ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಎಎಪಿ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂಬ ನಿಲುವನ್ನು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅಳವಡಿಸಿಕೊಂಡಿದ್ದಾರೆ ಎಂದು ಪಕ್ಷದ ಸಂಸದ ಸಂಜಯ್ ರಾವತ್ ಮಂಗಳವಾರ ಹೇಳಿದ್ದಾರೆ. ಈ ಚುನಾವಣೆಗಳಲ್ಲಿ ಪಕ್ಷವು ತಟಸ್ಥ ನಿಲುವನ್ನು ಅಳವಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. ದೆಹಲಿ ಚುನಾವಣೆ
ಇಂಡಿಯಾ ಮೈತ್ರಿಯ ಸದಸ್ಯರಾದ ಎಎಪಿ ಮತ್ತು ಕಾಂಗ್ರೆಸ್ ಎರಡೂ ಶಿವಸೇನೆಯ (ಯುಬಿಟಿ) ಮಿತ್ರ ಪಕ್ಷಗಳು ಎಂದು ಸಂಜಯ್ ರಾವತ್ ಒತ್ತಿ ಹೇಳಿದ್ದಾರೆ. ದೆಹಲಿ ಚುನಾವಣೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಫೆಬ್ರವರಿ 5 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಎರಡೂ ಪಕ್ಷಗಳಲ್ಲಿ ಯಾವುದಾದರೂ ಒಂದರ ಪರವಾಗಿ ಪ್ರಚಾರ ಮಾಡುತ್ತಾರೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಾವು ಎಲ್ಲಿಯೂ (ಪ್ರಚಾರಕ್ಕಾಗಿ) ಹೋಗುವುದಿಲ್ಲ. ನಾವು ತಟಸ್ಥರಾಗಿದ್ದೇವೆ” ಎಂದು ಹೇಳಿದ್ದಾರೆ.
ದೆಹಲಿ ಚುನಾವಣಾ ಸ್ಪರ್ಧೆಗೆ ಸಮರ ತಂತ್ರಗಳು ರೂಪುಗೊಳ್ಳುತ್ತಿವೆ. ಚುಣಾವಣೆಯಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಟಿಎಂಸಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಬೆಂಬಲವನ್ನು ನೀಡುತ್ತಿವೆ.
ಅದೇ ಸಮಯದಲ್ಲಿ, ಶಿವಸೇನೆಯ ಏಕನಾಥ್ ಶಿಂಧೆ ಬಣವು ಬಿಜೆಪಿಯನ್ನು ಬೆಂಬಲಿಸಿದೆ. ದೆಹಲಿ ಚುನಾವಣೆಯಲ್ಲಿ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ತ್ರಿಕೋನ ಸ್ಪರ್ಧೆ ನಡೆಯಲಿದೆ ಎಂದು ಚುನಾವಣಾ ತಜ್ಞರು ಅಂದಾಜಿಸಿದ್ದಾರೆ. 2020 ರಲ್ಲಿ 70 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆದ್ದಿದ್ದ ಎಎಪಿಯ ಕೇಜ್ರಿವಾಲ್ ಸತತ ಮೂರನೇ ಅವಧಿಗೆ ಅಧಿಕಾರವನ್ನು ಬಯಸುತ್ತಿದ್ದಾರೆ.
ಇದನ್ನೂಓದಿ: ಬಾಬಾ ಸಿದ್ದೀಕಿ ಹತ್ಯೆ ತನಿಖೆ | ಬಿಲ್ಡರ್‌ಗಳು, ರಾಜಕಾರಣಿಗಳನ್ನು ಹೆಸರಿಸಿದ ಪುತ್ರ ಜೀಶನ್
ಬಾಬಾ ಸಿದ್ದೀಕಿ ಹತ್ಯೆ ತನಿಖೆ | ಬಿಲ್ಡರ್‌ಗಳು, ರಾಜಕಾರಣಿಗಳನ್ನು ಹೆಸರಿಸಿದ ಪುತ್ರ ಜೀಶನ್


