ದೆಹಲಿಯ ರಿಥಾಲಾ ವಿಧಾನಸಭಾ ಕ್ಷೇತ್ರದ ತನ್ನ ಅಭ್ಯರ್ಥಿ ಸುಶಾಂತ್ ಮಿಶ್ರಾ ಅವರ ಮೇಲೆ ಶನಿವಾರ ಸಂಜೆ ಚುನಾವಣಾ ಆಯೋಗ ನೇಮಿಸಿದ ಅಧಿಕಾರಿಯೊಬ್ಬರು ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ. ಆದಾಗ್ಯೂ, ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಆರೋಪವನ್ನು ನಿರಾಕರಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ದೆಹಲಿ ಚುನಾವಣೆ
ಇದು ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಯ ಅಧಿಕಾರಿಯ ಪಕ್ಷಪಾತದ ವರ್ತನೆಯ ಪ್ರಕರಣವಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ದೆಹಲಿ ವಿಧಾನಸಭಾ ಚುನಾವಣೆ ಫೆಬ್ರವರಿ 5 ರಂದು ನಿಗದಿಯಾಗಿದ್ದು, ಮತಗಳ ಎಣಿಕೆ ಫೆಬ್ರವರಿ 8 ರಂದು ನಡೆಯಲಿದೆ. ದೆಹಲಿ ಚುನಾವಣೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಪಕ್ಷದ ನಾಯಕ ಜೈರಾಮ್ ರಮೇಶ್ “ಸುಶಾಂತ್ ಮಿಶ್ರಾ ಅವರು ಪಾದಯಾತ್ರೆ ನಡೆಸುವುದನ್ನು ತಡೆಯಲು ಅಧಿಕಾರಿ ಪ್ರಯತ್ನಿಸಿದರು, ಇದಕ್ಕಾಗಿ ದೆಹಲಿ ಪೊಲೀಸರು ಈಗಾಗಲೇ ಅನುಮತಿ ನೀಡಿದ್ದರು. ಅವರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಇತರ ಅಭ್ಯರ್ಥಿಗಳಿಂದ ನೀತಿ ಸಂಹಿತೆಯ ಉಲ್ಲಂಘನೆಯ ಪ್ರಕರಣಗಳ ಬಗ್ಗೆ ಸಕ್ರಿಯವಾಗಿ ಧ್ವನಿ ಎತ್ತುತ್ತಿದ್ದಾರೆ” ಎಂದು ಹೇಳಿದ್ದಾರೆ.
ಸುಶಾಂತ್ ಅವರ ಉಮೇದುವಾರಿಕೆ ಮತ್ತು ಬೆಳೆಯುತ್ತಿರುವ ಬೆಂಬಲವನ್ನು ತಡೆಯಲು ಆಮ್ ಆದ್ಮಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷವು ನಡೆಸಿದ ಹತಾಶ ಪ್ರಯತ್ನ ಇದಾಗಿದೆ ಎಂದು ಆಪಾದಿತ ದಾಳಿಯ ಬಗ್ಗೆ ಜೈರಾಮ್ ರಮೇಶ್ ಅವರು ಕರೆದಿದ್ದಾರೆ.
“ಚುನಾವಣಾ ಪ್ರಕ್ರಿಯೆಯ ಸಮಗ್ರತೆ ಮತ್ತು ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು, ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಮತ್ತು ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ತಕ್ಷಣದ ಸರಿಪಡಿಸುವ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒತ್ತಾಯಿಸುತ್ತದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಆದಾಗ್ಯೂ, ಜಿಲ್ಲಾ ಚುನಾವಣಾ ಅಧಿಕಾರಿಯೊಬ್ಬರು ಸಂಜೆ 5 ಗಂಟೆ ಸುಮಾರಿಗೆ ದೂರು ಸ್ವೀಕರಿಸಿದ್ದು, ಇದರ ನಂತರ ರಿಥಾಲಾಗೆ ಕಣ್ಗಾವಲು ತಂಡ(flying surveillance team) ಆಗಮಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. “ಅದೇ ಸಮಯದಲ್ಲಿ, ಬುದ್ಧ ವಿಹಾರ್ ಹಂತ -2 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಚಾರವೂ ನಡೆಯುತ್ತಿತ್ತು” ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಎಫ್‌ಎಸ್‌ಟಿ ಮುಖ್ಯಸ್ಥರು ಅನುಮತಿಯ ಪ್ರತಿಯನ್ನು ಪ್ರದರ್ಶಿಸಲು ಸಂಘಟಕರನ್ನು ವಿನಂತಿಸಿದರು. ಪಕ್ಷದ ಪ್ರಚಾರಕರು ಅನುಮತಿಯ ಪ್ರತಿಯನ್ನು ಪ್ರದರ್ಶಿಸಲಿಲ್ಲ. ಹಾಗಾಗಿ ತಂಡವು ಸಂಘಟಕರನ್ನು ಚದುರಿ ಹೋಗುವಂತೆ ವಿನಂತಿಸಿತು. ಎಫ್‌ಎಸ್‌ಟಿ ತಂಡದ ಸದಸ್ಯರು ಪ್ರಚಾರ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಅನುಚಿತ ವರ್ತನೆ ತೋರಿದ್ದಾರೆ ಎಂಬ ಆರೋಪಗಳಲ್ಲಿ ಹುರುಳಿಲ್ಲ, ಅವರ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಲಾಗಿದೆ” ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂಓದಿ: ಕದನ ವಿರಾಮ ಉಲ್ಲಂಘನೆ | ಪ್ಯಾಲೆಸ್ತೀನಿಯರನ್ನು ಉತ್ತರ ಗಾಜಾಗೆ ಮರಳುವುದನ್ನು ನಿರ್ಬಂಧಿಸಿದ ಇಸ್ರೇಲ್
ಕದನ ವಿರಾಮ ಉಲ್ಲಂಘನೆ | ಪ್ಯಾಲೆಸ್ತೀನಿಯರನ್ನು ಉತ್ತರ ಗಾಜಾಗೆ ಮರಳುವುದನ್ನು ನಿರ್ಬಂಧಿಸಿದ ಇಸ್ರೇಲ್


