ಇದೇ ಜನವರಿ 25ರಂದು ಬೆಂಗಳೂರಿನ ಸೈಂಟ್ ಜೋಸೆಫ್ ಯುನಿವರ್ಸಿಟಿಯ ಝೇವಿಯರ್ ಹಾಲ್ ನಲ್ಲಿ ಬೆಳಗ್ಗೆ 9.30 ರಿಂದ ಸಂಜೆಯವರೆಗೂ ” ಸಾಂಸ್ಕೃತಿಕ ಸಂವಿಧಾನ ಪರಿಷೆ” ಮಾಡಲು ನಿರ್ಧರಿಸಲಾಗಿದೆ ಎಂದು ಪರಿಷೆ ತಂಡದ ಗುರುಬಸವ ಬರಗೂರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, ರಾಜ್ಯದ ಜೀವಪರ ಕಲಾವಿದರ ಒಗ್ಗೂಡುವಿಕೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಕಲಾವಿದರು ಸಂವಿಧಾನದ ಮೌಲ್ಯ, ಆಶಯಗಳ ಪರ ಇರುವ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಲು ಈ ಮೂಲಕ ಆಹ್ವಾನಿಸುತ್ತೇವೆ ಎಂದಿದ್ದಾರೆ.
ಸ್ವಾತಂತ್ರ್ಯ ಭಾರತದಲ್ಲಿ ಎಲ್ಲಾ ಜನರ ಹಿತ ಬಯಸುವ ಮಹಿಳೆಯರ, ನೊಂದವರ, ಬಡವರ, ಶೋಷಿತರಿಗೆ ಸಾಮಾಜಿಕ ನ್ಯಾಯ ಕೊಟ್ಟ ಸಮತೆ, ಸಮಾನತೆ, ಬ್ರಾತೃತ್ವ, ಭಾವದ, ಜಾತ್ಯತೀತ – ಸಾಮಾಜಿಕ ನ್ಯಾಯ ಬಹುತ್ವವನ್ನು ಒಳಗೊಂಡ, ಪ್ರಜಾಪ್ರಭುತ್ವ ಆಶಯದ ಭಾರತದ ಸಂವಿಧಾನ ಮತ್ತು ಅದರ ಮೌಲ್ಯಗಳನ್ನು ಈ ನೆಲದ ಹಲವು ಸಾಂಸ್ಕೃತಿಕ ಪ್ರಕಾರಗಳಾದ ತಮಟೆ ಕುಣಿತ, ಹಾಡು, ತತ್ವಪದ, ನಾಟಕ, ಕಥನ ಹಾಡು, ಭರತ ನಾಟ್ಯ, ಹಸಿರು ಪದ, ಯಕ್ಷಗಾನ, ಚೌಡಿಕೆ ಪದ ಹಾಗೂ ಹಲವು ನೆಲ ಸಂಗೀತ ಪರಿಕರಗಳ ಸದ್ದುಗಳ ಮೂಲಕ ಅಭಿವ್ಯಕ್ತಿಸುವ “ಸಾಂಸ್ಕೃತಿಕ ಸಂವಿಧಾನ ಪರಿಷೆ” ಯನ್ನು ಸಂವಿಧಾನ ಆಶಯದ ಪರವಾಗಿ ಇರುವ ಕರ್ನಾಟಕದ ಜೀವಪರ ಕಲಾವಿದರು, ಸಾಹಿತಿಗಳು ಸೇರಿ ಜನವರಿ 25 ಶನಿವಾರ ದಂದು ಇಡೀ ದಿನ
ಬೆಂಗಳೂರಿನ ಶಾಂತಿನಗರದಲ್ಲಿರುವ ಸೇಂಟ್ ಜೋಸೆಫ್ ಯೂನಿವರ್ಸಿಟಿಯಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪರಿಷೆಯಲ್ಲಿ ಸಂವಿಧಾನ ಮೌಲ್ಯ ಇರುವ ಪುಸ್ತಕ, ಟೀ ಸರ್ಟ್, ಕೀ ಬಂಚ್, ಪೆನ್ಸ್, ಹೀಗೆ ಅನೇಕ ಪರಿಕರಗಳ ಮಳಿಗೆಗಳನ್ನು ಅಳವಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೇರು ಬೆವರು ಕಲಾ ಬಳಗದ ಚಂದ್ರಶೇಖರ್ ರವರ ನಂ. 8867361110 ಅನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿಕೆಯಲ್ಲಿ ಹೇಳಿದ್ದಾರೆ.
ಛತ್ತೀಸ್‌ಗಢ| ಸುಕ್ಮಾದಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ; 12 ನಕ್ಸಲರು ಬಲಿ


