ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದಲ್ಲಿ ಸರ್ಕಾರವು ಹೊಸ ಆದಾಯ ತೆರಿಗೆ ಮಸೂದೆಯನ್ನು ಪರಿಚಯಿಸುವ ಸಾಧ್ಯತೆಯಿದೆ ಎಂದು TNIE ಶನಿವಾರ ವರದಿ ಮಾಡಿದೆ. ಈ ಮಸೂದೆಯು, ಪ್ರಸ್ತುತ ಐಟಿ ಕಾನೂನನ್ನು ಸರಳೀಕರಿಸಲು, ಅದನ್ನು ಅರ್ಥವಾಗುವಂತೆ ಮಾಡಲು ಮತ್ತು ಪುಟಗಳ ಸಂಖ್ಯೆಯನ್ನು ಸುಮಾರು 60%ದಷ್ಟು ಕಡಿಮೆ ಮಾಡಲು ಪ್ರಯತ್ನಿಸುತ್ತದೆ ಎಂದು ಅದು ಹೇಳಿದೆ. ಬಜೆಟ್ – 2025
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಜುಲೈ ಬಜೆಟ್‌ನಲ್ಲಿ ಆರು ದಶಕಗಳಷ್ಟು ಹಳೆಯದಾದ 1961 ರ ಆದಾಯ ತೆರಿಗೆ ಕಾಯ್ದೆಯ ಸಮಗ್ರ ಪರಿಶೀಲನೆಯನ್ನು ಆರು ತಿಂಗಳೊಳಗೆ ಮಾಡುವುದಾಗಿ ಘೋಷಿಸಿದ್ದರು. 2025ರ ಬಜೆಟ್ ಅಧಿವೇಶನವು ಜನವರಿ 31 ರಿಂದ ಏಪ್ರಿಲ್ 4 ರವರೆಗೆ ನಿಗದಿಪಡಿಸಲಾಗಿದೆ.
“ಹೊಸ ಆದಾಯ ತೆರಿಗೆ ಕಾನೂನನ್ನು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಪರಿಚಯಿಸಲಾಗುವುದು. ಇದು ಹೊಸ ಕಾನೂನಾಗಿರುತ್ತದೆ ಮತ್ತು ಅಸ್ತಿತ್ವದಲ್ಲಿರುವ ಕಾಯ್ದೆಗೆ ತಿದ್ದುಪಡಿಯಲ್ಲ. ಪ್ರಸ್ತುತ, ಕರಡು ಕಾನೂನನ್ನು ಕಾನೂನು ಸಚಿವಾಲಯ ಪರಿಶೀಲಿಸುತ್ತಿದ್ದು, ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ಅದನ್ನು ಸಂಸತ್ತಿನಲ್ಲಿ ತರಲಾಗುವುದು” ಎಂದು ಮೂಲಗಳು ತಿಳಿಸಿವೆ ಎಂದು ವರದಿ ಹೇಳಿದೆ. ಬಜೆಟ್ – 2025
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮೊದಲಾರ್ಧ (ಜನವರಿ 31-ಫೆಬ್ರವರಿ 13) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಪ್ರಾರಂಭವಾಗಲಿದೆ ಮತ್ತು ನಂತರ 2024-25 ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಾಗುವುದು. ಮಾರ್ಚ್ 10 ರಂದು ಮತ್ತೆ ಸಂಸತ್ತು ಸಭೆ ಸೇರಲಿದ್ದು, ಏಪ್ರಿಲ್ 4 ರವರೆಗೆ ಅಧಿವೇಶನ ನಡೆಯಲಿದೆ.
1961 ರ ಐಟಿ ಕಾಯ್ದೆಯ ಸಮಗ್ರ ಪರಿಶೀಲನೆಗಾಗಿ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಘೋಷಣೆಗೆ ಅನುಗುಣವಾಗಿ, ಕೇಂದ್ರ ನೇರ ತೆರಿಗೆ ಮಂಡಳಿ(ಸಿಬಿಡಿಟಿ)ಯು ಪರಿಶೀಲನೆಯ ಮೇಲ್ವಿಚಾರಣೆಗೆ ಮತ್ತು ಕಾಯ್ದೆಯನ್ನು ಸಂಕ್ಷಿಪ್ತ, ಸ್ಪಷ್ಟ ಮತ್ತು ಅರ್ಥಮಾಡಿಕೊಳ್ಳಲು ಸುಲಭಗೊಳಿಸಲು ಆಂತರಿಕ ಸಮಿತಿಯನ್ನು ಸ್ಥಾಪಿಸಿತ್ತು. ಈ ಸಮಿತಿಯು ವಿವಾದಗಳು, ಮೊಕದ್ದಮೆಗಳನ್ನು ಕಡಿಮೆ ಮಾಡುತ್ತದೆ ಮತ್ತು ತೆರಿಗೆದಾರರಿಗೆ ಹೆಚ್ಚಿನ ತೆರಿಗೆ ಖಚಿತತೆಯನ್ನು ಒದಗಿಸುತ್ತದೆ. ಅಲ್ಲದೆ, ಕಾಯ್ದೆಯ ವಿವಿಧ ಅಂಶಗಳನ್ನು ಪರಿಶೀಲಿಸಲು 22 ವಿಶೇಷ ಉಪಸಮಿತಿಗಳನ್ನು ಸ್ಥಾಪಿಸಲಾಯಿತು.
ಭಾಷೆಯ ಸರಳೀಕರಣ, ಮೊಕದ್ದಮೆ ಕಡಿತ, ಅನುಸರಣೆ ಕಡಿತ ಮತ್ತು ಅನಗತ್ಯ/ಬಳಕೆಯಲ್ಲಿಲ್ಲದ ನಿಬಂಧನೆಗಳ ವಿಚಾರಗಳಿಗೆ ನಾಲ್ಕು ವಿಭಾಗಗಳಲ್ಲಿ ಸಾರ್ವಜನಿಕರ ಅಭಿಪ್ರಾಯ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ. ಕಾಯ್ದೆಯ ಪರಿಶೀಲನೆಯ ಕುರಿತು ಆದಾಯ ತೆರಿಗೆ ಇಲಾಖೆಯು ಪಾಲುದಾರರಿಂದ 6,500 ಸಲಹೆಗಳನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ. ನಿಬಂಧನೆಗಳು ಮತ್ತು ಅಧ್ಯಾಯಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗುವುದು ಮತ್ತು ಬಳಕೆಯಲ್ಲಿಲ್ಲದ ನಿಬಂಧನೆಗಳನ್ನು ಅಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ನಿರ್ಮಲಾ ಸೀತಾರಾಮನ್ ತಮ್ಮ 2024 ಜುಲೈ ಬಜೆಟ್ ಭಾಷಣದಲ್ಲಿ, ಕಾಯಿದೆಯನ್ನು ಸಂಕ್ಷಿಪ್ತ, ಸ್ಪಷ್ಟ, ಓದಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ಮಾಡುವುದು ಪರಿಶೀಲನೆಯ ಉದ್ದೇಶ ಎಂದು ಹೇಳಿದ್ದರು. “ಈ ಪರಿಶೀಲನೆಯು ವಿವಾದಗಳು ಮತ್ತು ಮೊಕದ್ದಮೆಗಳನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ತೆರಿಗೆದಾರರಿಗೆ ತೆರಿಗೆ ಖಚಿತತೆಯನ್ನು ಒದಗಿಸುತ್ತದೆ. ಜೊತೆಗೆ, ಇದನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ” ಎಂದು ಅವರು ಹೇಳಿದ್ದರು.
ಇದನ್ನೂಓದಿ: ‘ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ’ : ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ತಾಕೀತು
‘ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ’ : ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ತಾಕೀತು


