ಉತ್ತರಾಖಂಡದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 11 ಮಹಾನಗರ ಪಾಲಿಕೆಗಳ ಪೈಕಿ 10 ರಲ್ಲಿ ಬಿಜೆಪಿ ಜಯಗಳಿಸುವ ಮೂಲಕ ಪಾರಮ್ಯ ಮೆರೆದಿದೆ. “ತ್ರಿವಳಿ ಎಂಜಿನ್ ಸರ್ಕಾರದ ವಿಧಾನದೊಂದಿಗೆ ಅಭಿವೃದ್ಧಿಯನ್ನು ವೇಗಗೊಳಿಸುತ್ತೇವೆ” ಎಂಬ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ತಂತ್ರವು ಮತದಾರರನ್ನು ಸೆಳೆಯುವಲ್ಲಿ ಪರಿಣಾಮಕಾರಿ ಯಶಸ್ವಿಯಾಗಿದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಉತ್ತರಾಖಂಡ
ಡೆಹ್ರಾಡೂನ್ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸತತ ನಾಲ್ಕನೇ ಬಾರಿಗೆ ಮೇಯರ್ ಸ್ಥಾನವನ್ನು ಉಳಿಸಿಕೊಂಡಿದೆ. ಆದಾಗ್ಯೂ, ಮೂರು ಕ್ಯಾಬಿನೆಟ್ ಮಂತ್ರಿಗಳು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಪಕ್ಷವು ಹಿನ್ನಡೆಯನ್ನು ಎದುರಿಸಿದೆ ಎಂದು ವರದಿಯಾಗಿದೆ. ಚುನಾವಣಾ ಫಲಿತಾಂಶಗಳು ನೀರಾವರಿ ಸಚಿವ ಮಹಾರಾಜ್ ಮತ್ತು ಅರಣ್ಯ ಸಚಿವ ಉನಿಯಾಲ್‌ಗೆ ಹೊಡೆತ ನೀಡಿವೆ. ಮಹಾರಾಜ್ ಅವರ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಸತ್ಪುಲಿ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷವೂ ಬಿಜೆಪಿಯನ್ನು ಸೋಲಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಚಿವ ಉನಿಯಾಲ್ ಅವರ ನರೇಂದ್ರ ನಗರ ಕ್ಷೇತ್ರದಲ್ಲಿ, ಪಕ್ಷೇತರ ಅಭ್ಯರ್ಥಿ ನಿರ್ಮಲಾ ಬಿಜಲ್ವಾನ್ ಬಿಜೆಪಿ ಅಭ್ಯರ್ಥಿಯನ್ನು 6,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದು, ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ಬಿಜಲ್ವಾನ್ 9,296 ಮತಗಳನ್ನು ಗಳಿಸಿದರೆ, ಬಿಜೆಪಿ ಅಭ್ಯರ್ಥಿ ಬೀನಾ ಜೋಶಿ ಕೇವಲ 3,245 ಮತಗಳನ್ನು ಗಳಿಸಿದರು. ಉತ್ತರಾಖಂಡ
ಏತನ್ಮಧ್ಯೆ, ರಾಜ್ಯದ ಬೇಸಿಗೆ ರಾಜಧಾನಿ ಗೈರ್‌ಸೈನ್ ಮತ್ತು ಚಾರ್ ಧಾಮ್ ಪ್ರದೇಶಕ್ಕೆ ಸಂಬಂಧಿಸಿದ ಹಲವಾರು ಮುನ್ಸಿಪಾಲಿಟಿಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಗಮನಾರ್ಹ ಮುನ್ನಡೆ ಸಾಧಿಸಿದೆ. ಇಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ.
ಕಾರ್ಪೋರೇಷನ್ ಚುನಾವಣೆಯಲ್ಲಿ ನಿರಾಶೆಯನ್ನು ಎದುರಿಸುತ್ತಿದ್ದರೂ, ಗೈರ್‌ಸೈನ್‌ನಲ್ಲಿ ಕಾಂಗ್ರೆಸ್ ವಿಜಯಶಾಲಿಯಾಗಿದೆ. ಗೈರ್‌ಸೈನ್ ನಗರ ಪಂಚಾಯತ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದೆ. ಅಗಸ್ತ್ಯಮುನಿ, ಸ್ವರ್ಣಶ್ರಮ ಜೋಂಕ್, ಸತ್ಪುಲಿ, ಥಲಿಸೈನ್, ಝಬ್ರೆಡಾ, ಭಗವಾನ್‌ಪುರ, ಥರಾಲಿ, ನಂದನ್‌ಗಢ ಘಾಟ್, ಗರುಡ್, ದ್ವಾರಹತ್ ಮತ್ತು ಭಿಕಿಯಾಸೈನ್ ಸೇರಿದಂತೆ ಇತರ ಪುರಸಭೆಗಳಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಬದರಿನಾಥದ ಕಾಂಗ್ರೆಸ್ ಶಾಸಕ ಲಖ್‌ಪತ್ ಬುಟೋಲಾ, “ಈ ಗೆಲುವು ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರ ಅಗತ್ಯಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂಓದಿ: ಶ್ರೀಲಂಕಾ ನೌಕಾಪಡೆಯಿಂದ 34 ಭಾರತೀಯ ಮೀನುಗಾರರ ಬಂಧನ; ತಕ್ಷಣ ಬಿಡುಗಡೆಗೆ ಸಿಎಂ ಸ್ಟಾಲಿನ್ ಆಗ್ರಹ
ಶ್ರೀಲಂಕಾ ನೌಕಾಪಡೆಯಿಂದ 34 ಭಾರತೀಯ ಮೀನುಗಾರರ ಬಂಧನ; ತಕ್ಷಣ ಬಿಡುಗಡೆಗೆ ಸಿಎಂ ಸ್ಟಾಲಿನ್ ಆಗ್ರಹ


