ಅಮೆರಿಕದಿಂದ ಗಡೀಪಾರು ಮಾಡಲಾದ ಹಲವಾರು ವಲಸಿಗರನ್ನು ಹೊತ್ತ ವಿಮಾನವು ಶನಿವಾರ ಬ್ರೆಸಿಲ್‌ನ ಉತ್ತರ ನಗರವಾದ ಮನೌಸ್‌ನಲ್ಲಿ ಇಳಿದಿದೆ. ಈ ವೇಳೆ ಪ್ರಯಾಣಿಕರಿಗೆ ಕೈಕೋಳಗಳನ್ನು ಹಾಕಿ ಕಳುಹಿಸಲಾಗಿದ್ದು, ಈ ಬಗ್ಗೆ ಬ್ರೆಜಿಲ್ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಮೆರಿಕದ ಈ ನಡೆಯು ಮಾನವ ಹಕ್ಕುಗಳ “ಸ್ಪಷ್ಟ ನಿರ್ಲಕ್ಷ್ಯ” ಎಂದು ಕರೆದಿದೆ ಎಂದು ಎಎಫ್‌ಪಿ ವರದಿ ಮಾಡಿದೆ.
ಬ್ರೆಜಿಲ್ ವಿದೇಶಾಂಗ ಸಚಿವಾಲಯವು ಘಟನೆಯನ್ನು ಖಂಡಿಸಿದ್ದು, ಪ್ರಯಾಣಿಕರನ್ನು “ಅವಮಾನಕರವಾಗಿ ನಡೆಸಿಕೊಂಡಿರುವ” ಬಗ್ಗೆ ಅಮೆರಿಕದಿಂದ ವಿವರಣೆಯನ್ನು ಕೋರುವುದಾಗಿ ಹೇಳಿದೆ. ವಿಮಾನ ಬಂದ ನಂತರ ಬ್ರೆಜಿಲ್‌ನ ನ್ಯಾಯ ಸಚಿವಾಲಯವು ಅಮೆರಿಕದ ಅಧಿಕಾರಿಗಳಿಗೆ “ತಕ್ಷಣವೆ ಕೈಕೋಳವನ್ನು ತೆಗೆದುಹಾಕುವಂತೆ” ಆದೇಶಿಸಿದೆ. ವಲಸಿಗರನ್ನು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಲ್ಯಾಟಿನ್ ಅಮೇರಿಕನ್ ದೇಶಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ವಿರೋಧಿ ನಿಲುವನ್ನು ಎದುರಿಸುತ್ತಿವೆ. ಅದೇ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ನೂತನ ಅಧ್ಯಕ್ಷ ಟ್ರಂಪ್ ಅನಿಯಮಿತ ವಲಸೆ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದು, ದೊಡ್ಡ ಪ್ರಮಾಣದ ಗಡೀಪಾರುಗಳನ್ನು ಮಾಡುವುದಾಗಿ ಘೋಷಿಸಿದ್ದಾರೆ.
🇧🇷🇺🇸BRAZIL SLAMS HANDCUFFS ON DEPORTEES—TRUMP ADMIN UNMOVED
Brazil called the use of handcuffs on deportees "blatant disrespect," demanding their removal mid-flight during an unexpected landing in Manaus.
The Trump administration, now ramping up mass deportations, sees the… https://t.co/C1DdUEQCIB pic.twitter.com/N0jKCp7yHK
— Mario Nawfal (@MarioNawfal) January 26, 2025
ಶುಕ್ರವಾರ ರಾತ್ರಿ 88 ಬ್ರೆಜಿಲಿಯನ್ನರನ್ನು ಕರೆದೊಯ್ದ ವಿಮಾನದ ಬಗ್ಗೆ ದೇಶದ ನ್ಯಾಯ ಸಚಿವ ರಿಕಾರ್ಡೊ ಲೆವಾಂಡೋವ್ಸ್ಕಿ ಅವರು ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರೊಂದಿಗೆ ಮಾತನಾಡಿ, ಬ್ರೆಜಿಲಿಯನ್ ನಾಗರಿಕರ ಮೂಲಭೂತ ಹಕ್ಕುಗಳ ಬಗ್ಗೆ ಸ್ಪಷ್ಟವಾದ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದ್ದಾರೆ. ಬ್ರೆಜಿಲ್ ಅಧಿಕಾರಿಗಳು ಅಮೆರಿಕ ಸರ್ಕಾರದ ಈ ಅವಮಾನಕರ ನಡವಳಿಕೆಯನ್ನು ವಿವರಿಸಲು ತ್ವರಿತವಾಗಿ ಕರೆ ನೀಡಿದ್ದಾರೆ.
ಗಡಿಪಾರಾದ ಬ್ರೆಸಿಲ್ ಪ್ರಜೆ, ಕಳೆದ ಏಳು ತಿಂಗಳುಗಳನ್ನು ಬಂಧನದಲ್ಲಿ ಕಳೆದ 31 ವರ್ಷದ ಕಂಪ್ಯೂಟರ್ ತಂತ್ರಜ್ಞ ಎಡ್ಗರ್ ಡ ಸಿಲ್ವಾ ಮೌರಾ, “ವಿಮಾನದಲ್ಲಿ ಅವರು ನಮಗೆ ನೀರು ನೀಡಲಿಲ್ಲ. ನಮ್ಮ ಕೈಕಾಲುಗಳನ್ನು ಕಟ್ಟಲಾಗಿತ್ತು. ಅವರು ನಮ್ಮನ್ನು ಶೌಚಾಲಯಕ್ಕೂ ಹೋಗಲು ಬಿಡಲಿಲ್ಲ” ಎಂದು ಅನುಭವವನ್ನು ವಿವರಿಸಿದ್ದಾರೆ. ಜೊತೆಗೆ, ವಿಮಾನವು ತುಂಬಾ ಬಿಸಿಯಾಗಿತ್ತು, ಕೆಲವರು ಮೂರ್ಛೆ ಹೋದರು ಎಂದು ಅವರು ಹೇಳಿದ್ದಾರೆ.
21 ವರ್ಷದ ಫ್ರೀಲ್ಯಾನ್ಸರ್ ಲೂಯಿಸ್ ಆಂಟೋನಿಯೊ ರೊಡ್ರಿಗಸ್ ಸ್ಯಾಂಟೋಸ್, ತಾಂತ್ರಿಕ ಸಮಸ್ಯೆಯಿಂದಾಗಿ ಹವಾನಿಯಂತ್ರಣವಿಲ್ಲದೆ ನಾಲ್ಕು ಗಂಟೆಗಳ ಹಾರಾಟದ ಸಮಯದಲ್ಲಿ “ಉಸಿರಾಟದ ಸಮಸ್ಯೆಗಳಿಂದ” ಬಳಲುತ್ತಿರುವ ಸಹ ಪ್ರಯಾಣಿಕರ “ದುಃಸ್ವಪ್ನ”ವನ್ನು ವಿವರಿಸಿದ್ದಾರೆ. “ವಿಷಯಗಳು ಈಗಾಗಲೇ ಬದಲಾಗಿದ್ದು, ವಲಸಿಗರನ್ನು ಅಪರಾಧಿಗಳಂತೆ ಪರಿಗಣಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಮೂಲತಃ ಬೆಲೊಗೆ ಹೋಗುವ ವಿಮಾನ ಹಾರಿಜಾಂಟೆ, ತಾಂತ್ರಿಕ ಸಮಸ್ಯೆಯಿಂದಾಗಿ ಮನೌಸ್‌ನಲ್ಲಿ ಇಳಿಯಬೇಕಾಯಿತು. ಆದಾಗ್ಯೂ, ಗಡೀಪಾರಿಗೆ ಒಳಗಾದ ಜನರಿರುವ ವಿಮಾನವು ಟ್ರಂಪ್ ಅವರ ಇತ್ತೀಚಿನ ಯಾವುದೇ ವಲಸೆ ಆದೇಶಗಳಿಗೆ ನೇರವಾಗಿ ಸಂಬಂಧಿಸಿಲ್ಲ ಎಂದು ವರದಿಯಾಗಿದ್ದು, 2017 ರ ದ್ವಿಪಕ್ಷೀಯ ಒಪ್ಪಂದದ ಭಾಗ ಈ ಗಡಿಪಾರು ನಡೆಸಲಾಗಿದೆ ಎಂದು ಸರ್ಕಾರಿ ಮೂಲವೊಂದು ಸ್ಪಷ್ಟಪಡಿಸಿದೆ.
ಇದನ್ನೂಓದಿ: ಸಂವಿಧಾನದ ಮೇಲಿನ ದಾಳಿ | ಯುಜಿಸಿ ಕರಡು ನಿಯಮ ಹಿಂಪಡೆಯಲು ತೆಲಂಗಾಣ ಸಿಎಂ ಆಗ್ರಹ
ಸಂವಿಧಾನದ ಮೇಲಿನ ದಾಳಿ | ಯುಜಿಸಿ ಕರಡು ನಿಯಮ ಹಿಂಪಡೆಯಲು ತೆಲಂಗಾಣ ಸಿಎಂ ಆಗ್ರಹ


