ಮದುವೆಗೆ ಅಸಮ್ಮತಿ ವ್ಯಕ್ತಪಡಿಸುವುದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 306 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ದ್ವಿಸದಸ್ಯ ಪೀಠವು ಈ ತೀರ್ಪು ನೀಡದೆ. ಮದುವೆಗೆ ಅಸಮ್ಮತಿ
ತನ್ನ ಮಗನನ್ನು ಪ್ರೀತಿಸುತ್ತಿದ್ದ ಯುವತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊತ್ತ ಮಹಿಳೆಯ ವಿರುದ್ಧದ ಆರೋಪಪಟ್ಟಿಯನ್ನು ರದ್ದುಗೊಳಿಸುವಾಗ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಆರೋಪಪಟ್ಟಿ ಮತ್ತು ಸಾಕ್ಷಿಗಳ ಹೇಳಿಕೆಗಳು ಸೇರಿದಂತೆ ದಾಖಲೆಯಲ್ಲಿರುವ ಎಲ್ಲಾ ಪುರಾವೆಗಳು ಸರಿಯಾಗಿದ್ದರೂ ಸಹ, ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಿದವರ (ಆರೋಪಿ) ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದೆ. ಮದುವೆಗೆ ಅಸಮ್ಮತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಮೇಲ್ಮನವಿ ಸಲ್ಲಿಸಿದವರ ಕೃತ್ಯಗಳು ಐಪಿಸಿಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಅಪರಾಧವನ್ನು ರೂಪಿಸಲು ಸಾಧ್ಯವಿಲ್ಲ. ಈ ಸಾವು ಪರೋಕ್ಷವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಮೃತ ವ್ಯಕ್ತಿಗೆ ಆತ್ಮಹತ್ಯೆಯಂತಹ ದುರದೃಷ್ಟಕರ ಕೃತ್ಯವನ್ನು ಮಾಡುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ ಎಂಬುವುದು ಸರಿಯಲ್ಲ” ಎಂದು ಪೀಠವು ಹೇಳಿದೆ.
ಈ ಆರೋಪಗಳು ಮೃತ ಯುವತಿ ಮತ್ತು ಮೇಲ್ಮನವಿ ಸಲ್ಲಿಸಿದ ವ್ಯಕ್ತಿಯ ಮಗನ ನಡುವಿನ ವಿವಾದಗಳನ್ನು ಆಧರಿಸಿವೆ. ಆದರೆ ಮಹಿಳೆಯು ತನ್ನ ಮಗ ಈ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದರು. ಮೇಲ್ಮನವಿ ಸಲ್ಲಿಸಿದವರ ಮೇಲೆ ಮದುವೆಯನ್ನು ವಿರೋಧಿಸಿದ ಮತ್ತು ಮೃತರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪ ಹೊರಿಸಲಾಗಿತ್ತು.
ಮೃತ ಯುವತಿಯು ತಮ್ಮ ಪ್ರಿಯಕರನನ್ನು ಮದುವೆಯಾಗದೆ ಬದುಕಿರಲು ಸಾಧ್ಯವಾಗುವುದಿಲ್ಲ ಎಂಬ ಹೇಳಿಕೆಯು ಸರಿಯಲ್ಲ. ಅಷ್ಟಕ್ಕೆ ಅವರ ಆತ್ಮಹತ್ಯೆಗೆ ಪ್ರಿಯಕರ ತಾಯಿ ಕಾರಣವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
ಇದನ್ನೂಓದಿ: ಸಂವಿಧಾನದ ಮೇಲಿನ ದಾಳಿ | ಯುಜಿಸಿ ಕರಡು ನಿಯಮ ಹಿಂಪಡೆಯಲು ತೆಲಂಗಾಣ ಸಿಎಂ ಆಗ್ರಹ
ಸಂವಿಧಾನದ ಮೇಲಿನ ದಾಳಿ | ಯುಜಿಸಿ ಕರಡು ನಿಯಮ ಹಿಂಪಡೆಯಲು ತೆಲಂಗಾಣ ಸಿಎಂ ಆಗ್ರಹ


