಶ್ಚಿಮ) ಉಪ ಆಯುಕ್ತ ಎಸ್. ಗಿರೀಶ್ ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಘಟನೆ ನಡೆದ ಸ್ಥಳದಿಂದ 50 ಮೀಟರ್ ದೂರದಲ್ಲಿರುವ ಪ್ಲಾಸ್ಟಿಕ್ ಮತ್ತು ಬಟ್ಟೆ ಚೀಲ ಹೊಲಿಗೆ ಅಂಗಡಿಯಲ್ಲಿ ನಸ್ರು ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಎಂದು ಗಿರೀಶ್ ಹೇಳಿದ್ದಾರೆ. ದುಷ್ಕೃತ್ಯದಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಹಸುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಪ್ರಸ್ತುತ ಅಪಾಯದಿಂದ ಪಾರಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು
ಭಾನುವಾರ ಬೆಳಗಿನ ಜಾವ ಈ ಘಟನೆ ನಡೆದಿದೆ ಎಂದು ಹಾಲು ಮಾರಾಟಗಾರರಾಗಿರುವ ಹಸುಗಳ ಮಾಲೀಕ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬೆಳಿಗ್ಗೆ ಹಾಲು ಕರೆಯಲು ತೆರಳಿದಾಗ ಹಸುಗಳ ಕೆಚ್ಚಲಿನಲ್ಲಿ ರಕ್ತಸ್ರಾವವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಘಟನೆ ಬೆಳಕಿಗೆ ಬಂದ ಕೂಡಲೇ ಬಿಜೆಪಿ ಪ್ರತಿಭಟನೆ ನಡೆಸಿದ್ದು, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನೆಯ ಹಿಂದೆ ಇರುವ ಜಿಹಾದಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾವು ‘ಕಪ್ಪು ಸಂಕ್ರಾಂತಿ’ ಆಚರಿಸುತ್ತೇವೆ ಎಂದು ಅಶೋಕ್ ಹೇಳಿದ್ದರು.
ಇದನ್ನೂಓದಿ: ಹುಟ್ಟುಹಬ್ಬದ ನೆಪದಲ್ಲಿ ಕರೆಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ


