ದರ ವ್ಯತ್ಯಾಸ ಆರೋಪಕ್ಕೆ ಸಂಬಂಧಿಸಿದಂತೆ ಆ್ಯಪ್ ಆಧಾರಿತ ಕ್ಯಾಬ್ ಸೇವೆ ಒದಗಿಸುತ್ತಿರುವ ಓಲಾ ಮತ್ತು ಊಬರ್ ಕಂಪನಿಗಳಿಗೆ ಕೇಂದ್ರ ಗ್ರಾಹಕರ ಹಿತರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೋಟಿಸ್ ನೀಡಿದೆ.
ಆ್ಯಪ್ ಬಳಕೆದಾರರು ಐಫೋನ್‌ನಲ್ಲಿ ಬುಕ್ಕಿಂಗ್ ಮಾಡುತ್ತಿದ್ದಾರೆಯೇ ಅಥವಾ ಆಂಡ್ರಾಯ್ಡ್ ಫೋನ್‌ನಲ್ಲಿ ಬುಕ್ಕಿಂಗ್ ಮಾಡುತ್ತಿದ್ದಾರೆಯೇ ಎಂಬ ಆಧಾರದ ಮೇಲೆ ಕಂಪನಿಗಳು ಒಂದೇ ಸ್ಥಳಕ್ಕೆ ವಿಭಿನ್ನ ದರ ನಿಗದಿಪಡಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
So Ola and Uber prices are different on iPhones and Android Phones. Same story with quick commerce and food delivery apps. Apparently, Android users often get more discounts because they’re seen as deal-hunters, while iPhone users are labelled as “rich” and less price-sensitive,… pic.twitter.com/JhcpbHrwZz
— Itu Rathore (@iturathore) December 26, 2024
Debunking the #ios vs #Android debate for app pricing on @Uber_India – same source, same destination and most important, using SAME account on both devices. No difference at all!!#AppPricing #Uber @ramsundaramTOI pic.twitter.com/wr0RgcdD7M
— Somil Agrawal (@somilagrawal) December 26, 2024
ದರ ವ್ಯತ್ಯಾಸದ ಮೂಲಕ ಕಂಪನಿಗಳು ಗ್ರಾಹಕರ ಹಕ್ಕುಗಳಿಗೆ ವಂಚಿಸುತ್ತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಆರೋಪಗಳನ್ನು ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಪಿಎ ವಿಚಾರಣೆ ಕೈಗೆತ್ತಿಕೊಂಡಿದ್ದು, ಎರಡು ಕಂಪನಿಗಳಿಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
ದರ ವ್ಯತ್ಯಾಸದ ಆರೋಪಗಳ ಸಂಬಂಧ ಗ್ರಾಹಕ ವ್ಯವಹಾರಗಳ ಇಲಾಖೆಯು ಸಿಸಿಪಿಎ ಮೂಲಕ ಓಲಾ ಮತ್ತು ಊಬರ್ ಕಂಪನಿಗಳಿಗೆ ನೋಟಿಸ್ ನೀಡಿ ಪ್ರತಿಕ್ರಿಯೆ ಕೇಳಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತಿಳಿಸಿದ್ದಾರೆ.
As a follow-up to the earlier observation of apparent #DifferentialPricing based on the different models of mobiles (#iPhones/ #Android) being used, Department of Consumer Affairs through the CCPA, has issued notices to major cab aggregators #Ola and #Uber, seeking their…
— Pralhad Joshi (@JoshiPralhad) January 23, 2025
ಸ್ವಿಗ್ಗಿ, ಝೊಮ್ಯಾಟೋ ವಿರುದ್ದ ಸಿಸಿಐ ಮೊರೆ
ಸ್ವಿಗ್ಗಿ ಮತ್ತು ಝೊಮ್ಯಾಟೋ ಕಂಪನಿಯು ಖಾಸಗಿ ಲೇಬಲ್ ಬಳಕೆ ಮೂಲಕ ನ್ಯಾಯಸಮ್ಮತವಲ್ಲದ ವ್ಯಾಪಾರದಲ್ಲಿ ತೊಡಗಿವೆ ಎಂದು ಭಾರತೀಯ ರಾಷ್ಟ್ರೀಯ ರೆಸ್ಟೋರೆಂಟ್ ಸಂಘ (ಎನ್‌ಆರ್‌ಎಐ) ಆರೋಪಿಸಿದೆ. ಈ ಕುರಿತು ಭಾರತೀಯ ಸ್ಪರ್ಧಾತ್ಕ ಆಯೋಗಕ್ಕೆ(ಸಿಸಿಐ) ದೂರು ಸಲ್ಲಿಸಲು ಮುಂದಾಗಿದೆ.
ಆನ್‌ಲೈನ್‌ನಲ್ಲಿ ಆಹಾರ ವಿತರಿಸುವ ಈ ಕಂಪನಿಗಳು ತಮ್ಮ ಪಾಲುದಾರ ರೆಸ್ಟೋರೆಂಟ್‌ಗಳಿಂದ ದತ್ತಾಂಶ ಸಂಗ್ರಹಿಸುತ್ತವೆ. ನಮ್ಮ ಗ್ರಾಹಕರು ಯಾರೆಂದು ಅವುಗಳಿಗೆ ಸ್ಪಷ್ಟವಾದ ಅರಿವಿದೆ. ಆದರೆ, ಈ ಮಾಹಿತಿ ಹಂಚಿಕೊಳ್ಳಲು ನಿರಾಕರಿಸುತ್ತಿವೆ. ಇದೇ ರೀತಿಯ ಉತ್ಪನ್ನಗಳನ್ನು ತಯಾರಿಸಿ ಖಾಸಗಿ ಲೇಬಲ್ ಅಂಟಿಸುವ ಮೂಲಕ ಮಾರಾಟ ಮಾಡುವ ಸಾಧ್ಯತೆಯಿದೆ. ಇದರಿಂದ ರೆಸ್ಟೋರೆಂಟ್ ವಲಯವು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಸಂಘದ ಅಧ್ಯಕ್ಷ ಸಾಗರ್ ದರಿಯಾನಿ ಆತಂಕ ವ್ಯಕ್ತಪಡಿಸಿದ್ದಾರೆ.
ಝೆಪ್ಟೋ ವಿರುದ್ದ ದರ ವ್ಯತ್ಯಾಸ ಆರೋಪ
ಓಲಾ, ಊಬರ್‌ಗಳಂತೆ ಆಹಾರ ಸಾಮಾಗ್ರಿಗಳ ವಿತರಣ ಆ್ಯಪ್ ಝೆಪ್ಟೋ ಕೂಡ ಒಂದೇ ವಸ್ತುವಿಗೆ ಐಫೋನ್, ಆಂಡ್ರಾಯ್ಡ್ ಗ್ರಾಹಕರಿಗೆ ಬೇರೆ ಬೇರೆ ದರಗಳನ್ನು ನಿಗದಿ ಮಾಡಿ ಮೋಸ ಮಾಡುತ್ತಿವೆ ಎಂದು ಬೆಂಗಳೂರು ಮೂಲದ ಮಹಿಳೆಯೊಬ್ಬರು ಇತ್ತೀಚೇಗೆ ವಿಡಿಯೋ ಮೂಲಕ ಆರೋಪಿಸಿದ್ದರು.
#Bengaluru woman exposes pricing disparity on #Zepto: Grapes priced at ₹65 on Android, ₹146 on iPhone. Alleged bias sparks online debate.#DNAVideos | #iphone | #Android | #Viral | #viralvideo | #latest | #viralvideostoday | #latestvideos pic.twitter.com/8S8ILa5taC
— DNA (@dna) January 13, 2025
ಬಿರಿಯಾನಿ ವಿವಾದ: ಪೊಲೀಸರೊಂದಿಗೆ ನವಾಸ್ ಕಾನಿ ಮಾತನಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿದ ಅಣ್ಣಾಮಲೈ


