ತನ್ನ ಪ್ರಣಯ ಸಂಬಂಧವನ್ನು ತಪ್ಪಿಸಲು ಪ್ರಿಯತಮಗೆ ವಿಷಪ್ರಾಶನ ಮಾಡಿ ಕೊಲೆಗೈದಿದ್ದ ಯುವತಿಗೆ ಕೇರಳದ ನೆಯ್ಯತ್ತಿಂಕರ ಸೆಷನ್ಸ್ ಕೋರ್ಟ್ ಮರಣದಂಡನೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಗ್ರೀಷ್ಮಾ ಮರಣದಂಡನೆಗೆ ಗುರಿಯಾದ ಅಪರಾಧಿ. ಈಕೆ ತನ್ನ ಪ್ರಿಯತಮ ಶರೋನ್ ರಾಜ್‌ಗೆ ವಿಷಪ್ರಾಶನ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ದೋಷಿ ಎಂದು ಕಳೆದ ವಾರ ಕೋರ್ಟ್ ಘೋಷಣೆ ಮಾಡಿತ್ತು.
ಮರಣದಂಡನೆಯ ಜೊತೆಗೆ ಗ್ರೀಷ್ಮಾಗೆ ಅಪಹರಣ/ ಕೊಲೆ ಮಾಡಲು ಅಪಹರಿಸಿದ ಅಪರಾಧಕ್ಕಾಗಿ (ಐಪಿಸಿ ಸೆಕ್ಷನ್ 364) 10 ವರ್ಷಗಳ ಜೈಲು ಶಿಕ್ಷೆ ಮತ್ತು ಐಪಿಸಿ ಸೆಕ್ಷನ್ 201 ರ ಅಡಿಯಲ್ಲಿ ಅಪರಾಧಕ್ಕಾಗಿ 5 ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ.
ಗ್ರೀಷ್ಮಾಳ ಮಾವ ನಿರ್ಮಲಕುಮಾರನ್ ನಾಯರ್ ಅವರನ್ನು ಐಪಿಸಿ ಸೆಕ್ಷನ್ 201ರ ಅಡಿಯಲ್ಲಿ ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದ್ದು, ಅವರಿಗೆ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಗ್ರೀಷ್ಮಾಳ ತಾಯಿ ಸಿಂಧುಕುಮಾರಿ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಗ್ರೀಷ್ಮಾ ತನ್ನ ಪ್ರಿಯಕರ ಶರೋನ್‌ನನ್ನು ತನ್ನ ಮನೆಗೆ ಆಹ್ವಾನಿಸಿ ವಿಷ ಬೆರೆಸಿದ ಆಯುರ್ವೇದಿಕ್ ಮಿಶ್ರಣವನ್ನು ನೀಡಿದ್ದಳು. ಆಕೆಯ ತಾಯಿ ಮತ್ತು ಚಿಕ್ಕಪ್ಪ ವಿಷದ ಬಾಟಲಿಯನ್ನು ಮರೆಮಾಚಿ ಸಾಕ್ಷ್ಯವನ್ನು ನಾಶಪಡಿಸಿದ್ದಾರೆ ಎಂಬ ಆರೋಪಿಸಲಾಗಿತ್ತು.
ಐಪಿಸಿ ಸೆಕ್ಷನ್ 364 (ಅಪಹರಣ ಅಥವಾ ಅಪಹರಣ ಮಾಡಿ ಕೊಲೆ), 328 (ವಿಷ ನೀಡಿ ಜೀವ ಹಾನಿ), 302 (ಕೊಲೆಗೆ ಶಿಕ್ಷೆ), 201 (ಸಾಕ್ಷ್ಯ ನಾಶಪಡಿಸುವುದು ಮತ್ತು ಸುಳ್ಳು ಸಾಕ್ಷ್ಯ ನೀಡುವುದು) ಅಡಿಯಲ್ಲಿ ಗ್ರೀಷ್ಮಾ ತಪ್ಪಿತಸ್ಥರೆಂದು ಸಾಬೀತಾಗಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಕೇರಳ | ನಿರ್ಣಾಯಕ ಅವಿಶ್ವಾಸ ಗೊತ್ತುವಳಿಗೂ ಮುನ್ನ ಸಿಪಿಐ(ಎಂ) ಕೌನ್ಸಿಲರ್ ಅಪಹರಣ!


