ದಲಿತ ಸಂಶೋಧಕರಾದ ಕ್ಷಿಪ್ರಾ ಉಕೆ ಮತ್ತು ಶಿವಶಂಕರ್ ದಾಸ್ ಅವರು ತಮ್ಮ ಸಂಶೋಧನಾ ದತ್ತಾಂಶ ನಷ್ಟದಿಂದ ಅನುಭವಿಸಿದ ಹಾನಿಯ ಪ್ರಮಾಣವನ್ನು ನಿರ್ಣಯಿಸಲು ನಾಗಪುರ ಜಿಲ್ಲಾಧಿಕಾರಿಗೆ ನಿರ್ದೇಶಿಸಿದ ಬಾಂಬೆ ಹೈಕೋರ್ಟ್‌ನ 2023 ರ ಆದೇಶವನ್ನು ಸುಪ್ರೀಂ ಕೋರ್ಟ್ ಕಳೆದ ವಾರ ಎತ್ತಿಹಿಡಿದಿದೆ.
ಈ ಮೂಲಕ, ದಲಿತ ಸಂಶೋಧಕರು ತಮ್ಮ ಸಂಶೋಧನಾ ದತ್ತಾಂಶ ನಷ್ಟಕ್ಕೆ ಪರಿಹಾರ ಪಡೆಯುವ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ
ದಲಿತ ಸಂಶೋಧಕರು ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪಿಎಚ್‌ಡಿ ಪದವಿ ಪಡೆದಿರುವ ಉಕೆ ಮತ್ತು ದಾಸ್ ಇಬ್ಬರೂ ಪರಿಶಿಷ್ಟ ಜಾತಿ ಸಮುದಾಯಗಳ ಸದಸ್ಯರು. ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪಿಎಚ್‌ಡಿ ಪದವಿ ಪಡೆದವರು. ತಮ್ಮ ಸಂಶೋಧನಾ ದತ್ತಾಂಶ ನಷ್ಟಕ್ಕೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದಿಂದ ಪರಿಹಾರವನ್ನು ಪಡೆದಿಲ್ಲ ಎಂದು ಹೇಳಿಕೊಂಡು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ತಾವು ಸಂಶೋಧನಾ ಯೋಜನೆಯಲ್ಲಿ ತೊಡಗಿದ್ದೇವೆ, ನಾಗ್ಪುರದ ವಿವಿಧ ಶೈಕ್ಷಣಿಕ ಕೇಂದ್ರಗಳ ವಿದ್ಯಾರ್ಥಿಗಳ ಸಾಮಾಜಿಕ-ರಾಜಕೀಯ ಜಾಗೃತಿಯ ಕುರಿತು ನಡೆಸಿದ ಸಮೀಕ್ಷೆಯಿಂದ 500 ಮಾದರಿಗಳವರೆಗೆ ಸಂಶೋಧನಾ ದತ್ತಾಂಶವನ್ನು ರಚಿಸಿದ್ದೇವೆ ಎಂದು ಸಂಶೋಧಕರು ಹೈಕೋರ್ಟ್‌ಗೆ ತಿಳಿಸಿದ್ದರು.
ಇಬ್ಬರೂ ನಗರದಿಂದ ಹೊರಗಿರುವಾಗ, ಬೇರೆ ಜಾತಿಗೆ ಸೇರಿದ ತಮ್ಮ ಮನೆಯ ಮಾಲೀಕರ ಮಗ, ಬಜನಗರ ಪೊಲೀಸ್ ಠಾಣೆಯ ಒಪ್ಪಿಗೆಯೊಂದಿಗೆ ನಾವು ವಾಸಿಸುತ್ತಿದ್ದ ಮನೆಯ ಬೀಗಗಳನ್ನು ಮುರಿದು ಲ್ಯಾಪ್‌ಟಾಪ್ ಅನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಹೈಕೋರ್ಟ್ ತನ್ನ ಆದೇಶದಲ್ಲಿ, ಕ್ರಿಮಿನಲ್ ತನಿಖೆಯ ಆರೋಪಪಟ್ಟಿಯನ್ನು ನಾಗ್ಪುರದ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಲಾಗಿದೆ ಎಂಬುದನ್ನು ಗಮನಿಸಿದೆ.
ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ದೂರು ನೀಡಿದ್ದರೂ, ಅದು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ತಮ್ಮ ದೂರಿನ ಕುರಿತು ತನಿಖೆಯನ್ನು ಪ್ರಾರಂಭಿಸಲು ನಿರ್ದೇಶನಗಳನ್ನು ಕೋರಿ ರಿಟ್ ಅರ್ಜಿಯನ್ನು ಸಲ್ಲಿಸಬೇಕಾಯಿತು ಎಂದು ಸಂಶೋಧಕರು ಹೈಕೋರ್ಟ್‌ಗೆ ತಿಳಿಸಿದರು.
ನ್ಯಾಯಾಲಯದ ನಿರ್ದೇಶನದ ನಂತರ ತನಿಖೆಯನ್ನು ಪ್ರಾರಂಭಿಸಿದ ರಾಷ್ಟ್ರೀಯ ಆಯೋಗವು, ದೌರ್ಜನ್ಯ ಕಾಯ್ದೆಯಿಂದ ಒದಗಿಸಲಾದ ದಂಪತಿಗಳ ಬೌದ್ಧಿಕ ಆಸ್ತಿಗೆ ಹಾನಿಯಾದ ಕಾರಣ ನಷ್ಟಕ್ಕೆ ಪರಿಹಾರವನ್ನು ನೀಡಿತು. ಈ ವಿಷಯದಲ್ಲಿ ಕ್ರಮ ಕೈಗೊಳ್ಳಲು ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 3 ಸದಸ್ಯರ ವಿಶೇಷ ತನಿಖಾ ಸಮಿತಿಯನ್ನು ರಚಿಸಿತು.
ದಲಿತರ ವಿರುದ್ಧ ನಡೆದ ಅಪರಾಧ ಮತ್ತು ದೌರ್ಜನ್ಯಕ್ಕೆ ಒಳಪಟ್ಟಿರಬಹುದಾದ ‘ಬೌದ್ಧಿಕ ಆಸ್ತಿ’ಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ 1989 ರ ನಿಬಂಧನೆಗಳ ಅಡಿಯಲ್ಲಿ ಪರಿಹಾರವನ್ನು ನೀಡುವ ಉದ್ದೇಶಕ್ಕಾಗಿ ಆಸ್ತಿಯೆಂದು ಅರ್ಥೈಸಿಕೊಳ್ಳಬಹುದು ಎಂದು ನ್ಯಾಯಮೂರ್ತಿ ವಿನಯ್ ಜೋಶಿ ಮತ್ತು ವಾಲ್ಮೀಕಿ ಸಾ ಮೆನೆಜಸ್ ಅವರನ್ನೊಳಗೊಂಡ ಪೀಠವು ನಾಗ್ಪುರ ಜಿಲ್ಲಾಧಿಕಾರಿಗೆ ಪರಿಹಾರವನ್ನು ನಿರ್ಣಯಿಸಲು ನಿರ್ದೇಶಿಸಿತ್ತು.
ಇದನ್ನೂ ಓದಿ; ಮರ್ಯಾದೆಗೇಡು ಹತ್ಯೆ| ಸಹೋದರ ಮತ್ತು ಆತನ ದಲಿತ ಪತ್ನಿಯನ್ನು ಕೊಂದ ವ್ಯಕ್ತಿಗೆ ಮರಣದಂಡನೆ


