ಮಣಿಪುರದ ಜನಾಂಗೀಯ ಸಮಸ್ಯೆಗಳ ಕುರಿತ ಅತಿರೇಕದ ರಾಜಕೀಯವು ಜನರನ್ನು ಗೊಂದಲಕ್ಕೀಡಾಗಿದ್ದು, ಆಂತರಿಕ ಸಂಘರ್ಷಗಳನ್ನು ಸೃಷ್ಟಿಸಿದೆ ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಗುರುವಾರ ಹೇಳಿದ್ದಾರೆ. ಅಲ್ಲದೆ, ರಾಜಕಾರಣಿಗಳ ಒಂದು ವಿಭಾಗ ರಾಜ್ಯವನ್ನು ಒಡೆಯಲು ಬಯಸುವವರೊಂದಿಗೆ ಕೈಜೋಡಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಮಣಿಪುರವನ್ನು ವಿಭಜಿಸಲು
ತೌಬಲ್ ಜಿಲ್ಲೆಯ ಖಂಗಾಬೋಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿರೇನ್ ಸಿಂಗ್, “ಮೇ 2023 ರಿಂದ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಹಿಂಸಾಚಾರದಿಂದ ರಾಜ್ಯದಲ್ಲಿನ ಪ್ರಸ್ತುತ ಸಮಸ್ಯೆಗಳನ್ನು ಅನೇಕ ಜನರು ಇನ್ನೂ ಅರ್ಥಮಾಡಿಕೊಳ್ಳುತ್ತಿಲ್ಲ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ರಾಜ್ಯ ಸರ್ಕಾರದ ವಿರೋಧ ಇರುವುದು ಮಾದಕವಸ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ಹೊಸ ವಲಸಿಗರೊಂದಿಗೆ ಹೊರತು, ಈ ಹಿಂದೆ ನೆಲೆಸಿದ ಯಾರ ವಿರುದ್ಧವೂ ಅಲ್ಲ ಎಂದು ಅವರು ಹೇಳಿದ್ದಾರೆ.
“ನಿಜವಾದ ವಿರೋಧಿಗಳು ಯಾರು ಮತ್ತು ನಮ್ಮ ಮೇಲೆ ದಾಳಿ ನಡೆಸಿದವರು ಯಾರು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಅರಿತುಕೊಳ್ಳುವುದು ನಮ್ಮ ಕರ್ತವ್ಯ. ನಾವು ಅವರಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ. ಮಣಿಪುರವನ್ನು ವಿಭಜಿಸಲು
“ಆದಾಗ್ಯೂ, ಅತಿರೇಕದ ರಾಜಕೀಯವು ಜನರನ್ನು ಗೊಂದಲಕ್ಕೀಡು ಮಾಡಿದೆ ಮತ್ತು ಆಂತರಿಕ ಸಂಘರ್ಷಗಳನ್ನು ಸೃಷ್ಟಿಸಿದೆ. ಕೆಲವು ರಾಜಕಾರಣಿಗಳು ಸಹ ಮಣಿಪುರವನ್ನು ಒಡೆಯಲು ಬಯಸುವವರೊಂದಿಗೆ ಕೈಜೋಡಿಸಿದ್ದಾರೆ” ಎಂದು ಅವರು ಹೇಳಿದ್ದಾರೆ. ಈ ವೇಳೆ ಅವರು ಯಾವುದೇ ರಾಜಕಾರಣಿ ಅಥವಾ ರಾಜಕೀಯ ಪಕ್ಷದ ಹೆಸರನ್ನು ಹೆಸರಿಸಲಿಲ್ಲ.
“ಮಣಿಪುರವನ್ನು ಒಡೆಯಲು ಬಯಸುವವರು ನಮ್ಮನ್ನು ಕೆರಳಿಸಲು ಏಜೆಂಟರನ್ನು ಬಳಸಿಕೊಂಡಿದ್ದಾರೆ. ಅಂತಹ ಏಜೆಂಟರು ಇಂಫಾಲ್ ಕಣಿವೆಯಲ್ಲಿದ್ದಾರೆ ಮತ್ತು ಮಣಿಪುರವನ್ನು ಒಡೆಯಲು ಬಯಸುವವರ ಜೊತೆ ಇದ್ದಾರೆ. ನಾವು ಅವರ ಬಗ್ಗೆ ಜಾಗರೂಕರಾಗಿರಬೇಕು” ಎಂದು ಸಿಎಂ ಹೇಳಿದ್ದಾರೆ.
“ನಾವೆಲ್ಲರೂ ಒಂದೇ. ಥಡೌ, ಮಾಟೆ, ಗ್ಯಾಂಗ್ಟೆ, ವೈಫೆ, ಪೈಟೆ ಜೊತೆಗೆ ತಂಗ್ಖುಲ್, ಮಾವೋ ಮತ್ತು ಮಾರಮ್ ಎಲ್ಲರೂ ಪರಸ್ಪರ ಸಹೋದರರಾಗಿದ್ದೇವೆ. ಹಿಂದೆ ನೆಲೆಸಿದವರೆಲ್ಲರೂ ಒಟ್ಟಿಗೆ ಇದ್ದಾರೆ. ಮಾದಕವಸ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ಹೊಸ ವಲಸಿಗರಿಗೆ ಮಾತ್ರ ನಮ್ಮ ಜೊತೆಗೆ ವಿರೋಧವಿತ್ತು” ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ವಕ್ಫ್ ತಿದ್ದುಪಡಿ ಮಸೂದೆ : ಲೋಕಸಭೆ ಸ್ಪೀಕರ್‌ಗೆ ವರದಿ ಸಲ್ಲಿಸಿದ ಜಂಟಿ ಸಂಸದೀಯ ಸಮಿತಿ


