ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದಲ್ಲಿ ಅವರ ಪುತ್ರ ಮಹಾರಾಷ್ಟ್ರದ ಮಾಜಿ ಶಾಸಕ ಜೀಶನ್ ಸಿದ್ದಿಕ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಕೆಲವು ಬಿಲ್ಡರ್‌ಗಳು ಮತ್ತು ರಾಜಕಾರಣಿಗಳನ್ನು ಹೆಸರಿಸಿದ್ದಾರೆ ಎಂದು ವರದಿಯಾಗಿದೆ. ತಮ್ಮ ತಂದೆಯ ಹತ್ಯೆಯ ತನಿಖೆಯ ಸಮಯದಲ್ಲಿ ಬಾಂದ್ರಾದಲ್ಲಿನ ಕೊಳೆಗೇರಿ ಅಭಿವೃದ್ಧಿ ಯೋಜನೆಗಳ ಸಮಸ್ಯೆಗಳನ್ನು ಪರಿಗಣಿಸುವಂತೆ ಅವರು ಒತ್ತಾಯಿಸಿದ್ದಾರೆ. ಬಾಬಾ ಸಿದ್ದೀಕಿ ಹತ್ಯೆ ತನಿಖೆ
ಸಂದರ್ಭವೊಂದರಲ್ಲಿ ಡೆವಲಪರ್ ಒಬ್ಬ ತನ್ನ ತಂದೆಯ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂದು ಜೀಶನ್ ಸಿದ್ದಿಕ್ ಪೊಲೀಸರಿಗೆ ತಿಳಿಸಿದ್ದಾರೆ. ಪುನರಾಭಿವೃದ್ಧಿ ಯೋಜನೆಗಳಿಗಾಗಿ ಅನೇಕ ಡೆವಲಪರ್‌ಗಳು ತಮ್ಮ ತಂದೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಇದೇ ವೇಳೆ ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಕ್ಟೋಬರ್ 12, 2024 ರಂದು ಮಾಜಿ ರಾಜ್ಯ ಸಚಿವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯ ಭಾಗವಾಗಿ ಅವರು ಈ ಹೇಳಿಕೆ ನೀಡಿದ್ದಾರೆ. ಬಾಬಾ ಸಿದ್ದಿಕಿ (66) ಅವರನ್ನು ಮುಂಬೈನ ಬಾಂದ್ರಾ ಪೂರ್ವ ಪ್ರದೇಶದಲ್ಲಿ ತಮ್ಮ ಮಗನ ಕಚೇರಿಯ ಹೊರಗೆ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೀಡಾಗಿದ್ದಾರೆ. ಬಾಬಾ ಸಿದ್ದೀಕಿ ಹತ್ಯೆ ತನಿಖೆ
ಮುಂಬೈನ ಬಾಂದ್ರಾ ಪ್ರದೇಶದ ಕೊಳೆಗೇರಿ ನಿವಾಸಿಗಳ ಹಕ್ಕುಗಳಿಗಾಗಿ ತಾನು ಮತ್ತು ತನ್ನ ತಂದೆ ನಿರಂತರವಾಗಿ ಹೋರಾಡುತ್ತಿದ್ದೇವೆ ಎಂದು ಜೀಶನ್ ಸಿದ್ದಿಕ್ ಪೊಲೀಸರಿಗೆ ತಿಳಿಸಿದ್ದು, ಪುನರಾಭಿವೃದ್ಧಿ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
“ನನ್ನ ತಂದೆಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದ ಅನೇಕ ಡೆವಲಪರ್‌ಗಳು ಇದ್ದಾರೆ. ನನ್ನ ತಂದೆಗೆ ಅವರ ದೈನಂದಿನ ಕೆಲಸದ ಬಗ್ಗೆ ಡೈರಿ ಬರೆಯುವ ಅಭ್ಯಾಸವಿತ್ತು. ಕೊಲೆಯಾದ ದಿನ ಸಂಜೆ 5.30 ರಿಂದ 6 ರ ಸುಮಾರಿಗೆ ಮೋಹಿತ್ ಕಾಂಬೋಜ್ (ಬಿಜೆಪಿ ಕಾರ್ಯಕರ್ತ) ನನ್ನ ತಂದೆಯನ್ನು ವಾಟ್ಸಾಪ್‌ನಲ್ಲಿ ಸಂಪರ್ಕಿಸಿದ್ದರು ಎಂದು ನನಗೆ ತಿಳಿದುಬಂದಿದೆ” ಎಂದು ಅವರು ಹೇಳಿದ್ದಾರೆ.
ಮುಂದ್ರಾ ಬಿಲ್ಡರ್ಸ್‌ನ ಬಾಂದ್ರಾದಲ್ಲಿನ ಯೋಜನೆಗೆ ಸಂಬಂಧಿಸಿದಂತೆ ಮೋಹಿತ್ ನನ್ನ ತಂದೆಯನ್ನು ಭೇಟಿಯಾಗಲು ಬಯಸಿದ್ದರು ಎಂದು ಜೀಶನ್ ಅವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಎಸ್‌ಆರ್‌ಎ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳೊಂದಿಗೆ ನಡೆದ ಸಭೆಯ ಸಮಯದಲ್ಲಿ ಬಿಲ್ಡರ್ ಒಬ್ಬರು ನನ್ನ ತಂದೆಯ ಬಗ್ಗೆ ನಿಂದನೀಯ ಪದಗಳನ್ನು ಬಳಸಿದ್ದಾರೆ. ನನ್ನ ತಂದೆಯ ಕೊಲೆಯ ತನಿಖೆಯಲ್ಲಿ ಮೇಲೆ ತಿಳಿಸಲಾದ ಎಲ್ಲಾ ವಿಷಯಗಳನ್ನು ವಿವರವಾಗಿ ತನಿಖೆ ಮಾಡಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಜೀಸರ್ ಸಿದ್ದೀಕಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಶೇಷ ಎಂಸಿಒಸಿಎ ನ್ಯಾಯಾಲಯಕ್ಕೆ 4,500 ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಬಂಧಿತ 26 ಆರೋಪಿಗಳ ವಿರುದ್ಧ ದಾಖಲಾಗಿದ್ದು, ಶುಭಂ ಲೋಂಕರ್, ಯಾಸಿನ್ ಅಖ್ತರ್ ಮತ್ತು ಅನ್ಮೋಲ್ ಬಿಷ್ಣೋಯ್ ಎಂಬ ಮೂವರು ವ್ಯಕ್ತಿಗಳನ್ನು ವಾಂಟೆಡ್ ಆರೋಪಿಗಳೆಂದು ಆರೋಪಿಸಲಾಗಿದೆ. ಎಲ್ಲಾ ಆರೋಪಿಗಳ ಮೇಲೆ ಕಠಿಣ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದನ್ನೂಓದಿ: ಉತ್ತರ ಪ್ರದೇಶ| ಶಿಕ್ಷಕಿ ಮತ್ತು ಆಕೆಯ ಪತಿ ಮೇಲೆ ಶಾಲಾ ಪ್ರಾಂಶುಪಾಲರ ತಂಡದಿಂದ ಹಲ್ಲೆ
ಉತ್ತರ ಪ್ರದೇಶ| ಶಿಕ್ಷಕಿ ಮತ್ತು ಆಕೆಯ ಪತಿ ಮೇಲೆ ಶಾಲಾ ಪ್ರಾಂಶುಪಾಲರ ತಂಡದಿಂದ ಹಲ್ಲೆ


