ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ (ಜನವರಿ 29, 2025) ಬೆಳಿಗ್ಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ತನ್ನ ಐತಿಹಾಸಿಕ 100ನೇ ರಾಕೆಟ್ ಯಶಸ್ವಿಯಾಗಿ ಉಡಾಯಿಸಿದೆ.
NVS-02 ಉಪಗ್ರಹದೊಂದಿಗೆ GSLV-F15 ಬೆಳಿಗ್ಗೆ 6.23ಕ್ಕೆ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಪ್ಯಾಡ್‌ನಿಂದ ನಭಕ್ಕೆ ಚಿಮ್ಮಿತು ಮತ್ತು 19 ನಿಮಿಷಗಳ ನಂತರ ಉಪಗ್ರಹವನ್ನು ಉದ್ದೇಶಿಸಿದಂತೆ ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಯಲ್ಲಿ ಇರಿಸಿದೆ.
🌍 A view like no other! Watch onboard footage from GSLV-F15 during the launch of NVS-02.
India’s space programme continues to inspire! 🚀 #GSLV #NAVIC #ISRO pic.twitter.com/KrrO3xiH1s
— ISRO (@isro) January 29, 2025
“GSLV-F15 ಮೂಲಕ NVS-02 ಉಪಗ್ರಹವನ್ನು ನಿಖರವಾಗಿ ಉದ್ದೇಶಿತ ಕಕ್ಷೆಗೆ ಸೇರಿಸುವ ಮೂಲಕ ಈ ವರ್ಷದ ಮೊದಲ ಉಡಾವಣೆಯು ಯಶಸ್ವಿಯಾಗಿ ನೆರವೇರಿದೆ ಎಂದು ಇಸ್ರೋದ ಬಾಹ್ಯಾಕಾಶ ಕೇಂದ್ರದಿಂದ ಘೋಷಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಇದು ನಮ್ಮ 100ನೇ ಉಡಾವಣೆಯಾಗಿದೆ. ನಮ್ಮ ಬಾಹ್ಯಾಕಾಶ ಪ್ರಯಾಣದ ಮಹತ್ವದ ಮೈಲಿಗಲ್ಲು” ಎಂದು ಉಪಗ್ರಹ ಉಡಾವಣೆ ಬಳಿಕ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಹೇಳಿದ್ದಾರೆ.
ಇದುವರೆಗಿನ 100 ಉಡಾವಣೆಗಳಲ್ಲಿ ಇಸ್ರೋ 548 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ನಾವು 433 ವಿದೇಶಿ ಉಪಗ್ರಹಗಳಿಗೆ 23 ಟನ್ ಸೇರಿದಂತೆ ಒಟ್ಟು 120 ಟನ್ ಪೇಲೋಡ್ ಅನ್ನು ಕಕ್ಷೆಗೆ ತಲುಪಿಸಿದ್ದೇವೆ ಎಂದು ಈ ತಿಂಗಳ ಆರಂಭದಲ್ಲಿ ಇಸ್ರೋ ಉಸ್ತುವಾರಿ ವಹಿಸಿಕೊಂಡ ಡಾ. ನಾರಾಯಣನ್ ತಿಳಿಸಿದ್ದಾರೆ.
ಇಸ್ರೋ ಪ್ರಕಾರ, ‘NavIC’ ಭಾರತದ ಸ್ವತಂತ್ರ ಪ್ರಾದೇಶಿಕ ಸಂಚರಣೆ ಉಪಗ್ರಹ ವ್ಯವಸ್ಥೆಯಾಗಿದ್ದು, ಭಾರತದ ಭೂ ಪ್ರದೇಶವನ್ನು ಮೀರಿ ಸುಮಾರು 1,500 ಕಿ.ಮೀ. ವಿಸ್ತರಿಸಿರುವ ಪ್ರದೇಶದಲ್ಲಿ ಬಳಕೆದಾರರಿಗೆ ನಿಖರವಾದ ಸ್ಥಾನ, ವೇಗ ಮತ್ತು ಸಮಯ (PVT)ಸೇವೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
NavIC ಎರಡು ರೀತಿಯ ಸೇವೆಗಳನ್ನು ಒದಗಿಸುತ್ತದೆ : ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸರ್ವಿಸ್ (SPS)ಮತ್ತು ನಿರ್ಬಂಧಿತ ಸೇವೆ (RS). NavIC SPS ಪ್ರಾಥಮಿಕ ಸೇವಾ ಪ್ರದೇಶದಲ್ಲಿ 20 ಮೀಟರ್ (2σ) ಗಿಂತ ಉತ್ತಮ ಸ್ಥಾನ ನಿಖರತೆ ಮತ್ತು 40 ನ್ಯಾನೊಸೆಕೆಂಡ್ (2σ) ಗಿಂತ ಉತ್ತಮ ಸಮಯದ ನಿಖರತೆಯನ್ನು ಒದಗಿಸುತ್ತದೆ.
ಎರಡನೇ ತಲೆಮಾರಿನ ಉಪಗ್ರಹಗಳಲ್ಲಿ ಮೊದಲನೆಯದಾದ NVS-01 ಅನ್ನು ಮೇ 29, 2023 ರಂದು GSLV-F12 ನಲ್ಲಿ ಉಡಾವಣೆ ಮಾಡಲಾಗಿತ್ತು. ಮೊದಲ ಬಾರಿಗೆ, NVS-01 ನಲ್ಲಿ ಸ್ಥಳೀಯ ಪರಮಾಣು ಗಡಿಯಾರವನ್ನು ಹಾರಿಸಲಾಗಿತ್ತು.
NVS ಸರಣಿಯ ಎರಡನೇ ಉಪಗ್ರಹವಾದ NVS-02,ಅದರ ಪೂರ್ವವರ್ತಿ-NVS-01 ನಂತೆ C-ಬ್ಯಾಂಡ್‌ನಲ್ಲಿ ರೇಂಜ್ ಪೇಲೋಡ್ ಜೊತೆಗೆ L1, L5 ಮತ್ತು S ಬ್ಯಾಂಡ್‌ಗಳಲ್ಲಿ ನ್ಯಾವಿಗೇಷನ್ ಪೇಲೋಡ್‌ನೊಂದಿಗೆ ಕಾನ್ಫಿಗರ್ ಮಾಡಲಾಗಿದೆ. ಇದನ್ನು IRNSS-1E ಬದಲಿಗೆ 111.75ºE ನಲ್ಲಿ ಇರಿಸಲಾಗುತ್ತದೆ. ನಿಖರವಾದ ಸಮಯ ಅಂದಾಜಿಸಲು NVS-02 ಸ್ಥಳೀಯ ಮತ್ತು ಸಂಗ್ರಹಿಸಿದ ಪರಮಾಣು ಗಡಿಯಾರಗಳ ಸಂಯೋಜನೆಯನ್ನು ಬಳಸಲಿದೆ.
ಈ NVS -02 ಉಪಗ್ರಹವನ್ನು ಯುಆರ್ ಸ್ಯಾಟಲೈಟ್ ಸೆಂಟರ್ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದೆ. ಈ ಉಪಗ್ರಹವು 2,250 ಕೆ.ಜಿ.ಭಾರವಿದೆ ಎಂದು ತಿಳಿದು ಬಂದಿದೆ.
ಸಂಭಾಲ್‌ನ ಜಾಮಾ ಮಸೀದಿ ಬಳಿಯ ‘ಹರಿ ಹರ್ ಮಂದಿರ ಮಾರ್ಗ’ ಎಂಬ ಫಲಕ ತೆಗೆದುಹಾಕಿದ ಪೊಲೀಸರು


