ಮಧುರೈನ ಉಸಿಲಂಪಟ್ಟಿ ಬಳಿ ದಲಿತ ಯುವಕನಿಗೆ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಬಂಧಿಸಲಾಗಿದೆ.
ಸಂಗಂಪಟ್ಟಿ ಗ್ರಾಮದ 17 ವರ್ಷದ ದಲಿತ ಯುವಕನನ್ನು ಪೊಂಗಲ್ ಹಬ್ಬದ ಸಂದರ್ಭದಲ್ಲಿ ಒಂದು ಗ್ಯಾಂಗ್ ಥಳಿಸಿದೆ ಎಂದು ಆರೋಪಿಸಲಾಗಿದೆ.
ಗ್ಯಾಂಗ್‌ನಲ್ಲಿದ್ದ ಕೆಲವರು ತನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ ನಂತರ ಗ್ಯಾಂಗ್ ತನ್ನನ್ನು ಚಿತ್ರಹಿಂಸೆ ನೀಡಿದೆ ಮತ್ತು ಅವಮಾನಿಸಿದೆ ಎಂದು ಸಂತ್ರಸ್ತ ಹೇಳಿಕೊಂಡಿದ್ದಾನೆ.
ಮಧುರೈ ಪೊಲೀಸ್ ವರಿಷ್ಠಾಧಿಕಾರಿ ಬಿ.ಕೆ. ಅರವಿಂದ್ ಅಂತಹ ಆರೋಪಗಳನ್ನು ನಿರಾಕರಿಸಿ, ದಲಿತ ಯುವಕನನ್ನು ಅವಮಾನಿಸಲಾಗಿಲ್ಲ ಎಂದು ಹೇಳಿದರು.
ಆದರೆ, ಯುವಕನ ಮೇಲೆ ಹಲ್ಲೆ ನಡೆಸಿದ್ದರಿಂದ, ಜನವರಿ 18 ರಂದು ಉಸಿಲಂಪಟ್ಟಿ ಪಟ್ಟಣ ಪೊಲೀಸರು ಆರು ಜನರ ವಿರುದ್ಧ ಸೆಕ್ಷನ್ 296 (ಬಿ), 351 (2), ಬಿಎನ್‌ಎಸ್ ಆರ್/ಡಬ್ಲ್ಯೂ 3 (1) (ಆರ್) 3 (1) (ಎಸ್) ಮತ್ತು ಎಸ್‌ಸಿ/ಎಸ್‌ಟಿ ಪಿಒಎ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ; ಬಿಜೆಪಿಯ ದಲಿತ ವಿರೋಧಿ ಜನರಿಂದ ಈವರೆಗೂ ನನಗೆ ನ್ಯಾಯ ದೊರಕಿಲ್ಲ: ರಾಧಿಕಾ ವೇಮುಲ


