ಈ ವರ್ಷ ಫೆಬ್ರವರಿ 6 ರಂದು ವಿವಾಹವಾಗಲಿರುವ ಗುಜರಾತ್‌ನ ಬನಸ್ಕಂತ ಜಿಲ್ಲೆಯ ಹಳ್ಳಿಯ ವಕೀಲರೊಬ್ಬರು ಕುದುರೆಯ ಮೇಲೆ ತಮ್ಮ ಮದುವೆ ಮೆರವಣಿಗೆ ನಡೆಸಲು ಪೊಲೀಸ್ ರಕ್ಷಣೆ ಕೋರಿದ್ದಾರೆ.
ಬನಸ್ಕಂತ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುಖೇಶ್ ಪರೇಚಾ ಪತ್ರ ಬರೆದು, ತಮ್ಮ ಮದುವೆ ದಿಬ್ಬಣಕ್ಕೆ ಪೊಲೀಸ್ ರಕ್ಷಣೆ ನೀಡದಿದ್ದರೆ ಮೆರವಣಿಗೆಯ ಸಮಯದಲ್ಲಿ ಅಹಿತಕರ ಘಟನೆ ನಡೆಯುವ ಸಾಧ್ಯತೆಯಿದೆ ಎಂದು ಒತ್ತಿ ಹೇಳಿದ್ದಾರೆ.
“ನಮ್ಮ ಗ್ರಾಮದಲ್ಲಿ, ಪರಿಶಿಷ್ಟ ಜಾತಿಯ ಜನರು ಎಂದಿಗೂ ವರ್ಗೋಡೋ (ವರನು ಕುದುರೆ ಸವಾರಿ ಮಾಡುವ ಮದುವೆ ಮೆರವಣಿಗೆ) ನಡೆಸಿಲ್ಲ. ವರ್ಗೋಡೋ ನಡೆಸುವ ಮೊದಲಿಗ ನಾನೇ. ಇದರಿಂದ ಅಹಿತಕರ ಘಟನೆಯ ಎಲ್ಲಾ ಸಾಧ್ಯತೆಗಳಿವೆ. ಆದ್ದರಿಂದ, ನಮಗೆ ಪೊಲೀಸ್ ರಕ್ಷಣೆ ನೀಡುವಂತೆ ವಿನಂತಿಸಲಾಗಿದೆ” ಎಂದು ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಅರ್ಜಿಯಲ್ಲಿ, ನೆರೆಯ ಗ್ರಾಮಗಳಾದ ಸರೆಪಾದ ಮತ್ತು ಮೋಟಾದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಜನರ ಮದುವೆ ಮೆರವಣಿಗೆಗಳಿಗೆ ಸಂಬಂಧಿಸಿದಂತೆ “ದಾಳಿಗಳು” ನಡೆದಿವೆ ಎಂದು ಹೇಳಲಾದ ಎರಡು ಪ್ರಕರಣಗಳನ್ನು ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ; ಬೆಳಗಾವಿ| ಗ್ರಾಮ ತೊರೆಯುವಂತೆ ದಲಿತ ವ್ಯಕ್ತಿ ಕುಟುಂಬಕ್ಕೆ ಒತ್ತಡ ಹಾಕಿದ ಸವರ್ಣೀಯರು


