Homeಮುಖಪುಟಹೊಲಗಳಿಗೆ ಕ್ರಿಮಿನಾಶಕ ಸಿಂಪಡಣೆಗೆ ಡ್ರೋನ್ ತರಬೇತಿ ಪಡೆದ ಮಹಿಳೆಯರ ನೇಮಕ

ಹೊಲಗಳಿಗೆ ಕ್ರಿಮಿನಾಶಕ ಸಿಂಪಡಣೆಗೆ ಡ್ರೋನ್ ತರಬೇತಿ ಪಡೆದ ಮಹಿಳೆಯರ ನೇಮಕ

- Advertisement -
- Advertisement -

ಚೆನ್ನೈ: ರೈತರ ಹೊಲಗಳಲ್ಲಿ ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆಗಾಗಿ ಕೇಂದ್ರ ಯೋಜನೆಯಡಿ ತರಬೇತಿ ಪಡೆದ ರಾಜ್ಯದ ಮೊದಲ ಮಹಿಳಾ ತಂಡವನ್ನು ನಿಯೋಜಿಸಲಾಗಿದೆ. ನೀರು ತುಂಬಿದ ಹೊಲಗಳಿಗೆ ಡ್ರೋನ್‌ ಸಾಗಣೆಯು ಅದರ ಭಾರವಾದ ತೂಕವು ಒಂದು ಸವಾಲಾಗಿದೆ.

ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆಯಾದ 27 ವರ್ಷದ ನಂದಿನಿ ಸುಗುಮಾರ್ ಯಾವಾಗಲೂ ಡ್ರೋನ್‌ಗಳ ಬಗ್ಗೆ ಆಕರ್ಷಣೆಯನ್ನು ಹೊಂದಿದ್ದರು.

ಮದುವೆಗಳಲ್ಲಿ ಫೋಟೊ ಮತ್ತು ವೀಡಿಯೋ ರೆಕಾರ್ಡ್ ಗಳಿಗೆ ಬಳಸುತ್ತಿದ್ದ ಈ ಡ್ರೋನ್ ಗಳು ಜನರ ತಲೆಯ ಮೇಲೆ ಗಿರಕಿ ಹೊಡೆಯುವುದನ್ನು ಮಾತ್ರ ನೋಡಿದ್ದ ಅವರು, ಕೃಷಿ ಪ್ರಧಾನ ಕಲ್ಲಕುರಿಚಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಸಹಾಯ ಮಾಡುವ ಸಲುವಾಗಿ ಈ ಡ್ರೋನ್‌ ತರಬೇತಿ ಪಡೆದ ಮಹಿಳಾ ಡ್ರೋನ್ ಪೈಲಟ್‌ಗಳಲ್ಲಿ ನಂದಿನಿ ಒಬ್ಬರಾಗಿದ್ದಾರೆ.

ಪೊಂಗಲ್‌ಗೆ ಹದಿನೈದು ದಿನಗಳ ಮೊದಲು, ಶಂಕರಪುರಂ ಬಳಿಯ ಗ್ರಾಮವಾದ ದೇವಪಂಡಲಂ ನಿವಾಸಿಗಳು ನಂದಿನಿಯವರು ಡ್ರೋನ್ ಮೂಲಕ ಕಬ್ಬಿನ ಹೊಲದಲ್ಲಿ  ಸುಳಿದಾಡುತ್ತಾ ಮೇಲೆ ಕ್ರಿಮಿನಾಶಕ ಸಿಂಪಡಿಸುವುದನ್ನು ವಿಸ್ಮಯದಿಂದ ನೋಡಿದರು. ಈ ವಿಶಿಷ್ಟವಾದ ಹಾರಾಟವು ಕೇವಲ ಏಳು ನಿಮಿಷಗಳಲ್ಲಿ ಇಡೀ ಕಬ್ಬಿನ ಹೊಲವನ್ನು ಆವರಿಸಿತು ಮತ್ತು ಗ್ರಾಮಸ್ಥರ ಜೋರಾದ ಹರ್ಷೋದ್ಗಾರಗಳ ನಡುವೆ ಭೂಮಿಗೆ ಮರಳಿತು.

ನಂದಿನಿ ಅವರು ಕೇಂದ್ರ ಸರ್ಕಾರದ ನಮೋ ಡ್ರೋನ್ ದೀದಿ ಯೋಜನೆಯಡಿ ಆಯ್ಕೆಯಾದ ತಮಿಳುನಾಡಿನ ಮೊದಲ ಮಹಿಳಾ ಸ್ವ-ಸಹಾಯ ಗುಂಪು ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಗ್ರಾಮೀಣ ಮಹಿಳೆಯರಿಗೆ ಡ್ರೋನ್ ಪೈಲಟ್‌ಗಳಾಗಿ ತರಬೇತಿ ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಮತ್ತು ಸ್ಥಳೀಯ ಕೃಷಿ ಚಟುವಟಿಕೆಗೆ ಅವಿಭಾಜ್ಯ ಪಾಲುದಾರರನ್ನಾಗಿ ಮಾಡುವ ಗುರಿಯನ್ನು ಇದು ಹೊಂದಿದೆ.

ಕಲ್ಲಕುರಿಚಿಯಲ್ಲಿ ನಂದಿನಿಯವರು ಡ್ರೋನ್ ದೀದಿ ಯೋಜನೆಯ ಬಗ್ಗೆ ತಿಳಿದುಕೊಂಡರು ಮತ್ತು ಯಾವುದೇ ಆಲೋಚನೆ ಮಾಡದೇ ತರಬೇತಿಗಾಗಿ ಅರ್ಜಿ ಸಲ್ಲಿಸಿದರು. ತಮಿಳುನಾಡು ಮಹಿಳಾ ಅಭಿವೃದ್ಧಿ ನಿಗಮದಿಂದ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯಾಗಿ ಗುರುತಿಸಲ್ಪಟ್ಟ ನಂತರ, ಅವರನ್ನು ಕಲ್ಲಕುರಿಚಿ ಜಿಲ್ಲೆಯ ಕ್ಲಸ್ಟರ್‌ಗಳಲ್ಲಿ ಈ ತರಬೇತಿಗಾಗಿ ಆಯ್ಕೆ ಮಾಡಲಾಯಿತು.

ನಂದಿನಿ ಚೆನ್ನೈನಲ್ಲಿ ಗರುಡ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ನಡೆಸಿದ ಡ್ರೋನ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತು ಐದು ದಿನಗಳ ಪ್ರಾಯೋಗಿಕ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡರು. ರಿಮೋಟ್ ಪೈಲಟ್ ತರಬೇತಿ ತರಗತಿಗಳನ್ನು ಪೂರ್ಣಗೊಳಿಸಿದ ನಂತರ, ಅವರಿಗೆ ಎರಡು ಟ್ಯಾಂಕ್‌ಗಳು ಮತ್ತು ಬ್ಯಾಟರಿ ಸೆಟ್ ಹೊಂದಿರುವ 7 ಲಕ್ಷ ರೂ. ಮೌಲ್ಯದ ಉಚಿತ ಡ್ರೋನ್ ನೀಡಲಾಯಿತು.

ನುರಿತ ಡ್ರೋನ್ ಪೈಲಟ್ ಆಗಿ ಪದವಿ ಪಡೆದ ನಂದಿನಿ, ರೈತರ ವ್ಯಾಪಕ ಕೃಷಿ ಚಟುವಟಿಕೆಗಳ ಅವಶ್ಯಕತೆಗಳನ್ನು ಪೂರೈಸುವುದು, ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಸಿಂಪಡಿಸುವುದು ಮತ್ತು ಹೊಲಗಳಿಗೆ ನೀರುಣಿಸುವುದಕ್ಕಾಗಿ ಈ ತಂತ್ರಜ್ಞಾನವನ್ನು ಅಳವಡಿಸುವುದಕ್ಕೆ ಉತ್ಸುಕರಾಗಿದ್ದಾರೆ.

ಡ್ರೋನ್ ಹಾರಾಟ ನಡೆಸುವುದು ಎಂದರೆ ನನಗೆ ತುಂಬಾ ಖುಷಿ. ನಾನು ಸ್ಥಳೀಯ ರಸಗೊಬ್ಬರ ಅಂಗಡಿಗಳಿಗೆ ನನ್ನ ಸಂಪರ್ಕ ವಿವರಗಳನ್ನು ನೀಡಿದ್ದೇನೆ ಮತ್ತು ರೈತರಿಗೆ ಸಹಾಯ ಮಾಡಲು ಹತ್ತಿರದ ಹಳ್ಳಿಗಳಿಗೆ ಪ್ರವಾಸ ಮಾಡುತ್ತಿದ್ದೇನೆ. ಡ್ರೋನ್ ಮೂಲಕ ದ್ರವಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸುವುದು ತುಂಬಾ ವೆಚ್ಚದಾಯಕವಾಗಿದೆ ಮತ್ತು ಒಂದು ಎಕರೆ ಕೃಷಿ ಭೂಮಿಯನ್ನು ಆವರಿಸಲು ಸುಮಾರು ಏಳು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳುತ್ತಾರೆ.

ಅವರು ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಿಸುವುದಕ್ಕಾಗಿ ಎಕರೆಗೆ 400 ರೂ. ಶುಲ್ಕ ವಿಧಿಸುತ್ತಾರೆ. ದೇವಪಂಡಲಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಹೆಚ್ಚಿನ ರೈತರು 1ರಿಂದ 4 ಎಕರೆಗಳವರೆಗಿನ ಸಣ್ಣ ಭೂ ಹಿಡುವಳಿಗಳನ್ನು ಹೊಂದಿದ್ದಾರೆ.

“ದೇವಪಂಡಲಂನಲ್ಲಿರುವ ರೈತನ ಒಡೆತನದ ಕಬ್ಬಿನ ಹೊಲ ನನ್ನ ಮೊದಲ ಭೇಟಿ. ಇಲ್ಲಿ ನಾನು ಡ್ರೋನ್ ನ ಮೊದಲ ಹಾರಾಟ ನಡೆಸಿದೆ ಮತ್ತು ಈ ಸೇವೆಯು ರೈತನಿಗೆ ತೃಪ್ತಿಕರ ಫಲಿತಾಂಶವನ್ನು ಕೊಟ್ಟಿದೆ ಎಂದು ಖಚಿತಪಡಿಸಿಕೊಳ್ಳಲು ನಾನು ಯಾವ ಶುಲ್ಕವನ್ನು ವಿಧಿಸಲಿಲ್ಲ” ಎಂದು ಅವರು ಹೇಳುತ್ತಾರೆ. ಡ್ರೋನ್ ಸಹಾಯಕ ತರಬೇತಿಯನ್ನು ಪೂರ್ಣಗೊಳಿಸಿದ ಅವರ ಪತಿ ಸುಗುಮಾರ್ ಕೂಡ ಸಾಧನವನ್ನು ನಿರ್ವಹಿಸಲು ಸಹಾಯ ಮಾಡುತ್ತಾರೆ.

ಕಲ್ಲಕುರಿಚಿ ಜಿಲ್ಲೆಯ ಎರೈಯೂರ್ ಬಳಿಯ ಕೊಮ್ಮಸಮುತಿರಂನ ವಿ.ಶರಣ್ಯ ಕೂಡ ತರಬೇತಿ ಪಡೆದ ಮಹಿಳಾ ಡ್ರೋನ್ ಪೈಲಟ್. ಅವರು 10ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದಾರೆ ಮತ್ತು ಮಹಿಳೆಯರಿಗೆ ಕಡಿಮೆ ಉದ್ಯೋಗಾವಕಾಶಗಳು ಇರುವುದರಿಂದ ಪ್ರಸ್ತುತ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.

ಚೆನ್ನೈನಲ್ಲಿ ಡ್ರೋನ್ ಪೈಲಟ್ ತರಬೇತಿಯನ್ನು ಪೂರ್ಣಗೊಳಿಸಿದ ಶರಣ್ಯ, ಈಗ ಉಲುಂದೂರ್ಪೇಟೆ ಬ್ಲಾಕ್‌ನ ಹಳ್ಳಿಗಳಲ್ಲಿ ಸಂಚರಿಸಿ, ಮಾಸಿಕ ಆದಾಯವನ್ನು ಕೊಡುವ ಹೊಲಗಳಲ್ಲಿ ಕೃಷಿ ಸಂಬಂಧಿತ ಡ್ರೋನ್ ಸಿಂಪಡಣೆಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

“ರೈತರಿಂದ ಬರುವ ಸಾಮಾನ್ಯ ಬೇಡಿಕೆಯೆಂದರೆ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಸಿಂಪಡಣೆ. ನಾನು ಡ್ರೋನ್ ನಿಂದ ಒಂದು ಎಕರೆಯನ್ನು ಆವರಿಸಿದ ತಕ್ಷಣ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ. ಆಗ ನಾನು ಅದನ್ನು ಚಾರ್ಜ್ ಮಾಡಬೇಕಾಗುತ್ತದೆ. ಇನ್ನೂ ಎರಡು ಬ್ಯಾಟರಿಗಳನ್ನು ಖರೀದಿಸಲು ನಾನು ಪಂಚಾಯತ್ ಮಟ್ಟದ ಒಕ್ಕೂಟದಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ” ಎಂದು ಅವರು ಹೇಳುತ್ತಾರೆ.

ಇದರಲ್ಲಿ ಇತರ ಸವಾಲುಗಳು ಸಹ ಇವೆ. “ಸಮೀಪದ ಬ್ಲಾಕ್‌ಗಳಿಂದ ರೈತರಿಂದ ನನಗೆ ಕರೆಗಳು ಬಂದರೂ, ಡ್ರೋನ್ ಅನ್ನು ಸಾಗಿಸುವುದು ಒಂದು ಸಮಸ್ಯೆಯಾಗಿದೆ. ಏಕೆಂದರೆ ಅದು ಗೊಬ್ಬರ ಮತ್ತು ನೀರಿನಿಂದ ತುಂಬಿದ ನಂತರ ಸುಮಾರು 30 ಕೆಜಿ ತೂಗುತ್ತದೆ. ಅದನ್ನು ಸಾಗಿಸಲು ಇಬ್ಬರು ಜನರು ಬೇಕಾಗುತ್ತದೆ ಮತ್ತು ಡ್ರೋನ್ ಸಾಗಿಸಲು ಸೆಕೆಂಡ್ ಹ್ಯಾಂಡ್ ವಾಹನ ಖರೀದಿಗೆ ಸುಮಾರು 3 ರೂ. ಲಕ್ಷ ವೆಚ್ಚವಾಗುತ್ತದೆ. ಆದಾಗ್ಯೂ, ನನ್ನ ಹೊಸ ಉದ್ಯೋಗವು ನನ್ನ ಆದಾಯವನ್ನು ಪೂರೈಸುತ್ತದೆ ಮತ್ತು ದೀರ್ಘಾವಧಿಯಲ್ಲಿ ಇದು ಪ್ರಯೋಜನಕಾರಿಯಾಗಿದೆ ಎಂದು ಭಾವಿಸುತ್ತೇನೆ” ಎಂದು ಶರಣ್ಯ ಹೇಳುತ್ತಾರೆ.

ಕೃಪೆ: ದಿ ಹಿಂದೂ

ಮಹಿಳೆಯರ ವಿರುದ್ಧ ಅಸಭ್ಯ, ಅಶ್ಲೀಲ ಆರೋಪ: ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕನ ವಿರುದ್ಧ ದೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...